ತಾವರಗೇರಾ ಪಟ್ಟಣದಿಂದ ನೇರವಾಗಿ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸು ಕಲ್ಪಿಸುವ ಕುರಿತು ತುರ್ತು ಚರ್ಚೆಯಲಿ ವಿಧ್ಯಾರ್ಥಿ ವರ್ಗಕ್ಕೆ ಸ್ಪಂದಿಸಿದ ಅಧಿಕಾರಿ ವರ್ಗ,,,,,,,
ತಾವರಗೇರಾ ಪಟ್ಟಣದಿಂದ ನೇರವಾಗಿ ನಾರಿನಾಳ, ಗರ್ಜಿನಾಳ, ಜುಲಕುಂಟಿ, ಮ್ಯಾಗಳಡೊಂಕ್ಕಿ ಗ್ರಾಮಸ್ಥರು ಹಾಗೂ ವಿಧ್ಯಾರ್ಥಿಗಳಿಂದ ಸಾಕಷ್ಟು ಸಾರಿ ಮನವಿ ಮಾಡಿದರು ಸ್ಪದಿಸದ ಅಧಿಕಾರಿಗಳಿಗೆ ತಾರಟೆ ತೇಗೆದುಕೊಂಡರು. ಪ್ರತಿ ದಿನವೂ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸರಿಯಾದ ಸಮಯಕ್ಕೆ ಬಸ್ಸು ಬಾರದ ಕಾರಣ ನಿನ್ನೆ ಅಂದರೆ ದಿನಾಂಕ 19/07/2022 ರಂದು ತಾವರಗೇರಾ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದೆವು. ಈ ಎಲ್ಲಾ ಹಳ್ಳಿಗಳಿಂದ ಸುಮಾರು 200 ಶಾಲಾ ವಿಧ್ಯಾರ್ಥಿಗಳು ತಾವರಗೇರಾ ಪಟ್ಟಣಕ್ಕೆ ದಿನ ನಿತ್ಯ ಓದಲು ಬರುತ್ತಿದ್ದಾರೆ, ಕಾರಣ ಸುಮಾರು ತಿಂಗಳುಗಳಿಂದ ಮನವಿ ಮಾಡಿದರು ಸಹ ಸ್ಪಂದನೆ ಇಲ್ಲಾ. ತಾವರಗೇರಾ ಪಟ್ಟಣದ ಹತ್ತಿರ ಬರುವ ನಾರಿನಾಳ. ಗ್ರಾಮದಿಂದ ಅಂದಾಜು 40 ರಿಂದ 50 ವಿದ್ಯಾರ್ಥಿಗಳು, ಗರ್ಜಿನಾಳ. ಗ್ರಾಮದಿಂದ ಅಂದಾಜು 50 ರಿಂದ 60 ಜುಲಕುಂಟಿ. ಗ್ರಾಮದಿಂದ ಅಂದಾಜು 25 ರಿಂದ 30 ಮ್ಯಾಗಳಡೊಕ್ಕಿ ಗ್ರಾಮದಿಂದ ಅಂದಾಜು 40 ರಿಂದ 50 ವಿದ್ಯಾರ್ಥಿಗಳು ಇದ್ದು, ನೇರವಾಗಿ ಬಸ್ಸು ಗ್ರಾಮಕ್ಕೆ ಹೋಗಿ ಮತ್ತೆ ಅದೇ ರೂಟಿಗೆ ಬರುವ ವ್ಯವಸ್ತೆ ಇದ್ದು. ಆದರೆ ವಾಹನ ಚಾಲಕ ಹಾಗೂ ನಿರ್ವಾಹಕರು ಸೇರಿ ಮುಳ್ಳೂರು ಗ್ರಾಮದ ರಸ್ತೆ ಹೋಗುವುದರಿಂದ ಮೊದಲ ಹಳ್ಳಿಗಳಿಗೆ ತಡವಾಗುತ್ತದೆ. ಅದಲ್ಲದೆ ಬೆಳಗಿನ ಜಾವ್ 09 ಗಂಟೆ 10 ನಿಮಿಷಕ್ಕೆ ಬರುವ ಬಸ್ಸು ಬೆಳಗ್ಗೆ 10 ಗಂಟೆಯಾದರು ಬರುವುದಿಲ್ಲ. ವಿದ್ಯಾರ್ಥಿಗಳು ದಿನಾಲು ಪರದಾಡಬೇಕು ಜೊತೆಗೆ ಶಾಲಾ ಶಿಕ್ಷಕರಿಂದ ಬಹಿಸಿಕೊಳ್ಳಬೇಕಾಗುತ್ತದೆ.
ಹಾಗೆ ಸಂಜೆ o4 ಗಂಟೆ 30 ನಿಮಿಷಕ್ಕೆ ಬರಬೇಕಾದ ಬಸ್ಸು ಸಂಜೆ 05 ಗಂಟೆ 30 ನಿಮಿಷವಾದರು ಸಹ ಬಸ್ಸು ಬರುವಲ್ಲಿ ಸಂಪೂರ್ಣ ವಿಪುಲವಾಗಿದೆ. ಆದ್ದರಿಂದ ಮನೆಯಲ್ಲಿ ಸಮಸ್ಯಗಳು ಉಂಟಾಗುತ್ತಿದ್ದಾವೆ, ಇತ್ತ ಶಾಲಾ ವಿದ್ಯಾರ್ಥಿಗಳು ದಿನವಿಡಿ ಬೆಸತ್ತು ನಿನ್ನೆ ಅಂದರೆ ದಿನಾಂಕ 19/07/2022 ರಂದು ತಾವರಗೇರಾ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದೆವು. ಸ್ಥಳದಲ್ಲಿ ಹಲವು ಗ್ರಾಮದ ಶಾಲಾ ವಿದ್ಯಾರ್ಥಿಗಳು ಪಟ್ಟಣದ ಸ್ಥಳಿಯ ಸಂಘ/ಸಂಸ್ಥೆಯ ಅದ್ಯಕ್ಷರು ಹಾಗೂ ಸರ್ವ ಸದಸ್ಯರು, ಸಾಮಾಜೀಕ ಹೋರಾಟಗಾರರು ಈ ಧರಣಿಯಲ್ಲಿ ಪಾಲುಗೊಂಡು ವಿಧ್ಯಾರ್ಥಿ ಬಳಗಕ್ಕೆ ಬೆಂಬಲ ಸೂಚಿಸಿದರು. ಪಟ್ಟಣದ ಪೊಲೀಸ್ ಅಧಿಕಾರಿಗಳು. ಸಿಬ್ಬಂದಿ ವರ್ಗದವರು ಹಾಗೂ ಬಸ್ಸು ಡಿಪೋ ಸಿಬ್ಬಂದಿಗಳು ಶಾಲಾ ಮಕ್ಕಳಿಗೆ ತಿಳಿ ಹೇಳಿ ಕೆಲವು ಭರವಸೆಗಳ ಮೂಲಕ ಬರವಸೆ ನೀಡಿ, ನಾಳೆ ಮದ್ಯಾಹ್ನದ ವೇಳೆಗೆ ಪ್ರವಾಸಿ ಮಂದಿರದಲ್ಲಿ ಸಿ.ಪಿ.ಐ ಹಾಗೂ ತಾಲೂಕ ದಂಡಾಧಿಕಾರಿಗಳು, ಬಸ್ಸ ಡೀಪೋ ಮ್ಯಾನೇಜರ್, ಹಾಗೂ ಹಳ್ಳಿಯ ಗ್ರಾಮಸ್ಥರು, ಮತ್ತು ಪಟ್ಟಣದ ಸಂಘ/ಸಂಸ್ಥೆಯ ನಾಯಕರೊಂದಿಗೆ ಚರ್ಚಿಸಿ ಅಂತೀಮ ತಿರ್ಮಾನ ತೆಗೆದುಕೊಳ್ಳೊಣ ಎಂದು ಭರವಸೆ ನೀಡಿ ಶಾಲಾ ಮಕ್ಕಳಿಗೆ ತಿಳಿ ಹೇಳಿದರು. ಸ್ಥಳಿಕ ಮಟ್ಟದ ಸಂಘ/ಸಂಸ್ಥೆಯ ನಾಯಕರು ಇವರ ಮಾತಿನಂತೆ ನಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಕುಷ್ಟಗಿ ಪಟ್ಟಣದ ಬಸ್ಸು ಡಿಪೋ ಮುಂದೆ ಎಲ್ಲಾ ವಿಧ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ನಿನ್ನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆವು. ಹಾಗಾಗಿ ತಮ್ಮಲ್ಲಿ ಈ ಮನವಿ ಮೂಲಕ ಮನವಿ ಮಾಡಿಕೊಳ್ಳುವುದೇನಂದರೆ ಮುಂದಿನ ದಿನದಿಂದ (ನಾಳೆಯಿಂದ) ನಮಗೆ ಸರಿಯಾದ ಸಮಯಕ್ಕೆ ಅಂದರೆ ದಿನ ನಿತ್ಯ ಬೆಳಗ್ಗೆ 09 ಗಂಟೆಗೆ ಸಂಜೆ 4 ಗಂಟೆಗೆ ಹಾಗೂ ಪ್ರತಿ ಶನಿವಾರ ಬೆಳಗ್ಗೆ 08 ಗಂಟೆಗೆ ಮದ್ಯಾಹ್ನ 01 ಗಂಟೆಗೆ ಬಸ್ಸು ಕಳುಹಿಸಬೇಕು, ಮಕ್ಕಳ ಸಂಖ್ಯೆಯ ಅನುಗುಣವಾಗಿ ಅಂದಾಜು ಎರಡು ಹಳ್ಳಿಗೆ ಒಂದು ಪ್ರತ್ತೇಕ ಬಸ್ಸು ಬಿಡಬೇಕು, ಮುಂದಿನ ಮಕ್ಕಳ ಭವಿಷ್ಯಕ್ಕೆ ಕುತ್ತು ತರಕೂಡದು ಎಂದು ಊರಿನ ಗ್ರಾಮಸ್ಥರು ಹಾಗೂ ಪಟ್ಟಣದ ಸ್ಥಳಿಯ ಸಂಘ/ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗಿಯಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ವಿಧ್ಯಾರ್ಥಿಗಳ ಮನವಿಗೆ ಕುಷ್ಟಗಿ ಬಸ್ಸು ಡಿಪೋ ವ್ಯವಸ್ಥಾಪಕರು ಈ ಮನವಿಗ ಸ್ಫಂದಿಸಿ ನಾಳೆಯಿಂದಲೆ ಸಮಯ ಬದಲವಾಣೆ ಮಾಡುತ್ತೆವೆ,ಮುಂದೆ ಈ ರೀತಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುತ್ತೇನೆಂದು ಒಪ್ಪಿಕೊಂಡರು.
ಸಂದರ್ಭದಲ್ಲಿ ಹಳ್ಳಿಯ ಗ್ರಾಮಸ್ಥರು, ಹಾಗೂ ಪಟ್ಟಣದ ಸಂಘ/ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಭಾಗಿಯಾಗಿ ಸರಿಯಾದ ಸಮಯಕ್ಕೆ ಹಳ್ಳಿಗಳಿಗೆ ಬಸ್ಸು ಒದಗಿಸುವ ಚರ್ಚೆ ಯಶಸ್ವಿಯಾಯಿತು. ಈ ವೇಳೆಯಲ್ಲಿ ಕುಷ್ಟಗಿ ನಗರದ ಬಸ್ಸು ಡಿಪೋ ಮ್ಯಾನೇಜರಗಳಾದ ಶ್ರೀ ಸಂತೋಷ ಶೇಟ್ಟಿ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶ್ರೀಮತಿ ವೈಶಾಲಿ ಝಳಕಿ ಹಾಗೂ ಪೋಲಿಸ್ ಸಿಬ್ಬಂದಿಗಳ ವರ್ಗ ಮಕ್ಕಳಲ್ಲಿ ಮನವಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಬಸ್ಸು ಬರುತ್ತದೆ, ಎಂದು ತಿಳಿ ಹೇಳಿದರು, ಹೀರಿಯ ಹೋರಾಟಗಾರರಾದ ಆನಂದ್ ಬಂಡಾರಿ, ರಾಜಾನಾಯಕ, ಯಮನೂರಪ್ಪ ಬಿಳೆಗುಡ್ಡ, ಸಿದ್ದು ಪುಂಡಗೌಡ್ರು, ಹಾಗೂ ಇತರರು ಪಾಲುಗೊಂಡಿದ್ದರು.
ವರದಿ – ಉಪ್ಪಳೇಶ ವಿ.ನಾರಿನಾಳ