ನಾರಿನಾಳ ಹಾಗೂ ಇತರೆ ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ದೀಡಿರನೆ ಧರಣಿಗೆ ಮುಂದಾದ ವಿದ್ಯಾರ್ಥಿಗಳು….

Spread the love

ನಾರಿನಾಳ ಹಾಗೂ ಇತರೆ ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ದೀಡಿರನೆ ಧರಣಿಗೆ ಮುಂದಾದ ವಿದ್ಯಾರ್ಥಿಗಳು….

ತಾವರಗೇರಾ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಹಲವು ಗ್ರಾಮಗಳಲ್ಲಿ ಓದುವ ಶಾಲಾ ಮಕ್ಕಳಿಂದ ದಿಡೀರನೆ ಧರಣಿಗೆ ಮುಂದಾದ ವಿದ್ಯಾರ್ಥಿಗಳು. ಕಾರಣ ಸುಮಾರು 8 ದಿನಗಳಿಂದ ತಾವರಗೇರಾದಿಂದ ನಾರಿನಾಳ. ಗರ್ಜಿನಾಳ.ಜುಲಕುಂಟಿ. ಮ್ಯಾಗಳಡೊಕ್ಕಿ ಗ್ರಾಮಕ್ಕೆ ಹೋಗಿ ಮತ್ತೆ ಅದೇ ರೂಟಿಗೆ ಬರುವ ವ್ಯವಸ್ತೆ ಇದ್ದು. ಆದರೆ ಸರ್ಕಾರಿ ವಾಹನ ಚಾಲಕ ಹಾಗೂ ನಿರ್ವಾಹಕರು ಮೊದಲು ಹೋಗುವಾಗ ಈ ಎಲ್ಲಾ ಹಳ್ಳಿಗಳಿಂದ ಬಂದು ಮತ್ತೆ ಅದೇ ರೂಟ್ ಗೆ ಬರಬೇಕು. ಆದರೆ ವಾಹನ ಚಾಲಕ ಹಾಗೂ ನಿರ್ವಾಹಕರು ಸೇರಿ ಮುಳ್ಳೂರು ಗ್ರಾಮದ ರಸ್ತೆ ಹೋಗುವುದರಿಂದ ಮೊದಲ ಹಳ್ಳಿಗಳಿಗೆ ತಡವಾಗುತ್ತದೆ. ಅದಲ್ಲದೆ ಬೆಳಗಿನ ಜಾವ್ 09 ಗಂಟೆ 10 ನಿಮಿಷಕ್ಕೆ ಬರುವ ಬಸ್ಸು ಬೆಳಗ್ಗೆನೆ 10 ಗಂಟೆ ಸುಮಾರಿಗೆ ಬರುತ್ತಾರೆ ವಿದ್ಯಾರ್ಥಿಗಳು ದಿನಾಲು ಪರದಾಡಬೇಕು ಜೊತೆಗೆ ಶಾಲಾ ಶಿಕ್ಷಕರಿಂದ  ಬಹಿಸಿಕೊಳ್ಳಬೇಕಾದಂತ ಪರಿಸ್ಥಿತಿ ಉದ್ಭವವಾಗಿದೆ. ಹಾಗೆ ಸಂಜೆ o4 ಗಂಟೆ 30 ನಿಮಿಷಕ್ಕೆ ಬರಬೇಕಾದ ಬಸ್ಸು ಸಂಜೆ 05 ಗಂಟೆ 30 ನಿಮಿಷವಾದರು ಸಹ ಬಸ್ಸು ಬರುವಲ್ಲಿ ಸಂಪೂರ್ಣ ವಿಪುಲವಾಗಿದೆ. ಆದ್ದರಿಂದ ಶಾಲಾ ವಿದ್ಯಾರ್ಥಿಗಳು ದಿನವಿಡಿ ಬೆಸತ್ತು ಇಂದು ಧೀಡಿರನೆ ಪಟ್ಟಣದ ಬಸ್ಸು ನಿಲ್ದಾಣದಲ್ಲಿಂದು ಧರಣಿ ಕೂರಲು ಮುಂದಾಗಿದ್ದಾರೆ. ಈ ಧರಣಿ ನಿರತರಲ್ಲಿ ಸಾರ್ವಜನಿಕು ಹಾಗೂ ಪಟ್ಟಣದ ಸಂಘ ಸಂಸ್ಥೆಯವರು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರು. ಸ್ಥಳದಲ್ಲಿ ಹಲವು ಗ್ರಾಮದ ಶಾಲಾ ವಿದ್ಯಾರ್ಥಿಗಳು ಪಟ್ಟಣದ ಸ್ಥಳಿಯ ಸರ್ವ ಸದಸ್ಯರು ಹಾಗೂ ಪಟ್ಟಣದ ಪೊಲೀಸ್ ಅಧಿಕಾರಿಗಳು. ಸಿಬ್ಬಂದಿ ವರ್ಗದವರು ಶಾಲಾ ಮಕ್ಕಳಿಗೆ ತಿಳಿ ಹೇಳಿ ಸಂಘ/ ಸಂಸ್ಥೆಯ ಅಧ್ಯಕ್ಷರು ಪಾಲುಗೊಂಡಿದ್ದರು. ಸರ್ವ ಸದಸ್ಯರು ಹಾಗೂ ಪಟ್ಟಣದ ಪೊಲೀಸ್ ಅಧಿಕಾರಿಗಳು. ಸಿಬ್ಬಂದಿ ವರ್ಗದವರು ಈ ಧರಣಿಯಲಿ ಪಾಲುಗೊಂಡು ಕೆಲವು ಆಸ್ವಾಸನೆಗಳ ಮೂಲಕ ಭರವಶೆ ನೀಡಿ, ನಾಳೆ ಮದ್ಯಾಹ್ನದ ವೇಳೆಗೆ ಪ್ರವಾಸಿ ಮಂದಿರದಲ್ಲಿ ಸಿ.ಪಿ.ಐ ಹಾಗೂ ತಾಲೂಕ ದಂಡಾಧಿಕಾರಿಗಳು, ಬಸ್ಸ ಡೀಪೋ ಮೇನೆಜರ, ಹಾಗೂ ಹಳ್ಳಿಯ ಗ್ರಾಮಸ್ಥರು, ಮತ್ತು ಪಟ್ಟಣದ ಸಂಘ/ಸಂಸ್ಥೆಯ ನಾಯಕರೊಂದಿಗೆ ಚರ್ಚಿಸಿ ಅಂತೀಮ ನಿರ್ಣಯ ತೆಗೆದುಕೊಳ್ಳೊಣ ಎಂದು ಕುಷ್ಟಗಿ ಬಸ್ಸ ಡೀಪೊ ರಾಘವೇಂದ್ರರವುರು ಭರವಸೆ ನೀಡಿ ಶಾಲಾ ಮಕ್ಕಳಿಗೆ ತಿಳಿ ಹೇಳಿದರು. ಸ್ಥಳಿಕ ಮಟ್ಟದ ಸಂಘ/ಸಂಸ್ಥೆಯ ನಾಯಕರು ಇವರ ಮಾತಿನಂತೆ ನಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಕುಷ್ಟಗಿ ಪಟ್ಟಣದ ಬಸ್ಸು ಡಿಪೋ ಮುಂದೆ ಎಲ್ಲಾ ವಿಧ್ಯಾರ್ಥಿಗಳನ್ನುಮುಂದಿಟ್ಟುಕೊಂಡು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ವರದಿ – ಉಪ್ಪಳೇಶ ನಾರಿನಾಳ

Leave a Reply

Your email address will not be published. Required fields are marked *