ಅಮ್ ಆದ್ಮಿ ಪಕ್ಷದಿಂದ ಗ್ರಾಮ ಸಂಪರ್ಕ ಅಭಿಯಾನ,,,, ಬಡವರ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಪಕ್ಷ,,,, ಬಸವರಾಜ್ ಮ್ಯಾಗಳಮನಿ,,,
ಅರವಿಂದ್ ಕ್ರೇಜಿ ವಾಲ್ ನೇತ್ರತ್ವದ ದೆಹಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಬಡವರ ಹಾಗೂ ದೇಶದ ಸರ್ವಾಂಗೀನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಪಕ್ಷವಾಗಿದೆ.ಕರ್ನಾಟಕದಲ್ಲಿ ಸಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವನ್ನು ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಹೇಳಿದರು, ಅವರು ಶನಿವಾರದಂದು ಪತ್ರಿಕಾಭಾವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈಗಾಗಲೇ ಗ್ರಾಮೀಣ ಘಟಕದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಸಭೆ ನಡೆಸಿ ಗ್ರಾಮ ಸಂಪರ್ಕ ಅಭಿಯಾನವನ್ನು ನಡೆಸಲಾಗಿದ್ದು ಗ್ರಾಮಸ್ಥರಿಂದ ಉತ್ತಮವಾದ ಪ್ರತಿಕ್ರಿಯೆ ದೊರಕಿದೆ ಎಂದು ತಿಳಿಸಿದರು, ಆನೆಗುಂದಿ ಸಂಗಾಪುರ ಬೂದುಗುಂಪ ಸೇರಿದಂತೆ ಗ್ರಾಮ ಸಂಪರ್ಕ ಅಭಿಯಾನವನ್ನು ಆಯೋಜಿಸಲಾಗಿದೆ, ಜೊತೆಗೆ ಕ್ರೇಜಿ ವಾಲ್ ಆಡಳಿತದ ವೈಖರಿ ಪಂಜಾಬ್ ಸರ್ಕಾರದ ದಕ್ಷ ಆಡಳಿತ ಕುರಿತು ಗ್ರಾಮಸ್ಥರಿಗೆ ಮಾಡಲಾಗಿದ್ದ ಪ್ರಯುಕ್ತ ಸಾಕಷ್ಟು ಗ್ರಾಮಸ್ಥರು ಈಗಾಗಲೇ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದ ವೈಫಲ್ಯಗಳನ್ನು, ಬ್ರಷ್ಟಾಚಾರ, ಪೊಲೀಸ್ ನೇಮಕಾತಿಯಲ್ಲಿ ಜೈಲು ಪಾಳಾದ ಹಿರಿಯ ಅಧಿಕಾರಿಗಳು ಇವೆಲ್ಲವೂ ಸರಕಾರದ ವೈಫಲ್ಯಗಳ ಬಗ್ಗೆ ಮನವರಿಕೆಮಾಡಲಾಗಿದೆ, ಜೊತೆಗೆ ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಿಗೆ ಇಲ್ಲ , ಶುದ್ಧವಾದ ಕುಡಿಯುವ ನೀರು ವಿದ್ಯುತ್ ದೀಪ ಸೇರಿದಂತೆ ಉಚಿತವಾಗಿದೆ ಎಂದು ತಿಳಿಸಿದ ಅವರು ತಮ್ಮ ಪಕ್ಷ ಮುಖ್ಯವಾಗಿ ಶಿಕ್ಷಣ ಆರೋಗ್ಯ ಹಾಗೂ ವಸತಿ ಉದ್ಯೋಗ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಸಮಗ್ರ ಮಾಹಿತಿ ನೀಡಿದರು, ಜಿಲ್ಲಾ ಅಧ್ಯಕ್ಷ ಹುಸೇನಪ್ಪ ಗಂಗಾನಾಳ ಮಾತನಾಡಿ ರಾಜ್ಯದ ಜನತೆ ಈಗಾಗಲೇ ಸಮ್ಮಿಶ್ರ ಸರ್ಕಾರ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತವನ್ನು ಸೂಕ್ಷ್ಮವಾಗಿ ಗಮನಿಸಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ರಾಜ್ಯದ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಿ ದಲ್ಲಿ ಪಾರದರ್ಶಕ ಅಭಿವೃದ್ಧಿಪರ ಕಾರ್ಯಗಳನ್ನು ನಡೆಸುವ ಅಭಿಲಾಷೆಯನ್ನು ಪಕ್ಷದ ರಾಜ್ಯ ನಾಯಕರು ಸೂಚಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಅಮ್ ಆದ್ಮಿ ಪಕ್ಷವು ಗ್ರಾಮಾಂತರ ಪ್ರದೇಶ ದಿಂದ ಹಿಡಿದು ರಾಜ್ಯದ್ಯಂತ ಸಂಘಟನೆಗೆ ಮುಂದಾಗುತ್ತಿದೆ ಎಂದು ತಿಳಿಸಿದರು, ತಾಲೂಕ ಅಧ್ಯಕ್ಷ ನ್ಯಾಯವಾದಿ ಶರಣಪ್ಪ ಸಜ್ಜೀಹೊಲ ನಗರ ಘಟಕದ ಅಧ್ಯಕ್ಷ ಪರಶುರಾಮ, ಒಡೆಯರ ಬೋಗೇಶ್ ಆನೆಗುಂದಿ ಉಪಸ್ಥಿತರಿದ್ದರು.
ವರದಿ – ಸಂಪಾದಕೀಯ