ಹುಮನಾಬಾದ ಪಟ್ಟಣದಲ್ಲಿಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆ ರವರ ಅದ್ದೂರಿ 80 ನೇ ಜನ್ಮ ದಿನಾಚರಣೆ ಆಚರಿಸಲಾಯಿತು….

Spread the love

ಹುಮನಾಬಾದ ಪಟ್ಟಣದಲ್ಲಿಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆ ರವರ ಅದ್ದೂರಿ 80 ನೇ ಜನ್ಮ ದಿನಾಚರಣೆ ಆಚರಿಸಲಾಯಿತು….

ಇಂದು ಹುಮನಾಬಾದ ಪಟ್ಟಣದ ಮಾನ್ಯ ಶಾಸಕರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹುಮನಾಬಾದ ಹಾಗೂ ಯುವ ಕಾಂಗ್ರೆಸ್ ರವರು ಆಯೋಜಿಸಿರುವ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸನ್ಮಾನ್ಯ ಶ್ರೀ ಡಾ. ಮಲ್ಲಿಕಾರ್ಜುನ ಖರ್ಗೆ ರವರ 80 ನೇ ಜನ್ಮ ದಿನಾಚರಣೆಯನ್ನು ಟಿಎಪಿಸಿಎಂಎಸ್ ಅಧ್ಯಕ್ಷರು ಹಾಗೂ ಯುವ ನಾಯಕ ಶ್ರೀ ಅಭಿಷೇಕ ಆರ್ ಪಾಟೀಲ್ ರವರು ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನುವ ಮೂಲಕ ಆಚರಿಸಿ, ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ನಂತರ ಯುವ ನಾಯಕ ಶ್ರೀ ಅಭಿಷೇಕ ಆರ್ ಪಾಟೀಲ್ ರವರು (ಮಾನ್ಯ ಅಧ್ಯಕ್ಷರು) ಮಾತನಾಡುತ್ತ  ಕಾಂಗ್ರೆಸನ ಹಿರಿಯ ಮುಖಂಡರಾದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ್ ಖರ್ಗೆ ಜಿ ರವರು ಸುಮಾರು 50 ದಶಕಗಳಿಂದ ರಾಜಕೀಯ ಜೀವನದಲ್ಲಿ ಅಜಾತಶತ್ರುವಾಗಿ ರಾಜ್ಯ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಪಕ್ಷದಲ್ಲಿ ವಿವಿಧ ಸ್ಥಾನಗಳು ಅಲಂಕರಿಸಿ ರಾಜ್ಯದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಸರ್ವಾಂಗಿಣ ಅಭಿವೃದ್ಧಿಗೆ ಆರ್ಟಿಕಲ್ 371 ಜಾರಿ, ಇಎಸ್ಐ ಆಸ್ಪತ್ರೆ, ರೈಲ್ವೆ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಈ ಭಾಗಕ್ಕೆ ಒದಗಿಸಿ ಕೊಟ್ಟಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಆಫ್ಸರ್ಮಿಮಿಯಾ, ರಾಜೀವಗಾಂಧಿ ವಸತಿ ನಿಗಮದ ಮಾಜಿ ನಿರ್ದೇಶಕ ಶ್ರೀ ಮಲ್ಲಿಕಾರ್ಜುನ್ ಮಹೇಂದ್ರಕರ್, ಯುವ ನಾಯಕ ರುದ್ರಂ ಬಿ ಪಾಟಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಉಮೇಶ ಜಮಗಿ, ಮಲ್ಲಿಕಾರ್ಜುನ ಶರ್ಮ,  ಸುರೇಶ ಘಾಂಗ್ರೆ, ವಿಜಯಕುಮಾರ ಶಿವಪುರ, ಗೌತಮ್ ಪ್ರಸಾದ್, ಶಿವರಾಜ್, ದತ್ತೂ ಸುಣ್ಣ, ವೀರಪ್ಪ ಭೂತಾಳೆ, ಸತೀಶ್ ರತ್ನಾಕರ್, ಸೈಯದ್ ಜಾಫರ್, ಶಾಂತವೀರ ಸ್ವಾಮೀ, ಜಯಕುಮಾರ ಸಾಗರ, ಅನಿಲ ಕಬೀರಾಬಾದೆ, ಡಾ ಮಲ್ಲಿಕಾರ್ಜುನ ಖರ್ಗೆ ಜಿ ರವರ ಅಭಿಮಾನಿಗಳು ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ವರದಿ~ಮೌನೇಶ್ ರಾಥೋಡ್ ಹುಮನಾಬಾದ್

Leave a Reply

Your email address will not be published. Required fields are marked *