ಮಾದರಿ ಕಾಮಗಾರಿ ಮಾಡಿ: ಜಯರಾಂ ಚೌವ್ಹಾಣ್.
ಕನಕಗಿರಿ:ಎಲ್ ಡಬ್ಲ್ಯೂ ಎಂ ಕಾಮಗಾರಿ ಉತ್ತಮ ಗುಣಮಟ್ಟದಲ್ಲಿ ಮಾಡುತ್ತಿದ್ದು ಮಾದರಿ ಕಾಮಗಾರಿ ಮಾಡಿ ಎಂದು ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜಯರಾಂ ಚೌವ್ಹಾಣ್ ಹೇಳಿದರು. ಅವರು ತಾಲೂಕಿನ ಚಿಕ್ಕ ಡಂಕನಕಲ್ ಹಾಗೂ ಜೀರಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಎಲ್ ಡಬ್ಲ್ಯೂ ಎಂ ಯೋಜನೆಯಡಿ ಪ್ರಗತಿ ಹಂತದಲ್ಲಿ ಇರುವ ಕಾಮಗಾರಿ ಗಳನ್ನು ವೀಕ್ಷಣೆ ಮಾಡಿ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಚಿರ್ಚನಗುಡ್ಡ ಗ್ರಾಮದಲ್ಲಿ ಎನ್ ಆರ್ ಎಲ್ ಎಂ ಯೋಜನೆಯಡಿ ನಿರ್ಮಿಸಿರುವ ಸಂಜೀವಿನಿ ನರ್ಸರಿ ಫಾರ್ಮ್ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಕಾವ್ಯ ರಾಣಿ ಕೆ.ವಿ.ಎಸ್ ಎಲ್ ಡಬ್ಲ್ಯೂ ಎಂ ಜಿಲ್ಲಾ ಸಮಾಲೋಚಕ ಶಿವಕುಮಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ,ತಾಂತ್ರಿಕ ಸಂಯೋಜಕ ತನ್ವೀರ್ ಐ ಇ ಸಿ ಸಂಯೋಜಕ ಚಂದ್ರಶೇಖರ ಜಿ ತಾಂತ್ರಿಕ ಸಹಾಯಕರಾದ ಗುರುರಾಜ್ ,ಯೋಗೇಶ್, ಮಂಜುನಾಥ್, ರಮೇಶ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು. ಫೋಟೋ ಕನಕಗಿರಿ: ತಾಲೂಕಿನ ಚಿಕ್ಕ ಡಂಕನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿರ್ಚನ ಗುಡ್ಡ ಗ್ರಾಮದ ನರ್ಸರಿ ಫಾರ್ಮ್ ಹೌಸ್ ನ್ನು ವೀಕ್ಷಣೆ ಮಾಡಲಾಯಿತು.
ವರದಿ – ಆದಪ್ಪ ಮಾಲಿ ಪಾಟೀಲ್