ಪ್ರೀತಿಯನ್ನು ಬಯಸಿ ಬಂದ ಎಳೆ ಮನಸ್ಸಿನ ಬಾನಂಗಳದಲ್ಲಿ ಸಂಚರಿಸುತ್ತಿರುವ ಸ್ವಚ್ಛಂದ ಹಕ್ಕಿಗಳೇ ನಿಮಗೊಂದು ನಮನಗಳೊಂದಿಗೆ…
ಮಧುರವಾದ ಪ್ರೇಮದಲ್ಲಿ ಹೃದಯವನ್ನು ಬೆಸೆದು ಕನಸುಗಳಿಂದ ತುಂಬಿದ ಪ್ರೀತಿ-ವಾತ್ಸಲ್ಯವನ್ನು ಮರೆಸಿ ಅಮೂಲ್ಯವಾದ ಜೀವನದಲ್ಲಿ ಪ್ರೀತಿಯೆಂಬ ಮಾಹೆಯಲ್ಲಿ ಸಿಲುಕಿ ಅದನ್ನು ಅರ್ಥೈಸಿಕೊಳ್ಳದಿರುವ ನನ್ನ ನಲ್ಮೆಯ ಪುಟ್ಟ ಹೃದಯಗಳೇ.. ಓ ಪ್ರೀತಿಯ ಪ್ರೇಮಿಗಳೇ ನಿಮಗಿದೋ ನನ್ನ ನುಡಿ ಮುತ್ತುಗಳ ಜೊತೆಯಲ್ಲಿ ಪ್ರೇಮಿಗಳ ದಿನವನ್ನು ಬರಮಾಡಿಕೊಂಡಿರುವ ನನ್ನೆಲ್ಲಾ ಪ್ರೇಮಿ ವೃಂದದವರಿಗೆರಿಗೂ ನನ್ನದೊಂದು ಪ್ರೀತಿಯ ಶುಭಾಶಯಗಳು.. ನಿಮ್ಮನ್ನು ಮೊದಮೊದಲು ನೋಡಲು ಆಸೆ ನನಗಿದ್ದರೂ ಅದ್ಯಾಕೋ ಗೋತ್ತಿಲ್ಲ Love At First Sight ಅಂತಾರಲ್ಲ ಅದು ನಿಮ್ಮನ್ನು ನೋಡಿದಾಕ್ಷಣ ಸುಳ್ಳಾಯ್ತು. ನಿಮ್ಮನ್ನು ನೋಡಿದಾಗ ಏನು ಅನ್ನಿಸದ ನನ್ನ ಮನಸ್ಸಿನಲ್ಲೋಮ್ಮೆ ಪಿಸುಗುಡುವ ಮಾತುಗಳ ಕಲರವದಿಂದ ಹೃದಯದಲ್ಲೋಮ್ಮೆ ಅಂಕುರೋಡೆದ ಗರಿಗೆದರಿದ ಗರಿಕೆಯಂತೆ ನಿಮ್ಮನ್ನು ಮತ್ತೆ ಮತ್ತೆ ನೋಡಬೇಕು ಎಂಬ ಹಂಬಲ ನನ್ನ ಮನಸ್ಸಿನ ಕಣ್ಣಂಚಲ್ಲಿ ಮಿಂಚಿನಂತೆ ಹಾದು ಹೋಗುತ್ತಿತ್ತು. ನಿಮ್ಮನ್ನು ನೋಡಿದಾಗಲೆಲ್ಲ ನನಗೆ ಅನ್ನಿಸುತ್ತಿದ್ದದ್ದು ನಿಮ್ಮ ಮುಗ್ದತನದ ಮೊಗ್ಗಿನ ಮನಸ್ಸಿನಲ್ಲಿ ಆಗ ತ್ತಾನೆ ಅರಳುತ್ತಿರುವ ಹೂವಿನಲ್ಲಿ ಮೊನಾಲಿಸಳಂತಹ ನಗುವು ಚೆಲ್ಲುವಂತಾಗುತ್ತಿತ್ತು. ನಿಮ್ಮಲ್ಲಿ ನಿಮ್ಮನ್ನು ನೋಡಿದಾಗಲೆಲ್ಲ ಏನೋ ಒಂಥರಾ ಖುಷಿ, ಸಂಭ್ರಮ, ಪ್ರೀತಿ ಮತ್ತು ನಂಬಿಕೆಯ ಸೂಚನೆ ನನ್ನ ಮನಸ್ಸಿನ ಎದೆಯೊಳಗೆ ಉದ್ಬವಿಸುತ್ತಿತ್ತು. ನೀವುಗಳು ನಡೆದು ಬರುವ ಹಾದಿಯಲ್ಲಿ ಮಲ್ಲಿಗೆಯ ಮಂಟಪವನ್ನು ಕಟ್ಟುವಾಸೆ ಆಗುತ್ತಿತ್ತು. ಕಾರಣ ನೀವು ಬಂದು ಮಾತನಾಡಿಸುವ ತವಕ ನನ್ನಲ್ಲಿದ್ದರೂ ನಿಮ್ಮ ಕಣ್ಣುಗಳಲ್ಲಿ ಕಟ್ಟಿಟ್ಟು ಮಾತನಾಡಲಾಗದ ನನ್ನ ಭಯಬೀತಿ ಮನಸ್ಸು ಹೇಗೋ ಆತ್ಮ ಸ್ಥೈರ್ಯ ಮಾಡಿ ನೋಡಿದಾಗಲೇ ಗೊತ್ತಾಗಿದ್ದು ಪ್ರೀತಿ-ಪ್ರೀತಿಯಾಗಿಲ್ಲ ಇದರಲ್ಲಿ ನೋವಿನ ಸರಮಾಲೆಗಳ ಜೊತೆಯಲ್ಲಿ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಮತ್ತು ಸಂಬಂಧಿಕರ ಅಕ್ರಂದನದ ಮಾಯೇಯೂ ಕವಿದ ಕಾರ್ಮೋಡದಂತೆ ಗೋಚರಿಸುತ್ತಿರುವುದನ್ನು ಕಂಡು ನನ್ನ ಮನಸ್ಸಿನಲ್ಲಿ ಉಂಟಾಗಿದ್ದ ಚಂಚಲತೆಯನ್ನು ನನ್ನ ಮನಸೊಮ್ಮೆ ಹೊರದೂಡಿ ನನ್ನನ್ನು ಎಚ್ಚರಿಸಿ ಪ್ರೀತಿಯ ಮಾಹೆಯಿಂದ ನನ್ನ ಕಾಪಾಡಿದ ಕ್ಷಣಕ್ಕೆ ನನ್ನದೊಂದು ಪ್ರೀತಿಯ ನಮನಗಳು. ಪ್ರೀತಿ ಅನ್ನೋದು ಒಂದು ಹರಿತವಾದ ಗರಗಸ ಇದ್ದ ಆಗೆ ಹೋಗ್ತಾನು ಕುಯ್ಯುತ್ತೆ-ಬರ್ತಾನೂ ಕುಯ್ಯುತ್ತೆ ಈ ಹರಿತವಾದ ಪ್ರೇಮಕ್ಕೆ ಒಮ್ಮೆ ಶರಣಾದ್ರೇ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತಿಗೆ. ಈ ಪ್ರೀತಿಗೆ ಸಿಲುಕಿರುವ ಮತ್ತು ಸಿಲುಕುತ್ತಿರುವ ನಲ್ಮೆಯ ಪ್ರೇಮಿಗಳೇ ನಿಮಗೊಂದು ನನ್ನ ಪ್ರೀತಿಯ ಮನವಿ.
ಹೇಗೋ ಪರಿಚಯ ಆಗಿ ಪರಿಚಯ ಆದಮೇಲೆ ದೂರ ಆಗೋಕೆ ಸಣ್ಣ ಸಣ್ಣ ಕಾರಣ ಹುಡುಕಿಕೊಳ್ಳುವುದು ಪ್ರೀತಿ ಅಲ್ಲ. ಪ್ರತಿ ಹುಡುಗನ ಮನಸ್ಸಿನಲ್ಲಿ ತಾನಿಷ್ಟಪಟ್ಟು ಪ್ರೀತಿಸಿದ ಹುಡುಗಿಯಲ್ಲಿ ಎರಡನೇ ತಾಯಿಯನ್ನು ಹುಡುಕುತ್ತಾನೆ. ಹಾಗೆ ಪ್ರತಿ ಹುಡುಗಿಯೂ ಸಹ ತನ್ನ ಪ್ರೀತಿಯ ಹುಡುಗನಲ್ಲಿ ತನ್ನ ಮೊದಲ ಮಗುವನ್ನು ಕಾಣುತ್ತಾಳೆ.ಆದ್ರೆ ಜನ್ಮ ಕೊಟ್ಟು ಹೊರಗಿನ ಪ್ರಪಂಚದ ಮಡಿಲನ್ನು ಪರಿಚಯಿಸುವ ತಂದೆ-ತಾಯಿಗೆ ಯಾವ ರೀತಿಯಲ್ಲಿ ಕಾಣುತ್ತಿದ್ದೇವೆ. ಅಂತ ನಾವು ಸ್ವಲ್ಪನಾದ್ರೂ ಯೋಚನೆಯನ್ನು ಮಾಡ್ತಿದ್ದೀವಾ ಇಲ್ಲ ಅಲ್ವಾ..? ನೋಡಿ ಎಂತಹ ವಿಪರ್ಯಾಸ ಅಂತ ಜನ್ಮ ಕೊಟ್ಟ ತಂದೆ-ತಾಯಿಯ ಬೆಲೆ ಗೊತ್ತಿದ್ರು ಸಹ ಅವರನ್ನು ಬದಿಗೆ ಒತ್ತಿ. ಪ್ರೀತಿಯೆಂಬ ಮಾಹೆಯ ಕಲ್ಮಶದಲ್ಲಿ ಚಂಚಲ ಮನಸ್ಸಿನೊಳಗೊಂಡು ಪ್ರೀತಿ ಮಾಡುವಾಗ ನೀನೇ ಎಲ್ಲ, ನೀನೇ ಪ್ರಪಂಚ ಅಂತಾರೆ ಆದ್ರೆ ಬಿಟ್ಟೋಗುವಾಗ ಆ ಪ್ರಪಂಚದ ಕಡೆ ಯಾರು ನೋಡೋದಿಲ್ಲ. ಬಿಟ್ಟು ಹೋಗುವವರಿಗೆ ಮನದಲ್ಲಿರೋದು ಒಂದೇ ದೂರಾಗೋ ಹಂಬಲದ ಒಂದು ಸಣ್ಣ ನೆನಪು ಅಷ್ಟೇ.. ಪ್ರೀತಿಯನ್ನು ಪ್ರೀತಿ ಅಂದುಕೊಂಡಿರುವವರೇ ಹೆಚ್ಚು ಅಲ್ಲದೇ ಕೆಲವರು ಇದನ್ನೇ ಜೀವನದ ಒಂದು ಭಾಗವಾಗಿಸಿಕೊಂಡಿದ್ದಾರೆ. ಪ್ರೀತಿ ಅಂದರೆ:ಹೃದಯದಲ್ಲಿ ಹುಟ್ಟಿದ ಪ್ರೀತಿ ಮನಸ್ಸಿನ ಮನಸ್ಸಂಗಳದಲ್ಲಿ ಬಿಡುವ ಹೂವು ಬಾಡದೇ ಇರೋ ತನಕ,ಉಸಿರಿನಲ್ಲಿ ಇರೋ ಪ್ರೀತಿ ಮುಖದಲ್ಲಿ ನೋವಿನ ಭಾವನೆ ತೋರದೆ ಕಣ್ಣಲ್ಲಿ ಯಾವಾಗಲೂ ಪರಿಮಳಿಸುವ ಸುಗಂಧ ಸುಸುತ್ತಾ ತನ್ನಲ್ಲಿ ಇರುವುದು ನಗುವೇ ಮಾತ್ರ ಎಂದು ತಿಳಿಸುವ ಕಂಬನಿ… ತಿಳಿಯೋದೆ ನಿಜವಾದ ಪ್ರೀತಿ. ಮೌನವೆಂಬ ಮಂದಿರದಲ್ಲಿ ಬೆಳಗಿದ ಪ್ರೀತಿಯ ದೀಪದಂತೆ, ಹೃದಯ ಸಮುದ್ರದಲ್ಲಿ ಸಿಕ್ಕಂತಹ ಪ್ರೀತಿಯ ಮುತ್ತುಗಳನ್ನು ಸಣ್ಣ ಕೊಳದಲ್ಲಿ ಅರಳಿದ ಪ್ರೀತಿಯು ಆರದಂತೆ ಮತ್ತು ಒಡೆಯದಂತೆ, ಪುಷ್ಪ ಬಾಡದಂತೆ ಎಚ್ಚರ ವಹಿಸುತ್ತಾ ಮುನ್ನಡೆಯುವಾಗ ಮಾತ್ರವೇ ಪ್ರೀತಿ ಚಿರಕಾಲವಾಗಿ ಉಳಿಯಲು ಮತ್ತು ಉಳಿಸಿಕೊಳ್ಳಲು ಸಾದ್ಯ.
✍️ ಸಿ.ಆರ್ ಶಿವಕುಮಾರ್ ಸಕ್ಷಮ. ಶಿವಮೊಗ್ಗ