ಶಿಕ್ಷಕರೆ ಜೀವಂತ ಪಠ್ಯ ಪುಸ್ತಕ: ಡಿಡಿಪಿಐ ತಿಮ್ಮಾರೆಡ್ಡಿ ಕನಕಗಿರಿ,,,,,
ಶಿಕ್ಷಕರೆ ಜೀವಂತ ಪಠ್ಯ ಪುಸ್ತಕ ಇದ್ದಂತೆ, ಪಠ್ಯಪುಸ್ತಕಗಳು ಬರಲಿಲ್ಲ ಎಂದು ಶಿಕ್ಷಕರು ಕೊರಗಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ತಿಮ್ಮಾರೆಡ್ಡಿ ಪ್ರತಿಪಾದಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ದಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವೆ ಭದ್ರ ಬುನಾದಿ ದೇಶದ ಪ್ರಬಲ ಶಕ್ತಿಯಾಗಿದೆ, ಶಿಕ್ಷಕರು ವೃತ್ತಿ ಪ್ರೇಮ ಮೆರೆಯುವ ಮೂಲಕ ಕಳಂಕ ರಹಿತವಾಗಿ ಕೆಲಸ ಮಾಡುವಂತೆ ತಿಳಿಸಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಕರ ಶ್ರಮ ಸಾಕಷ್ಟಿದೆ ಇದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕೆಂದು ತಿಳಿಸಿದರು. ಇಂದಿನ ದಿನಮಾನದಲ್ಲಿ ಶಿಕ್ಷಕರು ಇಲಾಖೆಯ ನಿಯಮಗಳ ಜತೆಗೆ ಕಾನೂನು ಜ್ಞಾನ ಪಡೆಯುಬೇಕಾಗಿದೆ, ವ್ಯವಸ್ಥೆ ಬಲಪಡಿಸಲು ಶಿಕ್ಷಕರಿಗೆ ತರಬೇತಿ ಅವಶ್ಯಕತೆ ಇದೆ, ಸರ್ಕಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕೆಂದು ಹೇಳಿದರು. ನಿಕಟ ಪೂರ್ವ ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಲೇಖಕ ವಿ. ವಿ. ಗೊಂಡಬಾಳ ಮಾತನಾಡಿ ಶಿಕ್ಷಕರ ಸಬಲೀಕರಣಕ್ಕೆ ಕಾರ್ಯಾಗಾರ ಪೂರಕವಾಗಿದ್ದು ಕಾರ್ಯಾಗಾರದ ಜ್ಞಾನವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ ಮಾತನಾಡಿ ಶಿಕ್ಷಕರ ಸಂಘವು ಶೈಕ್ಷಣಿಕ ಪ್ರಗತಿ ಹಾಗೂ ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ನಡೆಸಿ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಎಸ್ ಡಿಎಂಸಿ ಅಧ್ಯಕ್ಷ ಕನಕರೆಡ್ಡಿ ಕೆರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗ್ಂ ಅವರು ಮಾತನಾಡಿದರು. ಜಿಲ್ಲಾ ತರಬೇತಿ ಕೇಂದ್ರ ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ ಅವರು ಆಡಳಿತಾತ್ಮಕ ಹಾಗೂ ಮಾಹಿತಿ ಹಕ್ಕು ಕಾಯಿದೆ, ಕ್ಯಾಷ ಬುಕ್ ಬರೆಯುವ ವಿಧಾನ ಇತರೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ನಿಕಟಪೂರ್ವ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹನುಮಂತಪ್ಪ ಚವ್ಹಾಣ, ನಿವೃತ್ತ ಮುಖ್ಯಶಿಕ್ಷಕ ಮನೋಹರ ಪತ್ತಾರ ಅವರನ್ನು ಇದೇ ಸಮಯದಲ್ಲಿ ಸನ್ಮಾನಿಸಲಾಯಿತು. ಶಿಕ್ಷಣ ಸಂಯೋಜಕರಾದ ಆನಂದ ನಾಗಮ್ಮನವರ್, ಆಂಜನೇಯ, ಮುಖ್ಯಶಿಕ್ಷಕ ಎಸ್. ಶಿವಕುಮಾರ, ಸಂಘದ ಪದಾಧಿಕಾರಿಗಳಾದ ದೇವೇಂದ್ರಗೌಡ, ಡಿ. ಜಿ. ಸಂಗಮ್ಮನವರ್, ಮಂಜುಳಾ ಶಾವಿ ಇತರರು ಇದ್ದರು. ಗೀತಾ ಹಂಚಾಟೆ ಪ್ರಾರ್ಥಿಸಿದರು. ರಾಮಚಂದ್ರ ಮಾಕಣ್ಣವರ್ ಸ್ವಾಗತಿಸಿದರು. ಶೇಖರ ನಾಯಕ್ ಹಾಗೂ ಚೇತನಕುಮಾರ ನಿರೂಪಿಸಿದರು.
ವರದಿ – ಆದಪ್ಪ ಮಾಲಿ ಪಾಟೀಲ್