ಶಿವಾನಂದ ಮಂಠಾಳಕರ್ ರವರ 57ನೇ ಜನ್ಮದಿನ ಆಚರಣೆ.
ಹುಮನಾಬಾದ – ಶಿವಾನಂದ ಮಂಠಾಳಕರ್ ಅವರ ಜೀವನ ಮತ್ತು ಪರಿಶ್ರಮ ಇಂದಿನ ಎಲ್ಲಾ ಹಿರಿ, ಕಿರಿಯ ಕಾರ್ಯಕರ್ತರಿಗೆ ಮಾದರಿಯಾಗಿದ್ದು, ಅವರ ಸರಳತೆ, ತಾಳ್ಮೆ, ನಡೆ ನುಡಿ, ಸಾಮಾಜಿಕ ಕಾರ್ಯಗಳನ್ನು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿವೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥ ಮಲ್ಕಾಪುರೆ ರವರು ಹೇಳಿದರು. ನಗರದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗೆಳತಿಯರ ಬಳಗದ ವತಿಯಿಂದ ಆಯೋಜಿಸಿದ್ದ ಬೀದರ್ ಜಿಲ್ಲೆಯ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಶ್ರೀ ಶಿವಾನಂದ ಮಂಠಾಳಕರ್ ರವರ 57ನೇ ಹುಟ್ಟು ಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಿವಾನಂದರವರು ಶಿಸ್ತಿಗೆ ಹೆಸರಾದವರು, ಸ್ಪೂರ್ತಿದಾಯಕ ಹಾಗೂ ಅತ್ಯುತ್ತಮ ಸ್ನೇಹ ಜೀವಿಯಾಗಿ ಸರ್ವ ಜನಾಂಗದವರೊಂದಿಗೆ ಸೌಹಾರ್ದತೆ ಮತ್ತು ಸೋದರತ್ವದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಸೇವಾ ಚಟುವಟಿಕೆಗಳು ಹೀಗೆ ಸದಾಕಾಲ ಸಕ್ರಿಯವಾಗಿ ಸಾಗಲಿ ಎಂದು ಶುಭ ಹಾರೈಸಿದರು. ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ಶರಣು ಸಲಗರ,ರಾಜ್ಯ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ,ಮಾಜಿ ಶಾಸಕರಾದ ಸುಭಾಷ್ ಕಲ್ಲೂರ್,ಮಾಜಿ ಬಿಜೆಪಿಯ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ, ಬಿಜೆಪಿಯ ವಿಭಾಗಿಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ, ಬಿಜೆಪಿಯ ಮುಖಂಡರಾದ ಸಿದ್ದು ಪಾಟೀಲ,ಪ್ರಕಾಶ ಟೋಣ್ಣೆ,ಪ್ರಭಾಕರ ನಾಗರಾಳೆ, ಸೇರಿದಂತೆ ಹಲವು ಪ್ರಮುಖರು ಮಾತನಾಡಿ ಶಿವಾನಂದ್ ಮಂಠಾಳಕರವರ ಸಾಧನಾ ಸೇವೆಯನ್ನು ಕೊಂಡಾಡಿ, ಜನ್ಮದಿನದ ಶುಭಾಶಯಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ್ ಖೂಬಾ, ಹುಮನಾಬಾದ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ರಾಜಶೇಖರ ಪಾಟೀಲರು, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೀರಣ್ಣಾ ಪಾಟೀಲರು ಸೇರಿದಂತೆ ಹಲವು ಮುಖಂಡರು ಶಿವಾನಂದ ಮಂಠಾಳಕರ್ ರವರಿಗೆ ಆತ್ಮೀಯವಾಗಿ ಸನ್ಮಾನಿಸಿ, ಜನ್ಮದಿನದ ಶುಭಾಶಯಗಳು ಕೋರಿದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಸೂರ್ಯಕಾಂತ ಮಠಪತಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಚಿನ್ ಮಠಪತಿ ನಿರೂಪಿಸಿ,ವಂದಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖಂಡರಾದ ವಿಶ್ವನಾಥ ಪಾಟೀಲ, ಹಣಮಂತರಾವ ಪಾಟೀಲ, ಗಜೇಂದ್ರ ಕನಕಟಕರ್, ಅಭಿಮನ್ಯು ನೀರಗುಡೆ,ಡಿ.ಸಿ ಬಿರಾದಾರ,ದೀಪಕ ಗಾಯಕವಾಡ, ರಾಘು ಜಾಜಿ ಸೇರಿದಂತೆ ಅಭಿಮಾನಿ ಬಂಧುಗಳು ಭಾಗವಹಿಸಿದ್ದರು. ಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದ ಸರಳತೆಯ ಸ್ನೇಹಜೀವಿ, ತಾಳ್ಮೆ ಸಹನೆ ಸೌಜನ್ಯತೆಯ ಸಹಕಾರ ಮೂರ್ತಿ, ನುಡಿದಂತೆ ನಡೆಯುವ ಧೀಮಂತ ರಾಜಕೀಯ ನಾಯಕ, ಸೌಹಾರ್ದತೆ ಸೋದರತ್ವದ ಆಶಾಕಿರಣ ಶ್ರೀ ಶಿವಾನಂದ ಮಂಠಾಳಕರ್ ರವರಿಗೆ 57ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಕೊರುತ್ತೇವೆ. ನಿಮ್ಮ ಸಾಧನ ಸೇವೆ ಬಾನಂಗಳಕ್ಕೆ ಮುಟ್ಟಲಿ, ಜನಮಾನಸದಲ್ಲಿ ನಿಮ್ಮ ನಿಸ್ವಾರ್ಥ ಸೇವಾ ಚಟುವಟಿಕೆಗಳು ಅಚ್ಚ ಅಳಿಯದೆ ಉಳಿಯಲೆಂದು ಶುಭ ಹಾರೈಸುತ್ತೇವೆ.
ವರದಿ – ಸಂಗಮೇಶ ಎನ್ ಜವಾದಿ.