ಕಂಪ್ಲಿಯಲ್ಲಿ ಬಿಇಓ ಕಚೇರಿ ಸ್ಥಾಪಿಸುವಂತೆ ಸರ್ಕಾರದ ಪಿಎಸ್ ಗೆ ಮೋಹನ್ ಕುಮಾರ್ ದಾನಪ್ಪರಿಂದ ಮನವಿ…..
ಬೆಂಗಳೂರು, ಜೂಲೈ: 13 ರಂದು ಬೆಂಗಳೂರಿನ ಬಹುಮಹಡಿಗಳ ಕಟ್ಟಡದಲ್ಲಿ ಬಳ್ಳಾರಿ ಜಿಲ್ಲೆಯ ನೂತನ ಕಂಪ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಚೇರಿಯನ್ನ ಸ್ಥಾಪಿಸುವಂತೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್, ಐಎಎಸ್ ರವರಿಗೆ ಕಂಪ್ಲಿ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಮನವಿ ಸಲ್ಲಿಸಿದರು ನಂತರ ಮಾತಾನಾಡಿದ ವಕೀಲ ಮೋಹನ್ ಕುಮಾರ್ ದಾನಪ್ಪನವರು ಕಂಪ್ಲಿಯು 1859 ರಿಂದ 2017 ರವರವರೆಗೆ ಹೊಸಪೇಟೆ ತಾಲೂಕು ವ್ಯಾಪ್ತಿಯ ಹೋಬಳಿಯಾಗಿ ಕಾರ್ಯನಿರ್ವಹಿಸಿದ್ದು 2017 ರಲ್ಲಿ ನೂತನ ತಾಲೂಕು ಕೇಂದ್ರವಾಗಿರುತ್ತದೆ, ತಾಲೂಕಾಗಿದ್ದರು ನ್ಯಾಯಾಲಯ , ಕಂದಾಯ ವಿಭಾಗ ಕಛೇರಿ, ಪ್ರಾದೇಶಿಕ ಸಾರಿಗೆ ಕಛೇರಿ, ಮಾರ್ಕೇಟಿಂಗ್, ಬಿಇಓ ಕಛೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಛೇರಿಯು ಹಾಗೂ ಸರ್ಕಾರದ ಅನೇಕ ತಾಲೂಕು ಕಛೇರಿಗಳು, ಶಿಕ್ಷಣ ಸಂಸ್ಥೆಗಳು, ಹೊಸಪೇಟೆಯಲ್ಲಿಯೇ ಇದ್ದು ಎಂದಿನಂತೆ ಕೆಲಸ ಕಾರ್ಯಗಳಿಗೆ ಹೊಸಪೇಟೆಯನ್ನೇ ಅವಲಂಬಿಸಿರುತ್ತಾರೆ. ಆದರೆ 2017 ರಲ್ಲಿ ನೂತನ ತಾಲೂಕು ಕೇಂದ್ರವಾದ ಕಂಪ್ಲಿ ನಗರದಲ್ಲಿ ಪ್ರಸ್ತುತದವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಸ್ಥಾಪಿಸಿರುವುದಿಲ್ಲಾ ಆದ್ದರಿಂದ ವಿದ್ಯಾರ್ಥಿಗಳು ನಾನಾ ಪ್ರಮಾಣ ಪತ್ರಗಳನ್ನು ಪಡೆಯಲು ಹಾಗೂ ಶಿಕ್ಷಕರು, ಸಿಆರ್‌ಪಿ, ಬಿಆರ್‌ಪಿಗಳು ಕಛೇರಿ ಕೆಲಸಕ್ಕಾಗಿ ಇಂದಿಗೂ ಬಳ್ಳಾರಿಯಿಂದ ವಿಭಜಿತ ವಿಜಯನಗರ ಜಿಲ್ಲೆಯ ಹೊಸಪೇಟೆ ಕಛೇರಿಗೆ ಸಂಚರಿಸಬೇಕಾದ ದುಸ್ಥಿತಿಯಿರುತ್ತದೆ,
ಆದ್ದರಿಂದ ಕೂಡಲೇ ನೂತನ ತಾಲೂಕು ಕೇಂದ್ರವಾದ ಕಂಪ್ಲಿ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಬೇಕು, ಕಛೇರಿ ಸ್ಥಾಪನೆಗೆ ಸರ್ಕಾರಿ ಸ್ಥಳ, ಸರ್ಕಾರಿ ಕಟ್ಟಡಗಳು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಕಟ್ಟಡವನ್ನು ಬಾಡಿಗೆ ರೀತಿ ಪಡೆದುಕೊಂಡು ಕಛೇರಿ ಸ್ಥಾಪಿಸಬೇಕು, ಇತರೆ ಕಾರಣಗಳನ್ನು ವ್ಯಕ್ತಪಡಿಸಿ ಪಕ್ಕದ ಕುರುಗೋಡು ತಾಲೂಕಿಗೆ ಅಥವಾ ಬಳ್ಳಾರಿ ಹಾಗೂ ಇತರೆ ಯಾವುದೇ ತಾಲೂಕಿಗೆ ಬಿಇಓ ಕಛೇರಿಯನ್ನು ಹೊಂದಿಸುವುದಾಗಲೀ, ಸೇರ್ಪಡೆಗೊಳಿಸುವ ಕ್ರಮ ಕೈಗೊಳ್ಳಬಾರದು. ಕಂಪ್ಲಿ ತಾಲೂಕಿನಲ್ಲಿ ಬಿಇಓ ಕಛೇರಿ ಸ್ಥಾಪಿಸಲು ತಾಂತ್ರಿಕ ತೊಂದರೆಗಳಿದ್ದಲ್ಲಿ ಕಂಪ್ಲಿ ತಾಲೂಕಿನಲ್ಲಿ ಕಛೇರಿ ಸ್ಥಾಪಿಸುವವರೆಗೂ ಹೊಸಪೇಟೆಯಲ್ಲಿಯೇ ಮುಂದುವರೆಸಬೇಕು ಕಾರಣ ಹೊಸಪೇಟೆಯು ಕಂಪ್ಲಿ ತಾಲೂಕಿನಿಂದ ಕೇವಲ 28 ಕೀಲೋ ಮೀಟರ್ ಸಮೀಪವಿದ್ದು ಕೇವಲ 30 ನಿಮಿಷಗಳಲ್ಲಿ ಸಂಚರಿಸುವ ಸಂಚಾರ ವ್ಯವಸ್ಥೆ ತುಂಬಾ ಅತ್ಯುತ್ತಮವಾಗಿದ್ದು ದಿನದ 24 ಗಂಟೆಯು ಸಂಚರಿಸಲು ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ತುಂಬಾ ಅನುಕೂಲವಿದ್ದು ಈ ಭಾಗದ ಜನರಿಗೆ ಸರ್ಕಾರಿ ಸೇವೆ ಪಡೆಯಲು ಯಾವುದೇ ಹೊರೆಯಾಗುತ್ತಿರುವುದಿಲ್ಲಾ, ಕಂಪ್ಲಿ ತಾಲೂಕು ಹೊರತು ಪಡಿಸಿ ಕುರುಗೋಡು ತಾಲೂಕು ಅಥವಾ ಇತರೆ ಬೇರೆ ತಾಲೂಕಿನೊಂದಿಗೆ ಹೊಂದಿಸಿದರೆ / ಸೇರ್ಪಡಿಸಿದರೆ ಕಂಪ್ಲಿ ತಾಲೂಕಿನ ಕೊನೆಯ ಗ್ರಾಮದಿಂದ 65 ರಿಂದ 70 ಕೀಲೋ ಮೀಟರ್‌ಗೂ ಅಧಿಕ ದೂರವಾಗುವುದಲ್ಲದೆ ಸಾರ್ವಜನಿಕರಿಗೆ ಆರ್ಥಿಕ ಹೊರೆಯೊಂದಿಗೆ ಸಮಯ ವ್ಯರ್ಥವಾಗುತ್ತದೆ ಹಾಗೂ ಈ ತಾಲೂಕಿನ ಜನರಿಗೆ ಅನ್ಯಾಯವಾಗುತ್ತದೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವ ಕುಮಾರ್ ರವರಿಗೆ ವಕೀಲ ಮೋಹನ್ ಕುಮಾರ್ ದಾನಪ್ಪನವರು ಮನವರಿಕೆ ಮಾಡಿ ಮನವಿ ಸಲ್ಲಿಸಿದರು!
ವರದಿ– ಮಹೇಶ ಶರ್ಮಾ