ಪೂಜಾರಳ್ಳಿ ತಾಂಡ:ಆರೇಳು ಬೆರಳುಗಳಿರುವ ವಿಶಿಷ್ಟ ಚೇತನರ ಕುಟುಂಬ,,,,,,
ವಿಜಯನಗರ ಜಿಲ್ಲೆ ಕೂಡ್ಲಿಗಿ, ತಾಲೂಕಿನ ಪೂಜಾರಹಳ್ಳಿ ತಾಂಡದಲ್ಲಿರುವ ಕುಟುಂಬವೊಂದರ ಐದು ಜನ ಸದಸ್ಯರು. ಪ್ರತಿಯೊಬ್ಬರು ತಮ್ಮ ಕೈ ಕಾಲುಗಳಲ್ಲಿ ಒಟ್ಟು ತಲಾ 24.28.32ರೀತಿಯಲ್ಲಿ ಬೆರಳುಗಳನ್ನು ಹೊಂದಿದ್ದಾರೆ. ಇದು ವಿಚಿತ್ರವಾದರೂ ಸತ್ಯ ಸಂಗತಿಯಾಗಿದೆ, ಇದು ಅವರಿಗೆ ಶಾಪವಾಗಿ ಪರಿಣಮಿಸಿದೆಯಂತೆ. ಜಗದೀಶನಾಯ್ಕ ಎಂಬ ಕುಟುಂಬದ ಸದಸ್ಯರು ಅವರ ತಾಯಿ ಸೇರಿದಂತೆ ಮನೆಯ ಒಟ್ಟು ಐದು ಜನರು,ಕೈಯಲ್ಲಿ ಆರು, ಏಳು, ಎಂಟು ಬೆರಳುಗಳನ್ನು ಹೊಂದಿದ್ದಾರೆ. ಅವು ಪರಸ್ಪರ ಹೊಂದಿಕೊಂಡಿದ್ದು ಸಹಜವಾಗಿ ಎಲ್ಲರಂತೆ ಕೆಲ ಕಾರ್ಯಮಾಡಲಾಗುತ್ತಿಲ್ಲ, ಅವರ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರಿದೆ ಕಾರಣ ಅವರನ್ನು ವಿಶಿಷ್ಟ ಚೇತನರೆಂದು ಪರಿಗಣಿಸಲಾಗಿದೆ. ಎಲ್ಲರಂತೆ ಸಹಜವಾಗಿ ದುಡಿಮೆ ಮಾಡಲಾಗದೇ ತೀರಾ ಆರ್ಥಿಕ ಸಂಕಷ್ಟವನ್ನು ಕುಟುಂಬ ಸದಸ್ಯರು ಎದುರಿಸುತ್ತಿದ್ದಾರೆ,ಅವರ ನೆರವಿಗೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಮುಂದಾಗಬೇಕಿದೆ. ಕುಟುಂಬಕ್ಕೆ ಆರ್ಥಿಕ ಸಾಲ ಸೌಲಭ್ಯ ನೀಡಿ, ಅವರು ಸ್ವಾವಲಂಭಿ ಜೀವನ ನಡೆಸಲು ಅಗತ್ಯ ನೆರವನ್ನು ಸರ್ಕಾರ ಮಾಡಬೇಕಿದೆ.
ವರದಿ – ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ