ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಆಕಳು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ..

Spread the love

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಆಕಳು  ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ..

 ದಿನಾಂಕ 21/07/2022  ರಂದು ಸಮಯ  11:09 ಕ್ಕೆ  ಗುರುವಾರ  ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದ ತಕ್ಷಣ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ವಾಯ್.ಬಿ.ಕೌಜಲಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ  ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 70ರಿಂದ 80 ಅಡಿ ಆಳದಲ್ಲಿ ಆಕಳು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 20 ನಿಮಿಷಗಳ ಕಾಲ ಕಷ್ಟಕರ ಕಾರ್ಯಚರಣೆಯಲ್ಲಿ ಆಕಳನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು.  *ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು*01) ಶ್ರೀ ವಾಯ್ ಬಿ.ಕೌಜಲಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ 02) ಶ್ರೀ ಪ್ರಶಾಂತ.ಚವ್ಹಾಣ. ಅಗ್ನಿಶಾಮಕ ಚಾಲಕರು 03) ಶ್ರೀ ಪ್ರಕಾಶ ಆಲಿಶೇಟ್ವಿ      ಅಗ್ನಿಶಾಮಕರು 04) ಶ್ರೀ ರವೀಂದ್ರ ಸಂಗಮ್  ಅಗ್ನಿಶಾಮಕರು 05)ಶ್ರೀ ಸಂಜೀವ ಚೌಗಲಾ.ಅಗ್ನಿಶಾಮಕರು   06) ಶ್ರೀ.ಸಂತೋಷ.ಚೌಗುಲಾ ಅಗ್ನಿಶಾಮಕರು 07)ಶ್ರೀ.ಶಿವಯ.ಮಠಪತಿ ಅಗ್ನಿಶಾಮಕರು 08) ಸುರೇಶ್ ಮಾದರ ಅಗ್ನಿಶಾಮಕರು 09)ನೀಲಪ್ಪ ಹೇರವಾಡೆಅಗ್ನಿಶಾಮಕ ಚಾಲಕರು ಇತರರು ಮತ್ತು ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಂಪವಾಡ ಗ್ರಾಮದಲ್ಲಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಅಧಿಕಾರಿಗಳಿಗೆ ಅಗ್ನಿಶಾಮಕದ ಸಿಬ್ಬಂದಿಗಳಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದರು ನೀವು ಮಾಡುವ ಕೆಲಸ ಜೀವರಕ್ಷಿಸುವ ಕೆಲಸವಾಗಿದೆ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಉನ್ನತಮಟ್ಟಕ್ಕೆ ಮತ್ತು ದೊಡ್ಡ ಹುದ್ದೆಗಳನ್ನು ಸ್ವೀಕರಿಸಲಿ ಎಂದು ಹೇಳಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *