ಕುಂಬಾರ ಸಮುದಾಯದ ಹಲವಾರು ಬೇಡಿಕೆಗಳ ಈಡೇರಿಕಾಗಿ ಬೆಂಗಳೂರು ಚಲೋ,,,,,,
ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳಿಂದ ಹಾಗೂ ಸರಕಾರಗಳಿಂದ ರಾಜಕೀಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಕಡೆಗಣಗೆ ಒಳಗಾಗಿರು 20 ಲಕ್ಷಕಿಂದ ಹೆಚ್ಚು ಜನಸಂಖ್ಯೆ ಹೊಂದಿರುವ ಅತ್ಯಂತ ಹಿಂದುಳಿರುವ ಕುಂಬಾರ ಸಮುದಾಯ. ಸಮುದಾಯದ ಹಲವಾರು ಬೇಡಿಕೆಗಳ ಈಡೇರಿಕಾಗಿ ಪ್ರತಿ ಬಾರಿ ಸರ್ಕಾರಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಹವಾಲಗಳನ್ನು ವಿವಿಧ ವೇದಿಕೆಗಳ ಮೂಲಕ ನೀಡಿದರು ಕೂಡ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಿಲ್ಲ ಬೇಡಿಕೆಗಳು ಈಡೇರಿಲ್ಲ ಹಾಗಾಗಿ ಸ್ವಾಮಿಜಿಗಳ ದಿವ್ಯಸಾನಿಧ್ಯದಲ್ಲಿ ಮತ್ತು ರಾಜ್ಯದ ಸಮಸ್ತ ಕುಂಬಾರ ಸಮಾಜದ ನೇತೃತ್ವದಲ್ಲಿ ಕುಂಬಾರರ ಶಕ್ತಿ ಪ್ರದರ್ಶನ ಮತ್ತು ಜಾಗೃತಿ ಸಮಾವೇಶ ದಿನಾಂಕ 23-07-22ರಂದು ಬೆಂಗಳೂರಿನ ಟೌನ ಹಾಲನಲ್ಲಿ ಬೆಳಗ್ಗೆ 10-00 ಕ್ಕೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಸಮಸ್ತ ಕುಂಬಾರ ಸಮುದಾಯವು ಈ ಒಂದು ಶಕ್ತಿ ಪ್ರದರ್ಶನಕ್ಕೆ ಮತ್ತು ಜಾಗೃತಿ ಸಮಾವೇಶಕ್ಕೆ ಸಾಕ್ಷಿಯಾಗಿ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ಕೋರಿಕೊಳ್ಳುತ್ತೆವೆ.ಇದನ್ನು ಅಮರೇಶ್ ಕುಂಬಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂಬಾರ್ ಯುವ ಸೇನೆ ಬೆಂಗಳೂರು ಮತ್ತು ಸುವರ್ಣಮ್ಮ ಶೇಖರಪ್ಪ ಕುಂಬಾರ್ ರಾಜ್ಯ ಮಹಿಳಾ ಅಧ್ಯಕ್ಷರು ಕುಂಬಾರ್ ಯುವ ಸೇನೆ ಬೆಂಗಳೂರು ತಿಳಿಸಿದರು.
ವರದಿ – ಸಂಪಾದಕೀಯ