ಪಕ್ಷಾಂತರ ಪರ್ವ ಆರಂಭ: ರಮೇಶ ನಾಯಕ.

Spread the love

ಪಕ್ಷಾಂತರ ಪರ್ವ ಆರಂಭ: ರಮೇಶ ನಾಯಕ.

ಕನಕಗಿರಿ: ಕ್ಷೇತ್ರಾದ್ಯಂತ ಮತದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತಕ್ಕೆ ಬೇಸತ್ತು ಅಧಿಕಾರ ರೂಢ ಬಿಜೆಪಿ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು ಬಿಜೆಪಿ ಪಕ್ಷದ ಹಲವು ಕಾರ್ಯಕರ್ತರು ಪಕ್ಷ ತೊರೆಯುವ ಮೂಲಕ ಪಕ್ಷಾಂತರ ಪರ್ವ ಆರಂಭ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಹುಲಿಹೈದರ ರಮೇಶ ನಾಯಕ ಹೇಳಿದರು. ಅವರು ಕ್ಷೇತ್ರದ ಹುಲಿಹೈದರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕನಕಾಪುರ ಗ್ರಾಮದ ಅಂಬಣ್ಣ ಸಾಹುಕಾರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ಇದೆ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಬಾಗಿಲಮಠ ಗಂಗಾಧರ ಸ್ವಾಮಿ ಮಾತನಾಡಿ ಒಂದು ಅವಧಿಯಲ್ಲಿ ಶಿವರಾಜ್ ತಂಗಡಗಿ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡಿ ತಪ್ಪು ಮಾಡಿದ್ದೇವೆ , ಕ್ಷೇತ್ರದ ಅಭಿವೃದ್ಧಿ ಹತ್ತು ವರ್ಷ ಹಿಂದಕ್ಕೆ ಹೋದಂತೆ ಆಗಿದೆ ಎಂದು ಜನರೇ ಮಾತನಾಡುತ್ತಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ತಂಗಡಗಿಯವರ ಜಯ ನಿಶ್ಚಿತ ಎಂದರು.

ಕಾಂಗ್ರೆಸ್ ಮುಖಂಡ ಶಿವರಾಜ್ ತಂಗಡಗಿ ಸಹೋದರ ವೆಂಕಟೇಶ್ ತಂಗಡಗಿ ಮಾತನಾಡಿ ನನ್ನ ಸಹೋದರನ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಶ್ರೀ ರಕ್ಷೆ ಆಗಲಿವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ಅಮರಪ್ಪ ಗದ್ದಿ,ರವಿ ಪಾಟೀಲ್, ಪ.ಪಂ.ಸದಸ್ಯರಾದ ಅನಿಲ್ ಕುಮಾರ್ ಬಿಜ್ಜಳ , ರಾಜಾಸಾಬ್ ನಂದಾಪುರ, ಸೇರಿದಂತೆ ಪಕ್ಷದ ಪ್ರಮುಖರು ಇದ್ದರು. ಸಮೀಪದ ಕನಕಾಪುರ ಗ್ರಾಮದ ಅಂಬಣ್ಣ ಸಾಹುಕಾರ ಅವರನ್ನು ಕಾಂಗ್ರೆಸ್ ಪಕ್ಷದ ಶಾಲು ಹಾಕುವ ಮೂಲಕ ಪಕ್ಷ ಸೇರ್ಪಡೆ ಮಾಡಿಕೊಂಡರು.

ವರದಿ – ಆದಪ್ಪ ಮಾಲಿ ಪಾಟೀಲ್

Leave a Reply

Your email address will not be published. Required fields are marked *