ತಾವರಗೇರಾ ಪಟ್ಟಣ ಇಂದು ತಲ್ಲಣ
ಕರ್ನಾಟಕ ರಾಜ್ಯಾದಂತ ಸರ್ಕಾರ ಹೋರಡಿಸಿರುವ ಲಾಕಡೌನ್ ಆದೇಶದಂತೆ ಇಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಇಂದು ಬೆಳಿಗ್ಗೆ 10 ಘಂಟೆಯಿಂದ ತಲ್ಲಣ ವಾಗಿರುವ ದೃಷ್ಯ ಕಂಡು ಬಂತು. ತಾವರಗೇರಾ ಪಟ್ಟಣದಲ್ಲಿ ಬೆಳಿಗ್ಗೆ 6 ರಿಂದ 10 ಘಂಟೆ ಯವರೆಗೆ ದಿನಸಿ ಖರೀದಿ ಮಾಡಲು ಹಳ್ಳಿ ಹಳ್ಳಿಗಳಿಂದ ಸಾರ್ವಜನಿಕರು ಬಂದು ಲಾಕಡೌನ್ ಸಮಯ ಪ್ರಜ್ಞೆ ಯಲ್ಲಿ ಇಟ್ಟುಕೊಂಡು ಕೆಲವರು ಸಮಯಕ್ಕೆ ಸರಿಯಾಗಿ ಹಳ್ಳಿಗಳತ್ತ ಮುಖ ಮಾಡಿದರು. ಆದರೂ ಕೆಲವು ಸಾರ್ವಜನಿಕರಿಗೆ ಪೋಲೀಸರು ಕಾನೂನಿನ ಮನವರಿಕೆ ಪ್ರಜ್ಞೆ ಮಾಡಿ ಸರ್ಕಾರ ನಿಡಿರುವ ಲಾಕಡೌನ್ ಸಮಯ 10 ಘಂಟೆ ಒಳಗಡ ಮನೆ ಸೇರಿ ಕೊಳ್ಳಿ ಅಂತಾ ತಿಳಿ ಹೇಳಿ ಕಳುಹಿಸಿ ಕೊಟ್ಟರು, ತದನಂತರದಲ್ಲಿ 10 ಘಂಟೆಯ ನಂತರ ತಾವರಗೇರಾ ಪ್ರಮುಖ ರಸ್ತೆಗಳು ಬಸ್ ನಿಲ್ದಾಣ ಗಳು ರಣ ರಣ ಬೀಕೊ ಎನ್ನುತಿತ್ತು. ನಮಗೋಸ್ಕರ ನಮ್ಮ ಜಿವಕ್ಕೊಸ್ಕರ ಸರ್ಕಾರ ಲಾಕಡೌನ್ ಮಾಡಿದ್ದರು ಕೆಲವು ಜನರು ಬೈಕ್ ತೆಗೆದುಕೊಂಡುಬ ತಿರುಗಾಡುವದನ್ನು ಕಂಡು ಪೋಲೀಸರು ಬೈಕ್ಗಗಳಿಗೆ ದಂಡ ಹಾಕಿ, ಇನ್ನೂ ಕೆಲವರಿಗೆ ಮನವರಿಕೆ ಮಾಡಿ, ಮತ್ತೆ ಏನಾದರೂ ರಸ್ತೆಗೆ ಬೈಕ್ ಇಳಿದರೆ ಸಿಜ್ ಮಾಡಲಾಗುವುದು ಎಂದು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರ. ತಾವರಗೇರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮದಿಂದ ಇಂದು ತಾವರಗೇರಾ ಪಟ್ಟಣ ಮೊದಲನೆ ದಿನ ತಲ್ಲಣ ವಾತಾವರಣದಲ್ಲಿದಿದ್ದು. ಕಂಡು ಬಂತು. ವರದಿ – ಅಮಾಜಪ್ಪ ಹಚ್. ಜುಮಲಾಪೂರ.