ಚಿತ್ರದುರ್ಗ ಜಿಲ್ಲೆ  ಭರಮಸಾಗರದಲ್ಲಿ ಕರ್ನಾಟಕ  ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಮತ್ತು ಕರ್ನಾಟಕ  ಶಾಂತಿ & ಸೌಹಾರ್ದ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿ,,,,,

Spread the love

ಚಿತ್ರದುರ್ಗ ಜಿಲ್ಲೆ  ಭರಮಸಾಗರದಲ್ಲಿ ಕರ್ನಾಟಕ  ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಮತ್ತು ಕರ್ನಾಟಕ  ಶಾಂತಿ & ಸೌಹಾರ್ದ ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿ,,,,,

ಚಿತ್ರದುರ್ಗ  ಜಿಲ್ಲೆ  ಭರಮಸಾಗರದಲ್ಲಿ ಕರ್ನಾಟಕ  ಬಂಜಾರ ಜನಜಾಗೃತಿ  ಅಭಿಯಾನ  ಸಮಿತಿ ಮತ್ತು  ಕರ್ನಾಟಕ  ಶಾಂತಿ & ಸೌಹಾರ್ದ  ವೇದಿಕೆವತಿಯಿಂದ    ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ರ್ಯಾಲಿಯು ಯಶಸ್ವಿಯಾಗಿ ಜರುಗಿದೆ. ಅರಣ್ಯ  ಮತ್ತು  ಬಗರ್ ಹುಕುಂ ಸಾಗುವಳಿ  ಭೂಮಿಗೆ ಹಕ್ಕು  ಪತ್ರ ನೀಡಬೇಕೆಂದು  ಆಗ್ರಹಿಸಿ ಪ್ರತಿಭಟನೆ  ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ಕ್ರಮದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ  ಶಾಂತಿ & ಸೌಹಾರ್ದ  ವೇದಿಕೆ ಅಧ್ಯಕ್ಷರಾದ ನರೇನಹಳ್ಳಿ  ಅರುಣ್ ಕುಮಾರ್  ಅವರು  ಕಳೆದ 30-40 ವರ್ಷಗಳಿಂದ ಭೂಮಿ ಉಳುಮೆ  ಮಾಡಿಕೊಂಡು  ಬಂದಿರುವ ರೃತರು,ಕೂಲಿ ಕಾರ್ಮಿಕರು ಸರ್ಕಾರದ ನೀತಿಯಿಂದಾಗಿ ಕಂಗಾಲಾಗಿದ್ದಾರೆಂದು ಹೇಳಿದರು. ಭರಮಸಾಗರ ಸೇರಿ ಸುತ್ತಮುತ್ತಲಿನ ಗ್ರಾಮಗಳಾದ ಬೇವಿನಹಳ್ಳಿ, ಪಂಜಯ್ಯನಹಟ್ಟಿ, ಮ್ಮನಗಟ್ಟ ಇಸಾಮುದ್ರ,ಗೊಲ್ಲರಹಟ್ಟಿ ಹಾಗೂ ಇತರೆ ಗ್ರಾಮದ ಗ್ರಾಮಸ್ಥರು ಕೂಡ ಪ್ರತಿಭಟನೆಯಲ್ಲಿ ಭಾಗವಹಿ ಮನವಿಮಾಡಿದರು ಕರ್ನಾಟಕ  ಬಂಜಾರ ಜನಜಾಗೃತಿ  ಅಭಿಯಾನ  ಸಮಿತಿಯ ಪ್ರಧಾನ ಕಾರ್ಯದರ್ಶಿ  ಆರ್. ನಿಂಗಾನಾಯ್ಕ ಅವರು ಮಾತನಾಡಿ ಬಗರ್ ಹುಕುಂ ಸಾಗುವಳಿದಾರರು ಹಲವು ವರ್ಷಗಳಿಂದ ಭೂಮಿಯನ್ನು  ಉಳುಮೆ ಮಾಡಿಕೊಂಡು  ಬಂದಿದ್ಫು ಆಯಾಯ ರೃತರ ಹೆಸರಿನಲ್ಲಿ  ಭೂಮಿಯ ಹಕ್ಕು ಪತ್ರ ನೀಡಬೇಕಿತ್ತು ಅದರೆ  ಸರ್ಕಾರ  ಮೀನಾಮೇಷ ಅನುಸರಿಸುತ್ತಾರೆ  ಎಂದು ದೂರಿದರು. ಪ್ರತಿಭಟನೆತಲ್ಲಿ  ಕುಬೇರನಾಯ್ಕ,ಗ್ರಾಮ ಪಂ ಚಾಯಿತಿ ಮಾಜಿ ಅಧ್ಯಕ್ಷ ಸಂತೋಷ , ಬಸವರಾಜುನಾಯ್ಕ,ಪಂಜಯ್ಯನಹಟ್ಟಿ,ಲಕ್ಷ್ಮಣ್ .ಅಣ್ಣಪ್ಪ ನಂದಿಹಳ್ಳಿ, ಸುಲ್ತಾನಿಪುರಪೀರಸಾಬ್,ಮುಂತಾದವರು ಹಾಜರಿದ್ದರು.

ವರದಿ~ಮೌನೇಶ್ ರಾಥೋಡ್  ಚಿತ್ರದುರ್ಗ

Leave a Reply

Your email address will not be published. Required fields are marked *