ತಾವರಗೇರಾ ಪಟ್ಟಣದ ಕರುಣಸಾಗರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕೊಪ್ಪಳದ ಗವಿಮಠದ ಕಟ್ಟಡ ನಿರ್ಮಾಣಕ್ಕೆ 51 ಸಾವಿರ ಒಂದು ರುಪಾಯಿಗಳ ದೇಣಿಗೆ…..

Spread the love

ತಾವರಗೇರಾ ಪಟ್ಟಣದ ಕರುಣಸಾಗರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕೊಪ್ಪಳದ ಗವಿಮಠದ ಕಟ್ಟಡ ನಿರ್ಮಾಣಕ್ಕೆ 51 ಸಾವಿರ ಒಂದು ರುಪಾಯಿಗಳ ದೇಣಿಗೆ…..

ಕೊಪ್ಪಳದ ಗವಿಮಠಕ್ಕೆ ದೇಣಿಗೆಯ ಮಹಾಪೂರವೇ ಹರಿದುಬರುವಂತೆ ಮಾಡಿದೆ.. ಹೌದು, ತುಮಕೂರಿನ ಸಿದ್ದಗಂಗಾ ಮಠದಂತೆ ಕೊಪ್ಪಳದ ಗವಿಮಠದಲ್ಲಿ 5000 ಬಡ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯದ ನಿರ್ಮಾಣಕ್ಕಾಗಿ ಮೂರು ದಿನಗಳ ಹಿಂದೆ ಶಂಕುಸ್ಥಾಪನೆ ಮಾಡಲಾಯಿತು‌‌.. ಈ ವೇಳೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾವುಕರಾಗಿದ್ದರು.. ಸ್ವಾಮೀಜಿಗಳ ಕಣ್ಣೀರಿಗೆ ಕರಗಿರುವ ಮಠದ ಭಕ್ತರು ಅಭಿಯಾನ ಮಾದರಿಯಲ್ಲಿ ದೇಣಿಗೆ ನೀಡುತ್ತಿದ್ದಾರೆ.‌ ಗವಿಮಠದ ಅದ್ಭುತ ಕಾರ್ಯಕ್ಕೆ ದೇಣಿಗೆ ನೀಡಲು ಈಗ ಅಭಿಯಾನವೇ ಶುರುವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಗವಿಶ್ರೀ ಅವರ ನಿಸ್ವಾರ್ಥ ಸೇವೆಗೆ ವ್ಯಾಪಕ ಬೆಂಬಲ ಸೂಚಿಸುತ್ತಿದ್ದಾರೆ‌‌. ಈ ಹಿನ್ನೆಲೆ ಮಠಕ್ಕೆ ಕೋಟಿ.. ಕೋಟಿ ಲೆಕ್ಕದಲ್ಲಿ ದೇಣಿಗೆ ಹರಿದುಬರುತ್ತಿದೆ.. ಮೊದಲಿನಿಂದ ಗವಿಮಠದಲ್ಲಿ ಉಚಿತ ಪ್ರಸಾದ ನಿಲಯವಿತ್ತು. 160 ವಿದ್ಯಾರ್ಥಿಗಳಿಂದ ಶುರುವಾದ ಉಚಿತ ಪ್ರಸಾದ ನಿಲಯದಲ್ಲಿ ಈ ವರ್ಷ ಒಟ್ಟು 3500 ವಿದ್ಯಾರ್ಥಿಗಳಿದ್ದಾರೆ. ಉತ್ತರ ಕರ್ನಾಟಕ ಭಾಗದ ಇನ್ನೂ ಸಾಕಷ್ಟು ಪ್ರಸಾದ ನಿಲಯದಲ್ಲಿ ಇರಲು ಬಯಸಿದ್ದಾರೆ. ಈಗಿರುವ 2000 ವಿದ್ಯಾರ್ಥಿಗಳಿಗೆ ವಸತಿ ನಿಲಯ ಸಾಲದೇ ಗೋಡೌನ್ ಸೇರಿ ವಿವಿಧೆಡೆ ವಸತಿ ಕಲ್ಪಿಸಲಾಗಿದೆ.. ತಾವರಗೇರಾ ಪಟ್ಟಣದ ಕರುಣಸಾಗರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕೊಪ್ಪಳದ ಗವಿಮಠದ ಕಟ್ಟಡ  ನಿರ್ಮಾಣಕ್ಕೆ 51 ಸಾವಿರ ಒಂದು ರುಪಾಯಿಗಳ ದೇಣಿಗೆ. ನೀಡಿರುವುದು ವಿಶೇಷವಾಗಿದ್ದು. ನಮ್ಮ ಸಂಸ್ಥೆಯ ಅಧ್ಯಕ್ಷ ಶ್ರೀ ಅಮರೇಶ ಗಾಂಜಿ ಉಪಾಧ್ಯಕ್ಷ ಶ್ರೀ ಲೋಹಿತ್ ಗೌಡ ದುರಗೇಶ ನಾರಿನಾಳ ವೀರೇಶ್ ತಾಳಿಕೋಟಿ ಅಮರೇಗೌಡ ವಾಸುದೇವ ಗುಡಸಲಿ ರವಿ ಹಾನಗಲ್ಲ ಶಿವಪ್ಪ ಹಾಗೂ ಹಿರಿಯರಾದ ಸಂಗಪ್ಪ ಗಡಗಿ ಮತ್ತು ‌ಸಂಸ್ಥೆಯ ಸದಸ್ಯರು ವ್ಯವಸ್ಥಾಪಕರಾದ ಶ್ಯಾಮೂತಿ೯ ಇದ್ದರು.

ವರದಿ – ಉಪ್ಪಳೇಶ ನರಿನಾಳ

Leave a Reply

Your email address will not be published. Required fields are marked *