ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ.
ವಿಜಯನಗರ ಜಿಲ್ಲೆ ಕೂಡ್ಲಿಗಿ ,ಸರ್ವೆ ಪಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸೇರ್ಪಡೆ ಮಾಡಲು ಒತ್ತಾಯ.!! ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಲೂಕ ಕಚೇರಿ ಮುಂದೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘ ಕೂಡ್ಲಿಗಿ ಇವರಿಂದ ಮಾನ್ಯ ತಹಶೀಲ್ದಾರ್ ಮುಖಾಂತರ ಮಾನ್ಯ ಹಾಲಪ್ಪ ಆಚಾರ್ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಒಂದು ವರ್ಷ ಬಾಕಿ ಇರುವ ಪೆನ್ಷನ್ ಹಣ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಸರ್ವೇ ಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸೇರ್ಪಡೆ ಮಾಡಲು ಒತ್ತಾಯಿಸಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವುದರ ಮೂಲಕ ಮನವಿ ಪತ್ರವನ್ನು ತಹಶೀಲ್ದಾರರ ಸಮ್ಮುಖದಲ್ಲಿ ಉಪ ತಾಹಶಿಲ್ದಾರ್ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವದಾಸಿಯರ ಬೇಡಿಕೆಗಳಾದ ಒಂದು ವರ್ಷದಿಂದ ಬಾಕಿ ಪೆನ್ಷನ್ ಹಣ ಬಿಡುಗಡೆ ಮಾಡಬೇಕು, ಸರ್ಕಾರವೇ ಘೋಷಣೆ ಮಾಡಿದ ಪೆನ್ಷನ್ 500 ಜಾರಿ ಮಾಡಬೇಕು ಹಾಗೂ ಸರ್ವೆಪಟ್ಟಿಯಿಂದ ಬಿಟ್ಟು ಹೋದಂತೆ ಮಹಿಳೆಯರನ್ನು ಪುನಹ ಸರ್ವೇಪಟ್ಟಿಗೆ ಸೇರ್ಪಡೆ ಮಾಡಬೇಕು ಹಾಗೂ ಎಲ್ಲಾ ದೇವದಾಸಿ ಮಹಿಳೆಯರಿಗೆ ಉಪಕಸುಬು ಮಾಡಲು 5ಲಕ್ಷ ಸಾಲ ಸೌಲಭ್ಯ ನೀಡಬೇಕು. ಇದರಲ್ಲಿ ಶೇಕಡ 25ರಷ್ಟು ಹಾಗೂ ಪ್ರತಿದಿನ ಕುಟುಂಬಕ್ಕೆ 80*80 ಚದರ ಅಡಿಯ ಜಾಗ ನೀಡಿ ನಿವೇಶನ ವಸತಿ ಕಲ್ಪಿಸಬೇಕು, ದೇವದಾಸಿ ಮಹಿಳೆಯರಿಗೆ ಕೃಷಿಗೆ ಯೋಗ್ಯವಾದ 5 ಎಕರೆ ಭೂಮಿಯನ್ನು ಕೊಡಬೇಕು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಹೀಗೆ ಹತ್ತಾರು ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವದಾಸಿ ವಿಮೋಚನ ಸಂಘದ ತಾಲೂಕ ಅಧ್ಯಕ್ಷರಾದ ಕನಕೇರಿ ವೆಂಕಮ್ಮ ಇವರು ಮಾತನಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಹಾಗೂ ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿಯಾದ ಗುನ್ನಳ್ಳಿ ರಾಘವೇಂದ್ರ ಹಾಗೂ ತಾಲೂಕು ದೇವದಾಸಿ ಸಂಘದ ಕಾರ್ಯದರ್ಶಿಯಾದ ದುರ್ಗಮ್ಮ, ದೇವಕ್ಕ, ಹುಲಿಗಮ್ಮ, ಬಸಮ್ಮ, ಉಚ್ಚೆಂಗಮ್ಮ, ಸೋಮಕ್ಕ, ವಿಜಯಮ್ಮ, ಅಂಜಿನಮ್ಮ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.
ವರದಿ- ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428