ತಾವರಗೇರಾ ಪಟ್ಟಣ ಪಂಚಾಯತಿಯ ಡೇ – ನಲ್ಡ್ ಯೋಜನೆಯಡಿಯಲ್ಲಿ ಸದಸ್ಯರಿಗೆ 2 ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರ ಜರುಗಿತು.
ಕರ್ನಾಟಕ ಸರ್ಕಾರ ಕೌಶಾಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ , ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಪಟ್ಟಣ ಪಂಚಾಯತ ತಾವರಗೇರಾ ಸಹಯೋಗದಲ್ಲಿ ದಿನದಯಾಳ್ ಅಂತ್ಯೋದಯ ಯೋಜನೆ ನಗರ ಜೀವನೋಪಾಯ ಅಭಿಯಾನದಡಿ- ನಗರದ ಬೀದಿ ಬದಿ / ವ್ಯಾಪಾರಿಗಳಿಗೆ ಅಧಿನಿಯಮ ಮತ್ತು ಯೋಜನೆಗಳ ಬಗ್ಗೆ ತರಬೇತಿ ಕಾರ್ಯಾಗಾರ ದಿನಾಂಕ : 14-07-2022 ಸ್ಥಳ : ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪ ತಾವರಗೇರಾದಲ್ಲಿ, ಪಟ್ಟಣ ಪಂಚಾಯತಿಯ ಡೇ – ನಲ್ಡ್ ಯೋಜನೆಯಡಿಯಲ್ಲಿ ಸದಸ್ಯರಿಗೆ 2 ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ಆಯೋಜಿಸಿದ್ದು ಸಸಿ ನೀರು ಹಾಕುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ಮಾನ್ಯ ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಜೀವನೊಪಾಯ ಅಭಿಯಾನ ಬೆಂಗಳೂರ ಇವರ ಪತ್ರ ಸಂಖ್ಯೆ : ಅನಿಕ/44/ ಡೇ ನಲ್ಡ್ 2022-23 ಪಟ್ಟಣ ಪಂಚಾಯತ್ ಡೇ – ನ ಯೋಜನೆಯಡಿಯಲ್ಲಿ ತಾವುಗಳು ಟಿ.ವಿ.ಸಿ ಸದಸ್ಯರಾಗಿರುತ್ತಿರಿ . ಈಗ ಮಾನ್ಯ ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಜೀವನೊಪಾಯ ಅಭಿಯಾನ ಬೆಂಗಳೂರ ಇವರ ಪತ್ರ ಉಲ್ಲೇಖದ ಪ್ರಕಾರ ದೀನ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕದಡಿ ಬೀದಿ ಬದಿ ವ್ಯಾಪಾರಿಗಳ ಮಾರಾಟ ಸಮಿತಿಗಳಿಗೆ ಅಧಿನಿಯಮ ಮತ್ತು ಯೋಜನೆಯ ಕುರಿತು 2 ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ದಿನಾಂಕ : – 14/07/2022 ಹಾಗೂ 15/07/2022 ( ಗುರುವಾರ ಹಾಗೂ ಶುಕ್ರವಾರ )ದ ವರೆಗೆ ಬೆಳಿಗ್ಗೆ 09:00 ರಿಂದ 1-30ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ತಾವುಗಳು ಉಪಸ್ಥಿತರಿದ್ದು ತರಬೇತಿ ಕಾರ್ಯಗಾರದ ಲಾಭ ಪಡೆದುಕೊಳ್ಳಲು ಮುಖ್ಯಾಧಿಕಾರಿ ಬಿದಿ ಬದಿ ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡರು. ಈ ಬಿದಿ ಬದಿ ವ್ಯಪಾರಸ್ಥರ ಡೇ ನಲ್ಡ ಯೋಜನೆಯಡಿಯ ತರಬೆತಿಯಲ್ಲಿ ಪಂ.ಪಂ ಯ ಮುಖ್ಯಾಧಿಕಾರಿಗಳು ಹಾಗೂ ಸರ್ವ ಸಿಬ್ಬಂದಿ ವರ್ಗ ಹಾಗೂ ಪಟ್ಟಣದ ರಕ್ಷಕವಚವಾಗಿರುವ ಪಿ.ಎಸ್.ಐ ಶ್ರೀಮತಿ ವೈಶಾಲಿ ಝಳಕಿಯವರು ಪಾಲುಗೊಂಡಿದ್ದರು. ಹನುಮೇಶ್ ಕಲಾಲ್, ನಬಿ ಎಲಿಗಾರ್, ನರಹರಿ ಕಲಾಲ್, ಸುಧಾ ಕಲಾಲ್, ಪರಶುರಾಮ್ ಸುಣಗಾರ್, ಗಂಗಮ್ಮ, ಗೌರಮ್ಮ, ಲಕ್ಷ್ಮಮ್ಮ ಯಾದವ್ ಶಾಮೀದ್ ಬಡ್ಗಿ ಕಾಸಿಂಸಾಬ್, ರೇಣಮ್ಮ ಸುಣಗಾರ್ ,ಶೋಭವ್ವ, ಸುವರ್ಣ ಚಕ್ರಸಾಲಿ, ಎಚ್ ಆಂಜನೇಯ, ಮತ್ತು ಇನ್ನಿತರರು ಪಾಲುಗೊಂಡು ಈ ತರಬೆತಿಕಾರಗಾರ ಯಶಸ್ವಿಗೊಳಿಸಿದರು. ವರದಿ – ಸಂಪಾದಕೀಯ