ಇಲಕಲ್ಲ, ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಧರಣಿ ನಿರತ ಸ್ಥಳಕ್ಕೆ ಆಗಮಿಸಿ, ಎಂಟು ಕಾಂಗ್ರೆಸ್ ಸದಸ್ಯರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಹಿಂದೆ ಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು,
ಬಾಗಲಕೋಟೆ ಜಿಲ್ಲಾಧಿಕಾರಿ ತಾಲೂಕಿನ ಕಂಬಳಿಹಾಳ ಗ್ರಾಮದಲ್ಲಿ ಡಿಸಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಅವರ ಪರವಾಗಿ ನಗರಸಭೆ ಸಭಾಭವನದಲ್ಲಿ ನಿರಶನ ಮಾಡುತ್ತಿದ್ದವರನ್ನು ಭೇಟಿ ಮಾಡಿ, ಅವರ ಅಹವಾಲುಗಳನ್ನು ಆಲಿಸಿ ಶೀಘ್ರದಲ್ಲೇ ಅವುಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು, ಈ ಸಮಯದಲ್ಲಿ ಧರಣಿ ನಡೆಸುತ್ತಿದ್ದ ಸ್ಥಳದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ನಗರಸಭೆ ಮಾಜಿ ಅಧ್ಯಕ್ಷ ವೆಂಕಟೇಶ ಸಾಕಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಂತಕುಮಾರ ಸುರಪುರ, ಅಂಬೇಡ್ಕರ್ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶರಣಪ್ಪ ಅಮದಿಹಾಳ ಮತ್ತಿತರರು ತಾರತಮ್ಯ ನೀತಿಯನ್ನು ಎಸಿ ಯವರಿಗೆ ವಿವರಿಸಿದರು, ಸ್ಥಳದಲ್ಲಿ ತಹಸೀಲ್ದಾರ ಬಸವರಾಜ ಮೇಳವಂಕಿ, ಸಿಪಿಐ ಹೊಸಕೇರಪ್ಪ ಕೋಳೂರ, ಪಿಎಸ್ಐ ವಿನಾಯಕ ಪೂಜಾರಿ, ಅಪರಾಧ ವಿಭಾಗದ ಪಿಎಸ್ಐ ಶಾಂತಾ ಹಳ್ಳಿ ಉಪಸ್ಥಿತರಿದ್ದರು,
ವರದಿ ಮೌನೇಶ್ ರಾಥೋಡ್ ಬಾಗಲಕೋಟ