ವಿಜಯಪುರ ನಗರದ ಗೋದಾವರಿ ಹೋಟೆಲ್ ಹತ್ತಿರ ಸೆಟಲೈಟ್ ಬಸ್ ನಿಲ್ದಾಣದಿಂದ ವಿವಿಧ ಮೂರ್ತಿಗಳ ಭವ್ಯ ಮೆರವಣಿಗೆ ಪ್ರಾರಂಭ…..
ನಗರದ ಇತಿಹಾಸದಲ್ಲಿಯೇ ವಿವಿದ ವೃತ್ತಗಳಲ್ಲಿ ಪ್ರತಿಷ್ಠಾಪಿಸಲಾಗುವ ದೇಶದ ಮಹಾನ್ ನಾಯಕರ, ವೀರರ, ದೇಶಭಕ್ತರ, ಸ್ವಾತಂತ್ಯ್ರ ಸೇನಾನಿಗಳಾದ (1) ವೀರ ಮಹಾರಾಣಾ ಪ್ರತಾಪ ಸಿಂಹ, (2)ಸರ್ದಾರ ವಲ್ಲಭಬಾಯಿ ಪಟೇಲ, (3)ಸ್ವಾಂತ್ರ್ಯ ವೀರ ಸಾವರಕರ್, (4)ಶ್ರೀ ಲಾಲಬಹದ್ದೂರ ಶಾಸ್ತ್ರೀ, (5) ಸ್ವಾಮಿ ವಿವೇಕಾನಂದ, (6)ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ, (7) ನೇತಾಜಿ ಸುಭಾಸಚಂದ್ರ ಭೋಸ್ , ಮೂರ್ತಿಗಳ ಭವ್ಯ ಮೆರವಣಿಗೆ ಮಾನ್ಯ ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದಸಿಂಗ, ರಾಜ್ಯ ಕ್ಷತ್ರೀಯ ಒಕ್ಕೂಟದ ಅದ್ಯಕ್ಷ ಶ್ರೀ ಉದಯಸಿಂಹ , ಮಹಾರಾಷ್ಟ್ರದ ಶ್ರೀ ಅಣ್ಣಾಭಾವು ಜಾದವ ,ಹಾಗು ಹಿಂದು ಧರ್ಮದ ವಿವಿದ ಸಮಾಜದ ಮುಖಂಡರುಗಳ ನೇತೃತ್ವದಲ್ಲಿ , ನಗರದ ಸೆಟಲೈಟ ಬಸನಿಲ್ದಾಣದಿಂದ ಪ್ರಾಂರಂಭವಾಗುವ ಈ ಭವ್ಯ ಮೆರವಣಿಗೆಯು ವಾಟರ ಟ್ಯಾಂಕ್- ಶಿವಾಜಿಚೌಕ- ಸರಾಫ ಲೈನ್- ಶ್ರೀ ರಾಮ ಮಂದಿರ ರಸ್ತೆ,- ಹೆಡಗೆವಾರು ವೃತ್ತದಿಂದ ಬಲಕ್ಕೆ ತಿರುಗಿ – ಬಂಜಾರಾ ಆಸ್ಪತ್ರೆ – ಅಟಲಬಿಹಾರಿ ವಾಜಪೇಯಿ ರಸ್ತೆಯ ಗಣಪತಿ ಚೌಕ- ವಾಜಪೇಯಿ ಸರ್ಕಲ್ ಕಿರಾಣಾ ಬಜಾರ ಮೂಲಕ – ಶ್ರೀ ಸಿದ್ದೇಶ್ವರ ಗುಡಿ ಎದುರು ಸಮಾವೇಶಗೊಳ್ಳುತ್ತದೆ. ಕಾರಣ ಸಮಸ್ತ .ಹಿಂದು ಸಮಾಜದ ಭಾಂಧವರು,,ಯುವಕರು, ನಾಗರಿಕರು, ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ವ್ಯಾಪಾರಸ್ಥರು, ಸರ್ವ ಸಂಘ,ಸಂಸ್ಥೆಯವರು ಈ ಭವ್ಯವಾದ ಮೆರವಣಿಗೆಯಲ್ಲಿ ಭಾಗವಹಿಸಿ ಶೋಭೆ ತರಬೇಕೆಂದು ವಿನಂತಿ. – ಇಂತಿ ತಮ್ಮ ಬಸನಗೌಡ ರಾ. ಪಾಟೀಲ (ಯತ್ನಾಳ), ಶಾಸಕರು, & ಭಾಜಪ ಮುಖಂಡರು.
ವರದಿ ಮೌನೇಶ್ ರಾಥೋಡ್ ಬಾಗಲಕೋಟ