ಕರ್ನಾಟಕ ರೈತ ಸಂಘ (kRS) ಮಸ್ಕಿ, ಸಿಂಧನೂರು ತಾಲೂಕ ಸಮತಿ ನೇತೃತ್ವದಲ್ಲಿ ಸಿಂಧನೂರು ತಹಶೀಲ್ದಾರ್ ಕಾರ್ಯಾಲಯದ ಮುಂದೆ ಅನೀದಿರ್ಷಟ ಧರಣಿ….
ಅನಿರ್ದಿಷ್ಟಾವಧಿ ಧರಣೆ ಸತ್ಯಾಗ್ರಹ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ರಾಯಚೂರು ಜಿಲ್ಲಾಧಿಕಾರಿಯಾದ ಎಲ್. ಚಂದ್ರಶೇಖರ ನಾಯಕ, ಲಿಂಗಸೂಗರ ಸಹಾಯಕ ಆಯುಕ್ತರಾದ ರಾಹುಲ್ ಸಂಕನೂರ, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಇವರುಗಳು ಧರಣಿ ಸ್ಥಳಕ್ಕೆ ಬಂದು ಮನವಿ ಪಡೆದುಕೊಂಡು ಚರ್ಚೆ ನಡೆಸಿದರು. ಕರ್ನಾಟಕ ರೈತ ಸಂಘ (kRS) ಮಸ್ಕಿ, ಸಿಂಧನೂರು ತಾಲೂಕ ಸಮತಿ ನೇತೃತ್ವದಲ್ಲಿ ಸಿಂಧನೂರು ತಹಶೀಲ್ದಾರ್ ಕಾರ್ಯಾಲಯದ ಮುಂದೆ ದಿನಾಂಕ :19/7/2022 ರಿಂದ ನಡೆದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡು ದಿನಗಳ ವರೆಗೆ ನಡೆಯಿತು. ಕರ್ನಾಟಕ ರೈತ ಸಂಘ (kRS) ದ ರಾಜ್ಯಾಕ್ಷ ರಾದ ಡಿ. ಎಚ್. ಪೂಜಾರ್, ಜಿಲ್ಲಾಧ್ಯಕ್ಷರಾದ ಅಶೋಕ್ ನಿಲೋಗಲ್, . ಜಿಲ್ಲಾ ಕಾರ್ಯದರ್ಶಿ ಬಿ. ಎನ್. ಯಾರದಿಹಾಳ್. ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್, ಮಾತನಾಡಿದರು. ಸಿಂಧನೂರು ತಾ. ಅಧ್ಯಕ್ಷ. ರಮೇಶ್ ಪಾಟೀಲ್.ಬೆರಗಿ ತಾಲೂಕು ಉಪಾಧ್ಯಕ್ಷ ಚಿಟ್ಟಿಬಾಬು,ಮಸ್ಕಿ ತಾ.ಅಧ್ಯಕ್ಷರಾದ ಸಂತೋಷ ದಿನ್ನಿ, ಮಾರುತಿ ಜಿನ್ನಾ ಪುರ, ಮಾನ್ವಿ ತಾ.ಅಧ್ಯಕ್ಷ ವೀರೇಶ ನಾಯಕ, ಶಿರವಾರ, ಅಧ್ಯಕ್ಷರಾದ ನಾಗರಾಜ್ ಬೊಮ್ಮನಾಳ, ಶಿರವಾರ ತಾ.ಕಾರ್ಯದರ್ಶಿ ಹುಲುಗಪ್ಪ ಮಡಿವಾಳರ, ಬಸವರಾಜ ಬೆಳಗುರ್ಕಿ, ನೇತೃತ್ವದಲ್ಲಿ ಧರಣಿ ನಡೆಯಿತು. ಕಂದಾಯ ಸಚಿವ ಆರ್ ಅಶೋಕ್ , ಸರಕಾರಿ ಜಮೀನನ್ನು ಸಾಗುವಳಿ ಮಾಡುವ ಭೂ ಹೀನ ಬಡ ರೈತರಿಗೆ ಭೂ ಮಂಜೂರಾತಿ ಕೊಡುವುದಿಲ್ಲ. ಸರ್ಕಾರಕ್ಕೆ ಗುತ್ತಿಗೆ ರೂಪದಲ್ಲಿ ಹಣ ಕೊಡಲು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸೂಚನೆ (ಅಶೋಕ್) ಕೊಟ್ಟಿದ್ದಾರೆ. ಮಸ್ಕಿ. ಸಿಂಧನೂರು ಶಾಸಕರುಗಳು, ಈ ಭೂ ಗುತ್ತಿಗೆ ಕಾಯ್ದೆ ತಿದ್ದುಪಡಿಗೆ ವಿರೋಧ ಮಾಡಲು ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಲು ಒತ್ತಾಯಿಸಲಾಯಿತು ಕರ್ನಾಟಕ ರೈತ ಸಂಘ (AIKKS) ತಾಲೂಕ ಸಮಿತಿ ಮಸ್ಕಿ- ಸಿಂಧನೂರು
ವರದಿ – ಉಪ್ಪಳೇಶ ವಿ.ನಾರಿನಾಳ