ಅನಾಥ ಅಜ್ಜಿಯನ್ನು ರಕ್ಷಣೆ ಮಾನವೀಯತೆ ಮೆರೆದಿದ್ದಾರೆ……

Spread the love

ಅನಾಥ ಅಜ್ಜಿಯನ್ನು ರಕ್ಷಣೆ ಮಾನವೀಯತೆ ಮೆರೆದಿದ್ದಾರೆ……

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಸಹಕಾರದೊಂದಿಗೆ ಅನಾಥ ವೃದ್ಧೆಯನ್ನು ರಕ್ಷಣೆ ಮಾಡಿ ಕೂಡಿಗೆ ಶಕ್ತಿ ಅನಾಥಾಶ್ರಮ ಸೇರಿಸಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಮಳೆಯಲ್ಲಿ ನೆನೆಯುತ್ತಿದ್ದ ಅನಾಥ ಮಹಿಳೆ ಅಂದಾಜು ವಯಸ್ಸು (75) ಸುತ್ತುತ್ತಿದ್ದರು. ಇದನ್ನು ನೋಡಿದ ಗ್ರಾಮಸ್ಥರು ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ತಿಳಿಸಿರುತ್ತಾರೆ . ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಸನ್ನ ರವರು ಮತ್ತು ನಂದೀಶ್ ರವರು ಅನಾಥ ವೃದ್ಧೆಯನ್ನು ಮಾತನಾಡಿಸಿ ನೋಡಿದಾಗ ಅವರು ಮಾನಸಿಕ ಅಸ್ವಸ್ಥರಂತೆ ಕಂಡು ಬಂದಿರುತ್ತಾರೆ .. ಮಳೆಯಲ್ಲಿ ನೆನೆಯುತ್ತಿರುವ ಮಾನಸಿಕ ಅಸ್ವಸ್ಥರನ್ನು 1ಕಡೆ ಕೂರಿಸಿ ಆ ಅನಾಥ ಮಹಿಳೆಗೆ ಊಟೋಪಚಾರಗಳನ್ನು ಕೊಡಿಸಿ .
ಕರವೇ ಕಾರ್ಯಕರ್ತರಿಗೆ ಈ ಮಾನಸಿಕ ಅಸ್ವಸ್ಥೆ ಬಗ್ಗೆ ವಿವರ ನೀಡುತ್ತಾರೆ . ಕರವೇ ಕಾರ್ಯಕರ್ತರು ಕೂಡಿಗೆ ಶಕ್ತಿ ಆಶ್ರಮದ ಅವರನ್ನು ಸಂಪರ್ಕಿಸಿ ಕೋರಿಕೊಂಡ ಮೇರೆಗೆ ಶಕ್ತಿ ಆಶ್ರಮದವರು ಒಪ್ಪಿಕೊಂಡು ಕರೆದುಕೊಂಡು ಬನ್ನಿ ಎಂದು ತಿಳಿಸಿದರು . ಬರುವಾಗ ಗ್ರಾಮ ಪಂಚಾಯಿತಿಯಿಂದ ಅನಾಥ ಅಜ್ಜಿ ಎಂದು 1ಪತ್ರ ತೆಗೆದುಕೊಂಡು ಬನ್ನಿ ಎಂದು ತಿಳಿಸಿರುತ್ತಾರೆ ಹಾಗೂ ಮೆಡಿಕಲ್ ಟೆಸ್ಟ್ ಆಸ್ಪತ್ರೆಯಿಂದ ತೆಗೆದುಕೊಂಡು ಬನ್ನಿ ಎಂದು ತಿಳಿಸಿರುತ್ತಾರೆ . .. ಈ ಎಲ್ಲಾ ಮುತುವರ್ಜಿಯನ್ನು ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರಸನ್ನ ಹಾಗೂ ನಂದೀಶ್ ವಹಿಸಿಕೊಂಡಿದ್ದರು . ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅವರು ತುಂಬಾ ಮುತುವರ್ಜಿ ವಹಿಸಿ ಅನಾಥ ವೃದ್ಧೆಯನ್ನು ಅನಾಥಾಶ್ರಮಕ್ಕೆ ಸೇರಿಸಲು ಇವರನ್ನು ಇವತ್ತು ಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ರವರ ಖುದ್ದಾಗಿ ಹೋಗಿ ಕೂಡಿಗೆ ಶಕ್ತಿ ಆಶ್ರಮಕ್ಕೆ ಸೇರಿಸಲಾಗಿತ್ತು .. ಈ ಅನಾಥ ಅರ್ಜಿಯನ್ನು ಅನಾಥಾಶ್ರಮಕ್ಕೆ ಸೇರಿಸಲು ಕರವೇ ಕಾರ್ಯಕರ್ತರಿಗೆ ಸಹಕಾರ ನೀಡಿದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಸನ್ನರವರಿಗೆ ಹಾಗೂ ನಂದೀಶ್ ರವರಿಗೆ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ .. ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಯವರು ಅನಾಥ ವೃದ್ಧೆಯನ್ನು ಕೂಡಿಗೆ ಗ್ರಾಮ ಪಂಚಾಯತಿಗೆ ಸಾಗಿಸಲು ಕಾರಿನ ವ್ಯವಸ್ಥೆ ಸಹ ಪಂಚಾಯಿತಿಯಿಂದ ಮಾಡಿಕೊಡಲಾಗಿತ್ತು ಮತ್ತು ಅನಾಥ ಎಂಬ ಪತ್ರವೂ ಸಹ ಕೊಟ್ಟಿರುತ್ತಾರೆ ಹಾಗಾಗಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ .. ಹಾಗೂ ಈ ಸಂದರ್ಭದಲ್ಲಿ ಅನಾಥ ವೃದ್ಧೆಯನ್ನು ಅನಾಥಾಶ್ರಮಕ್ಕೆ ಸೇರಿಸುವ ಸಂದರ್ಭದಲ್ಲಿ ಸಹಕರಿಸಿದ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಹಾಗೂ ಗ್ರಾಮ ಪಂಚಾಯ್ತಿ ನೌಕರರಿಗೆ ಹಾಗೂ ಈ ಅನಾಥ ಮಹಿಳೆಗೆ ಚಿಕಿತ್ಸೆ ಕೊಟ್ಟಂತಹ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಗಳಿಗೂ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ . ಈ ಅನಾಥ ಮಹಿಳೆಯ ಕಾಲಿನಲ್ಲಿ ತುಂಬಾ ಗಾಯದ ಸಮಸ್ಯೆ ಯಾಗಿತ್ತು ಈ ಸಮಸ್ಯೆ ಸಹ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಯಿಂದ ಉತ್ತಮ ಚಿಕಿತ್ಸೆ ಕೊಟ್ಟಿರುತ್ತಾರೆ. ಈ ಸಂದರ್ಭದಲ್ಲಿ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಿತ್ ಗೌಡ ಹಾಗೂ ಕರವೇ ಫ್ರಾನ್ಸಿಸ್ ಡಿಸೋಜಾ ಹಾಗೂ ಬ್ಯಾಡಗೊಟ್ಟ ಗ್ರಾಮ ಪಂಚಾಯತಿ ಸದಸ್ಯರು ಹನೀಫ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹೂವಯ್ಯ ನವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಸನ್ನ ಹಾಗೂ ನಂದೀಶ್ ಹಾಗೂ ಶೇಖರ್
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ದೀಪು ಮತ್ತು ಗ್ರಾಮ ಪಂಚಾಯಿತಿ ನೌಕರರ ನಾಗೇಶ್ ಮತ್ತು ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು ಇವರಿಗೆಲ್ಲರಿಗೂ ಕರವೇ ಕಾರ್ಯಕರ್ತರಿಂದ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ .. ಇನ್ನು ಮುಂದೆ ಸಹ ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಾವುದೇ ಹೋಬಳಿಗಳಲ್ಲಿ ಅನಾಥರು ಕಂಡುಬಂದಲ್ಲಿ ಗ್ರಾಮಸ್ಥರು ಸಹಕಾರ ಕೊಟ್ಟು ಮತ್ತು ಗ್ರಾಮ ಪಂಚಾಯಿತಿಯವರು ಸಹಕಾರ ಕೊಟ್ಟ ಅವರುಗಳನ್ನು ಕರವೇ ಕಾರ್ಯಕರ್ತರು ಅನಾಥಾಶ್ರಮಕ್ಕೆ ಸೇರಿಸಲು ಸಿದ್ಧರಿದ್ದೇವೆ ಎಂದು ತಿಳಿಸಲು ಬಯಸುತ್ತೇವೆ. ಕರವೇ ಫ್ರಾನ್ಸಿಸ್ ಡಿಸೋಜಾ . 9449255831ಮತ್ತು 9686095831

ವರದಿ – ಬಾಲರಾಜ ಯಾದವ್

Leave a Reply

Your email address will not be published. Required fields are marked *