ಕುಡಿಯುವ ನೀರಿಗಾಗಿ ಎಮ್ಮೆ ಹಾಗೂ ಮಹಿಳೆಯರೊಂದಿಗೆ ಕರವೇ ಪ್ರತಿಭಟನೆ.  

Spread the love

ಕುಡಿಯುವ ನೀರಿಗಾಗಿ ಎಮ್ಮೆ ಹಾಗೂ ಮಹಿಳೆಯರೊಂದಿಗೆ ಕರವೇ ಪ್ರತಿಭಟನೆ.      

ಕುಡಿಯುವ ನೀರು ಎಂಟತ್ತು ದಿವಸಕ್ಕೆ ಒಮ್ಮೆ ಸರಬರಾಜು ಆಗುತ್ತಿರುವುದರಿಂದ ಹಲವಾರು ಬಾರಿ ಹೋರಾಟಗಳನ್ನು ಮಾಡಿ  ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ. ನಯೀಮ್ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಎಮ್ಮೆ  ಮೇಲೆ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಧಿಕ್ಕಾರ ಎಂಬ ನಾಮಫಲಕವನ್ನು ಬರೆದು ಮಹಿಳೆಯರೊಂದಿಗೆ ಪಟ್ಟಣದ  ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡುವುದರ ಮೂಲಕ ಪುರಸಭೆಗೆ ಮುತ್ತಿಗೆ ಹಾಕಿದರು. ಎಲ್ಲಾ ಪ್ರತಿಭಟನಾಕಾರರು ಪುರಸಭೆಯ ಮುಂದೆ ಪ್ರತಿಭಟನಾಕಾರರು  ಆಗಮಿಸಿದಾಗ ಯಾವುದೇ ಅಧಿಕಾರಿಗಳಾಗಲಿ, ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಅಹವಾಲನ್ನು ಕೇಳಲು ಬರದೆ ಇರುವ ಕಾರಣ ಪ್ರತಿಭಟನಾಕಾರರು ಆಕ್ರೋಶಗೊಂಡು ಪುರಸಭೆಯ ಪ್ರಮುಖ ದ್ವಾರದ ಮುಂದೆ ಕುಳಿತು ಪ್ರತಿಭಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಸ್.ಎ.ನಯೀಮ್ ಈ ಹೋರಾಟದಲ್ಲಿ ಇವತ್ತು ನಮ್ಮ ಅಕ್ಕ ತಂಗಿಯರು ಭತ್ತ, ರಾಗಿ,ಕಬ್ಬು, ಬೆಳೆಯುವ ಸಲುವಾಗಿ ನೀರು ಕೇಳತ್ತಾ ಇಲ್ಲಾ ಕುಡಿಯುವ  ಸಲುವಾಗಿ ನೀರು ಕೇಳುತ್ತಿದ್ದಾರೆ  ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಹಾಗೂ ಕತ್ತೆಗಳ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್, ಖಾದ್ರಿ ಸಾಬು ಹುಸೇನ್, ಮಹಾಂತೇಶ್ ಚೆಟ್ಟರ್, ಮಜೀದ್,  ಜಮಾಲ್ ಸಾಬ್, ರಹೆಮಾನ್ ದೂಲಾ,  ನಾಗರಾಜ ನಾಯಕ, ಇಸ್ಮಾಯಿಲ್, ಇಸ್ಮಾಯಿಲ್ ಬಳಿಗಾರ, ಗ್ಯಾನಪ್ಪ, ಸಂಗಪ್ಪ ಹೂನುರ, ಬಾಲಪ್ಪ ನಾಗರಾಳ, ದೊಡ್ಡಪ್ಪ, ದಾವಲ ಸಾಬ, ಅವೇಸ,ಸಾಬೀರ,ದಾವಲ ಸಾಬ ಹಲ್ಕಾವಟಗಿ, ರಜಿಯಾ,ಬಸ್ಸಮ್ಮ, ಶಹೆಜಾದಿ ಉಪಸ್ಥಿತರಿದ್ದರು.

ವರದಿ – ಮೌನೇಶ್ ರಾಥೋಡ್

Leave a Reply

Your email address will not be published. Required fields are marked *