ಪ್ರವಾಹಪೀಡಿತ ವಿವಿಧ ಹಳ್ಳಿಗಳಿಗೆ ಡಿಸಿ ಭೇಟಿ, ಪರಸ್ಥಿತಿ ನಿಯಂತ್ರಣಕ್ಕೆ ಮತ್ತು ನಾನಾ ತಾಲೂಕಾಡಳಿತಗಳು ಸಕಲ ಸಿದ್ಧತೆ….

Spread the love

ಪ್ರವಾಹಪೀಡಿತ ವಿವಿಧ ಹಳ್ಳಿಗಳಿಗೆ ಡಿಸಿ ಭೇಟಿ, ಪರಸ್ಥಿತಿ ನಿಯಂತ್ರಣಕ್ಕೆ ಮತ್ತು ನಾನಾ ತಾಲೂಕಾಡಳಿತಗಳು ಸಕಲ ಸಿದ್ಧತೆ….

ವಿಜಯಪೂರ ಜಿಲ್ಲೆಯಲ್ಲಿ ಮಳೆಯಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ  ಪ್ರವಾಹ ಎದುರಿಸುತ್ತಿರುವ ಬಸವ ನಾಡು ವಿಜಯಪೂರ ಜಿಲ್ಲೆಯ ನಿಡಗುಂದಿ ತಾಲೂಕಿನ ನಾನಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ ವಿಜಯಮಾಂಹಾತೇಶ ಬಿ ದಾನಮ್ಮನವರ ಮತ್ತು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪೂರ ಜಿಲ್ಲೆಯಲ್ಲಿ ಮಳೆ ಸಮರ್ಪಕವಾಗಿಲ್ಲ  .ಆದರೆ, ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗಾರದಿಂದ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತದೆ. ಈ ನೀರು ನಿಡಗುಂದಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಹಲವಾರು ಗ್ರಾಮಗಳಲ್ಲಿ ಪ್ರವಾಹ ಎದುರಿಸುವಂತೆ ಮಾಡಿದೆ.ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗದಧಿಕಾರಿಗಳು ನಿಡಗುಂದಿ ತಾಲೂಕಿನ ಪ್ರವಾಹ ಪೀಡಿತ ಯಲಗೂರ ಗ್ರಾಮದ ನದಿ ಪಾತ್ರದ ಜಾಕವೆಲ್ ಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮಸೂತಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಅವಲೋಕಿಸಿದರು. ನಂತರ ಯಲ್ಲಮ್ಮನ ಬೂದಿಹಾಳ ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಆಯಾ ಗ್ರಾಮಸ್ಥರಿಂದ ಪ್ರವಾಹದ ಕುರಿತು ಮಾಹಿತಿ ಪಡೆದರು ಅಲ್ಲಿದೇ ಅಧಿಕಾರಿಗಳಿಂದಲೂ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿಜಯಮಾಹಾಂತೇಶ ಬಿ ದಾನಮ್ವನವರ, ನಿರಂತರ ಮಳೆ ಮತ್ತು ಅದರಿಂದ ಉಂಟಾಗುವ ಪ್ರವಾಹ ಪರಸ್ಥಿತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ನಾನಾ ತಾಲೂಕಾಡಳಿತಗಳು ಸನ್ನದಾಗಿವೆ ಎಂದು ತಿಳಿಸಿದರು. ಎಲ್ಲಾ ತಹಸೀಲ್ದಾರಗಳು, ಕೃಷಿ. ತೋಟಗಾರಿಕ ,ಪಶುಪಾಲನೆ, ರೇಷ್ಮೆ , ಹೆಸ್ಕಾಂ, ಲೋಕೋಪಯೋಗಿ ಸೇರಿದಂತೆ ಪ್ರಮುಖ ಇಲಾಕಖಾಧಿಕಾರಿಗಳ  ಮುನ್ನೆಚ್ಚರಿಕೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳ ನೀಡಲಾಗಿದೆ.  ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿರುವುದರಿಂದ ಈಗ 75 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತದೆ. ಜಿಲ್ಲೆಯ ಕೋಲ್ಹಾರ ,ನಿಡಗುಂದಿ ಮತ್ತು ಮುದ್ದೇಬಿಹಾಳ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಡಂಗೂರ ಸಾರಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಒಟ್ಟು ತಾಲೂಕುಗಳ ವ್ಯಾಪ್ತಿಯಲ್ಲಿ ಭೀಮಾ,ಧೋಣಿ, ಕೃಷ್ಣಾನದಿಗಳು ಹರಿಯುತ್ತವೆ. ಆಲಮಟ್ಟಿ, ನಾರಾಯಣಪುರ ಮತ್ತು ಮಹಾರಾಷ್ಟ್ರದ ಉಜನಿ ಜಲಾಶಯಗಳ ಒಳ-ಹೊರ ಹರಿವು ಮೇಲೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೇಡಲಾಗಿದೆ.   ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಊಜನಿ ಜಲಾಶಯದಿಂದ  ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ಅಧೀಕ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಚಡಚಣ ತಾಲೂಕಿನ 19, ಇಂಡಿ ತಾಲೂಕಿನ 11 ಸಿಂದಗಿ ತಾಲೂಕಿನ 12 ಗ್ರಾಮಗಳು ಜಲಾವೃತವಾಗಲಿವೆ ಎಂದು ಅವರು ತಿಳಿಸಿದರು.

 ವರದಿ~ಮೌನೇಶ್ ರಾಥೋಡ್ ವಿಜಯಪುರ.

Leave a Reply

Your email address will not be published. Required fields are marked *