ಶಿವಮೊಗ್ಗ ವಿನೋಬನಗರದ, ಮಾಧವನೆಲೆಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಮಾರಂಭದಲ್ಲಿ ಮಾಧವನೆಲೆ ಯ ಮಕ್ಕಳಿಂದ ಭರತನಾಟ್ಯ, ಶಾಸ್ತ್ರೀಯ ಸಂಗೀತ,ಡಿಸಿ ಆಸೋಸಿಯೇಷನ್ ಮತ್ತು ವಿದ್ಯಾಬ್ಯಾಸವನ್ನು ಕಲಿಸಿದ ಗುರುಗಳಿಗೆ ಪಾದಪೂಜೆಯನ್ನು ಮಾಡುವುದರ ಜೊತೆಯಲ್ಲಿ ಗುರುವಂದನೆಯನ್ನು ಸಲ್ಲಿಸಲಾಯಿತು. ಹಾಗೂ ಮಾಧವನೆಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗುರುವಂದನೆಯನ್ನು ಪಡೆದಂತಹ ಗುರುಗಳೆಲ್ಲರೂ ಮಾತಾಡಿ ಮಾಧವನೆಲೆ ಒಂದು ಭವ್ಯವಾದ ಮಂದಿರವಿದಂತೆ ಇಲ್ಲಿ ನೆಲೆಸಿರುವ ಮಕ್ಕಳೆಲ್ಲರು ಪುಣ್ಯವಂತರು, ನಾವುಗಳು ಕಲಿಸಿಕೊಟ್ಟ ಎಲ್ಲ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಶ್ರದ್ಧೆ,ಪ್ರೀತಿಯಿಂದ ಮಕ್ಕಳು ಕಲಿಯುತ್ತಾರೆ ಜೊತೆಯಲ್ಲಿ ಇವರುಗಳು ತೊರಿಸುವ ಪ್ರೀತಿಯನ್ನು ನೋಡಿದರೆ ಇಲ್ಲಿನ ನಮ್ಮ ಸಂಸ್ಕೃತಿಯು ಎದ್ದು ಕಾಣುವಂತೆ ಮಾಡುತಿದೆ ಎಲ್ಲಾ ಮಕ್ಕಳಿಗೂ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ A.J ರಾಮಚಂದ್ರ ವಿಕಾಸ ವಿದ್ಯಾ ಸಮಿತಿಯ ಕಾರ್ಯದರ್ಶಿಗಳು ಮಾತಾಡಿ ಗುರುಪೂರ್ಣಿಮೆಯ ಗುರುವಂದನೆ ಅನ್ನೋದು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬಂದಂತಹ ನಮ್ಮ ಹೆಮ್ಮೆಯ ಸಂಸ್ಕೃತಿ.ಬಸವಣ್ಣನವರ ವಚನಾಮೃತ ವಾಣಿಯಂತೆ ಸಮಾಜದ ಅಭ್ಯುದಯಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ, ಶೈಕ್ಷಣಿಕ ವರ್ಗದಲ್ಲಿ ಶ್ರೇಯೋಭಿವೃದ್ದಿಗಾಗಿ ನಾವೆಲ್ಲರೂ ಶ್ರಮಿಸಬೇಕು ಮತ್ತು ತಾವೆಲ್ಲ ಮಕ್ಕಳು ನಿಮ್ಮ ಭವಿಷ್ಯವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಂಡರಷ್ಠೇ ಜೀವನವು ಸುಖಮಯವಾಗುವುದು ಎಂದರು. ಈ ಕಾರ್ಯಕ್ರಮದಲ್ಲಿ ಶ್ರೀ ಭವರಲಾಲ್ ನಹಾರ್ ಅಧ್ಯಕ್ಷರು ಮಾಧವನೆಲೆ ಶಿವಮೊಗ್ಗ,ಮಾಧವನೆಲೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಮಾತೃ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ವರದಿ – ಸಂಪಾದಕೀಯ