ತಾವರಗೇರಾ ಪರಿಶಿಷ್ಟ ಬಾಲಕರ ಹಾಸ್ಟೆಲ್ ನಲ್ಲಿ ಕಳಪೆ ಆಹಾರ. ಅಡುಗೆ ಹೋರಗಡೆ ಇಟ್ಟು ಅಳಲು ತೊಡಿಕೊಂಡ ಬಾಲಕರು,,,,,

Spread the love

ತಾವರಗೇರಾ ಪರಿಶಿಷ್ಟ ಬಾಲಕರ ಹಾಸ್ಟೆಲ್ ನಲ್ಲಿ ಕಳಪೆ ಆಹಾರ. ಅಡುಗೆ ಹೋರಗಡೆ ಇಟ್ಟು ಅಳಲು ತೊಡಿಕೊಂಡ ಬಾಲಕರು,,,,,

ತಾವರಗೇರ ಪರಿಶಿಷ್ಟ ಬಾಲಕರ ಹಾಸ್ಟೆಲ್ ನಲ್ಲಿ ಕಳಪೆ ಆಹಾರ ತಯಾರಿಸಿದ ಅಡುಗೆ ಸಹಾಯಕರು. ಅಡುಗೆ ಹೋರಗಡೆ ಇಟ್ಟು ಅಳಲು ತೊಡಿಕೊಂಡ ಬಾಲಕರು. ತಾವರಗೇರ ಪಟ್ಟಣದಲ್ಲಿರುವ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಮಕ್ಕಳ ಸಮಸ್ಯೆ ಕೆಳೋರಾರು. ಇಂದು ಬೆಳಗ್ಗೆ ಸರಿಯಾಗಿ ತಿಂಡಿ ಉಪಾಹಾರ ತಯಾರಿಸಿದೆ ಕಳಪೆ ಮಟ್ಟದಲ್ಲಿ ಉಪ್ಪಿಟ್ಟು ಮಾಡಿದ್ದಾರೆ. ತಿನ್ನಲು ಆಗುತ್ತಿಲ್ಲ. ಸರಿಯಾಗಿ ಬೆಯಿಸಿರುವದಿಲ್ಲ. ಅಡುಗೆಗೆ ಸರಿಯಾದ ತರಕಾರಿ ಬೆಳೆ ಕೂಡ ಹಾಕುತ್ತಿಲ್ಲ. ಇವತ್ತಿನ ಉಪ್ಪಿಟ್ಟು ರವದಂತೆ ಹಾಗೆ ಇದೆ. ದಿನಾಲೂ ಬೇಕಾ ಬಿಟ್ಟಿಯಾಗಿ ಅಡುಗೆ ತಯಾರಿಸುತ್ತಾರೆ.ಇದನ್ನು ಹೇಗೆ ತಿನ್ನಬೇಕು ಎಂದು ಅಡುಗೆ ಸಹಾಯಕರಾದ ಸುರೇಶರವರನ್ನು ನಾವೇನಾದರೂ ಕೆಳಲೂ ಹೋದರೆ ನಮ್ಮ ಮೇಲೆ ದೌರ್ಜನ್ಯ ಮಾಡಲು ಬರುತ್ತಾರೆ. ನಾವೇನು ಮಾಡಬೇಕು  ದಿನಾಲೂ ಇದೆ ಹಾಗಿ ಹೋಗಿದೆ. ವಾರಕ್ಕೆ ಎರಡು ದಿನ ಬರುತ್ತಾರೆ. ಸುಮಾರು 50 ಬಾಲಕರಿದ್ದಿವಿ. ಸರಕಾರ ಕೊಟ್ಟಿರುವ ಹಣದಲ್ಲಿ ತಂದು ಅಡುಗೆ ಮಾಡಿ ಎಂದರೆ. ತಮ್ಮ ಮನೆಯಿಂದ ತಂದು ಮಾಡುವವರಂತೆ ವರ್ತನೆ ಮಾಡ್ತಾರೆ. ಚೆನ್ನಾಗಿ ಅಡುಗೆ ಮಾಡಿ ಎಂದರೆ ನಿಮ್ಮ ಮನೆಯಲ್ಲಿ ಚೆನ್ನಾಗಿ ಮಾಡ್ತಾರಾ ನಿಮ್ಮ ಮನೆಯವರನ್ನು ಕರೆ ತಂದು ಅಡುಗೆ ಮಾಡಿಸಿಕೊಳ್ಳಿ ಎಂದು ಬೇಜವಬ್ದಾರಿತನದಿಂದ ಬಾಲಕರನ್ನು ಬೆದರಿಸಿತ್ತಾರೆ. ಕೆಲವು ವಿದ್ಯಾರ್ಥಿಗಳು ಉಪಹಾರ ಸೆವಿಸದೆ ಹಾಗೆ ಕಾಲೇಜಿಗೆ ಹೊಗಿದ್ದಾರೆ. ಎಂದು ಬಾಲಕರು ತಿಳಿಸಿದ್ದಾರೆ. ಹಾಗಾಗಿ ಮೇಲಧಿಕಾರಿಗಳು ಜನಪ್ರತಿನಿಧಿಗಳು ಹೆಚ್ಚೆತ್ತು ಕೂಡಲೇ ಮಕ್ಕಳನ್ನು ಬೆದರಿಸುತ್ತಿರುವ ಅಡುಗೆ ಸಹಾಯಕರಾದ ಸುರೇಶ ಅವರ ಮೇಲೆ ಕ್ರಮ ಜರುಗಿಸಬೇಕು. ಹಾಗೆ ನಮಗೆ ಗುಣಮಟ್ಟದ ಆಹಾರ ನಿಡಬೇಕಾಗಿದೆ. ಎಂದು ಹಾಸ್ಟೇಲ್ ನ ವಿಧ್ಯಾರ್ಥಿಗಳ ಅಳಲು ತೊಡಿಕೊಂಡರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *