ಬಿಕ್ಷಾಟನೆಗೆ ಕೊನೆ ಎಂದು? ಜ್ಯೋತಿ.ಜಿ (ಉಪನ್ಯಾಸಕಿ ಮೈಸೂರು) ಇವರ ವಿಶೇಷ ಲೀಖನ ತಪ್ಪದೇ ಓದಿ…

Spread the love

ಬಿಕ್ಷಾಟನೆಗೆ ಕೊನೆ ಎಂದು? ಜ್ಯೋತಿ.ಜಿ (ಉಪನ್ಯಾಸಕಿ ಮೈಸೂರು) ಇವರ ವಿಶೇಷ ಲೀಖನ ತಪ್ಪದೇ ಓದಿ….

ಬಡತನ ಮುಕ್ತ ದೇಶ ನಿರ್ಮಾಣದ ಗುರಿ ಹೊಂದಿರುವ ನಮ್ಮ ದೇಶದಲ್ಲಿ ಬಿಕ್ಷಾಟನೆ ಮಾತ್ರ ಇನ್ನೂ ನಡೆಯುತ್ತಲೇ ಇದೆ.  ಒಂದು ಕಡೆ ನಾವು ತಾಂತ್ರಿಕತೆಯಲ್ಲಿ, ಅವಿಷ್ಕಾರದಲ್ಲಿ ಮುಂದುವರಿದ್ದೇವೆ ಎಂದು ಬಹಳಷ್ಟು ರಾಜಕೀಯ ನಾಯಕರು ತಮ್ಮ ಪ್ರದರ್ಶನಗಳನ್ನು ಮಾಡುತ್ತಾರೆ, ಆದರೆ ತಮ್ಮ ಸುತ್ತ ಮುತ್ತಲಿನ ರಾಜಕೀಯ ನಾಯಕರಿಗೆ ಈ ಪರಿವೇ ಇರುವುದಿಲ್ಲ. ಸಿಗ್ನಲ್‌‌ಗಳಲ್ಲಿ, ಬಸ್ಸ್‌ ನಿಲ್ದಾಣಗಳಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ಬಿಕ್ಷುಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೋಡುತ್ತಲೇ ಇರುತ್ತೇವೆ ಚಿಕ್ಕ ವಯಸ್ಸಿನ ಮಕ್ಕಳು ಹಣ ಕೊಡುವವರೆಗೂ ಬಿಡುವುದಿಲ್ಲ ಕೆಲವೊಮ್ಮೆ ಕಾಲಿಗೆ ಬಂದು ಎರಗುತ್ತಾರೆ. ನಾನು ಮೈಸೂರಿನಲ್ಲಿರುವ ಮಹದೇವಪುರ ಮುಖ್ಯರಸ್ತೆಯಲ್ಲಿ ಹಾಗೂ ಎಲ್.ಐ.ಸಿಯಲ್ಲಿನ ರಸ್ತೆಗಳಲ್ಲಿ ಪ್ರತಿ ನಿತ್ಯ ನೋಡುತ್ತಲೇ ಇರುವೆ ಮಳೆಗಾಲ, ಚಳಿಗಾಲ ಎನ್ನದೆ ಇವರು ಬೆಳಗ್ಗೆಯಿಂದಲೇ     ಬಿಕ್ಷಾಟನೆಗೆ ಇಳಿಯುತ್ತಾರೆ. ಇವರ ಬಗ್ಗೆ ಅನುಕಂಪವಿರುವವರನ್ನು ಹೊರತು ಪಡಿಸಿದರೆ ಅವರ ಯಾಚನೆಗೆ ಸ್ಪಂದಿಸದವರೇ ಹೆಚ್ಚು. ಮಾನವೀಯತೆಯುಲ್ಲ ಅದೆಷ್ಟೊ ಧಾನಿಗಳು ಪುಣ್ಯದ ಸಲುವಾಗಿ ಮಾನವೀತೆಯನ್ನು ತೋರಿಸುತ್ತಾರೆ  ಅವರಿಗೆ ದಿನಂಪ್ರತಿ ಉಚಿತವಾಗಿ ಊಟ ಹಾಗೂ ಇನ್ನಿತರ ಆವಶ್ಯಕ ವಸ್ತುಗಳನ್ನು ನೀಡುವ  ಮೂಲಕ ಸಹಾಯಕ್ಕೆ ನಿಲ್ಲುತ್ತಾರೆ, ನಾನು ಗಮನಿಸಿದ್ದು ಉಂಟು. ಮುಗಿಲು ಮುಟ್ಟಿತ್ತು ಬಡತನದ ಕಾರಣ ಈ ಕೆಲಸಕ್ಕೆ ಇಳಿದುಬಿಡುತ್ತಾರೆ.

ಈ ಕುರಿತು ನಾನು ನೇರವಾಗಿ ಬಿಕ್ಷುಕರನು  ಸಂದರ್ಶಿಸಿದ ಬಗ್ಗೆ  ಕೆಲವು ಸಂಗತಿ ಹೀಗಿದೆ. ಮೈಸೂರಿನ ಮಹದೇವಪುರ ರಸ್ತೆ  ಹಾಗೂ ಬನ್ನಿಮಂಟಪದಲ್ಲಿರುವ LIC ಹತ್ತಿರ ಇರುವ ಕಡೆಗಳಲ್ಲಿ ಸಾಮಾನ್ಯವಾಗಿ ಇಲ್ಲಿರುವ ನಿವಾಸಿಗಳಿಗೆ ಬಹಳಷ್ಟು ಚಿರ/ಪರಿಚಿತರಾಗಿರುತ್ತಾರೆ ಇಲ್ಲಿನ ಬಿಕ್ಷುಕರು. ನಾನು ಅವರನ್ನು ಸಂದರ್ಶಿಸಲು ಹೋದಾಗ ಅವರೆಲ್ಲರೂ ನಾನೇನು ಹಣವನ್ನು ನೀಡುತ್ತೇನೆ ಎಂದು ಕಾತುರದಿಂದ ನೋಡಿದರು ಆದರೆ ಅವರಿಗೇನು ಗೊತ್ತು ನಾನು ಲೇಖಕಿ ಎಂದು, ಇರಲಿ ಮೊದಲಿಗೆ ನಾನು ಭೇಟಿ ಮಾಡಿದ್ದು ಹಿರಿಯ ಅಜ್ಜಿಯನ್ನು. ಆಕೆ ಸುಮಾರು ೮೦ ವಯಸ್ಸಿನವಳು. ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ ನಾನು ಹೆಸರೇನು ಎಂದು ೪ ಬಾರಿ ಕೇಳಿದಾಗ ಆಕೆ(ಅಜ್ಜಿ)  ಉತ್ತರಿಸಿದ್ದು ನಾನು ಫಾತೀಮ ಎಂದು, ಉದಯಗಿರಿ ಸಮೀಪದ ಶಾಂತಿ ನಗರದಲ್ಲಿ ನೆಲೆಸಿದ್ದೇನೆ ಮಕ್ಕಳಿದ್ದಾರ? ಎಂದು ಕೇಳಿದಾಗ ಆಕೆ ನೀಡಿದ ಉತ್ತರ ಅವರನ್ನು ಹೆತ್ತಿರುವುದಕ್ಕೆ ನಾನು ಬಿಕ್ಷೇ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಸರಿಯಾಗಿ ನೋಡಿದ್ದರೆ ನಾನೇಕೆ ಬರುತ್ತಿದೆ ಎಂದು ಹೇಳಿ ಸುಮ್ಮನಾದಳು. ನಾನೇನು ಶಾಶ್ವತವಾಗಿರುವುದಿಲ್ಲ ಇಂದಲ್ಲ ನಾಳೆ ಸಾಯುವ ಜೀವ ಅದಕ್ಕೆ ೮ ವರ್ಷಗಳಿಂದ ಬೇಡಿ ತಿನ್ನುತ್ತಿದ್ದೇನೆ ಎಂದಳು. ಮತ್ತೊಬ್ಬನನ್ನು ಮಾತನಾಡಿಸಿದಾಗ ಆತನು ಹೇಳಿದ್ದು ನೋಡುವುದಕ್ಕೆ ಅಂತಹ ಕಾಯಲೆಗಳಿರಲಿಲ್ಲ ಕಾಲಿನ ಹಾಗೂ ಮೈಮೇಲೆ ಮಾತ್ರ ಬಿಳಿ ತೊನ್ನು ಅಥವಾ ಅಲರ್ಜಿಗಳು ಹಬ್ಬಿದೆ ಅದಕ್ಕಾಗಿ ಆತನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದನು. ಆತನಿಗೆ ಕೆಲಸ ಮಾಡಲು ಸಾಧ್ಯವಾಗದೆ ಸುಮಾರು ೩ ವರ್ಷದಿಂದ ಬಿಕ್ಷೆ ಬೇಡುತ್ತಿರುವುದಾಗಿ ತಿಳಿಸಿದನು. ಆತನ ಕುಟುಂಬದವರು ಯಾರು ಇಲ್ಲವಂತೆ ಹಾಗೂ ಒಂಟಿಯಾಗಿ ಜೀವಿಸುತ್ತಿದ್ದಾನೆ, ಮತ್ತೊಂದು ಮಹಿಳೆಯರಿಬ್ಬರನ್ನು ಸಂದರ್ಶಿಸಿದಾಗ ಅವರು ಹೇಳಿದ್ದು ಮಾತ್ರ ಕೊಂಚ ವಿಭಿನ್ನವಾಗಿ ಆಕೆಯು ಕಮಲಮ್ಮ ಹಾಗೂ ಸಬರಿನ್‌ ಎಂದು ಹೇಳಿದರು ನಾನು ಮೈಸೂರಿನಲ್ಲಿರುವ ಕೆಸರೆ ಬಳಿ ವಾಸವಾಗಿದ್ದೇನೆ ಆಕೆ ಸುಮಾರು ೫೦ ರ ಆಸುಪಾಸಿನಲ್ಲಿರಬಹುದು  ಆಕೆಗೆ ಮಕ್ಕಳಿದ್ದರಾ ನಿಮಗೆಎಂದು ಕೇಳಿದನು ಆಕೆ ನೀಡಿದ ಉತ್ತರ ಅವರು ನನ್ನನ್ನು ನೋಡಿಕೊಳ್ಳುವುದಕ್ಕೆ ಸಾದ್ಯವಿಲ್ಲವಂತೆ ಅದಕ್ಕೆ ನಾನು ಬಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಸುಮಾರು ೨ ವರ್ಷಗಳಿಂದ ಪ್ರತಿನಿತ್ಯವು ನಾವು ಬೆಳಗ್ಗೆಯಿಂದ ಸಂಜೆಯವರೆಗೆ ೫೦ ರಿಂದ ೬೦ ರೂಪಾಯಿ ದೊರೆಯುತ್ತದೆ  ನಮಗೆ ಸಾಕು  ಬೆಳಗ್ಗೆ ಸಮಯದಲ್ಲಿ ಕೆಲವು ದಾನಿಗಳು ತಿಂಡಿ ಯನ್ನು ನೀಡುತ್ತಾರೆ ೧೧.೧೫ ರಲ್ಲಿ ಅಥವಾ ೧೨ ರ ಒಳಗೆ ಕ್ರಿಶ್ಚಿಯನ್‌ ಸಂಸ್ಥೆಯು ನಮಗೆ ಊಟ ನೀಡುತ್ತದೆ ಭಾನುವಾರ ಹಾಗೂ ಶುಕ್ರವಾರದಂದು ಊಟ ಬರುವುದಿಲ್ಲ ಅದು ಬಿಟ್ಟರೆ ಪ್ರತಿ ನಿತ್ಯವೂ ನಮಗೆ ದೊರೆಯುತ್ತದೆ ಎಂದರು. ಇನ್ನೂ ರಾತ್ರಿಯ ಊಟಕ್ಕೆ  ಸರ್ಕಾರದಿಂದ ನೀಡುವ ಪಡಿತರ ಅಕ್ಕಿಯೇ ನಮಗೆ ಸಾಕಾಗುತ್ತದೆ ಎಂದರು. ಮತ್ತೊಂದು ವಿಷಯವೆಂದರೆ ಸರ್ಕಾರದಿಂದ ಬಿಕ್ಷೆ ಬೇಡುವ ಜನರನ್ನು ವ್ಯಾನ್‌ ಮೂಲಕ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರಿಗೆ ಕೆಲಸವನ್ನು ಸಹ ನೀಡಲಾಗುತ್ತದೆ. ಆದರೆ ನಾವು ಮೊದಲು ಮದುವೆ ಮನೆಗಳಲ್ಲಿ ಪಾತ್ರೆಗಳನ್ನು ತೊಳೆದು ಈಗ ನಮಗೆ ಕೈಗಳು ಬಲಹೀನಗೊಂಡಿವೆ ಆದ ಕಾರಣ ನಾವು ಕೆಲಸ ಮಾಡಲು ಸಾದ್ಯವಿಲ್ಲ ಒಂದು ವೇಳೆ ನಮ್ಮ ಆರೋಗ್ಯವು ಚೆನ್ನಾಗಿದ್ದರೆ ಮಾತ್ರ ಕರೆದೊಯುತ್ತಾರೆ, ಇಲ್ಲವಾದರೆ ಇಲ್ಲಿಯೇ ಬಿಟ್ಟು ಹೋಗುತ್ತಾರೆ .ಅದಕ್ಕೆ ನಾವು ಹೆದರುವುದಿಲ್ಲ . ಯಾಕೆಂದರೆ ನಾವು ಆಶಕ್ತರಾಗಿದ್ದೇನೆ ಎಂದರು ಅಲ್ಲದೆ ಯಾವ ಸರ್ಕಾರವು ನಮ್ಮ ನೆರವಿಗೆ ಬರುವುದಿಲ್ಲ ನಾವು ಕಳ್ಳತನ ಮಾಡುತ್ತಿಲ್ಲ ಬದಲಿಗೆ ಬಿಕ್ಷೆ ಬೇಡಿ ಬದುಕುತ್ತಿದ್ದೇವೆ ಎಂದಾಗ ಹೇಗೆ ಉತ್ತರಿಸಬೇಕೊ ತಿಳಿಯದಾದೆ. ಮತ್ತೆ ಚಿಕ್ಕ ವಯಸ್ಸಿನ ಮಕ್ಕಳು ಮಗುವನ್ನು ಹಿಡಿದು ಬಿಕ್ಷೆ ಬೇಡುವಂತಹದು. ಹೀಗೆ ಅಲ್ಲಿಗೆ ಸುಮಾರು ೭ ರಿಂದ ೮ ಜನರು ಪ್ರತಿನಿತ್ಯವೂ ಬೇಡಿಯೇ ಜೀವನಸಾಗಿಸುತ್ತಾರೆ ಕೇವಲ ಇಲ್ಲಿಯ ಪರಿಸ್ಥಿತಿ ಮಾತ್ರವಲ್ಲದೆ ಎಲ್ಲ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಕಡೆ ಸರ್ಕಾರ ಬಡತನ ನಿರ್ಮೂಲನೆ ಮಾಡಲು ಗುಡಿಸಲು ಮುಕ್ತ ರಾಜ್ಯ ಎಂದು ಸಂಭ್ರಮಿಸುವಾಗ .. ಬಿಕ್ಷುಕರ ನಿರ್ಮೂಲನೆಯ ಬಗ್ಗೆ ಚಿಂತಿಸಿದರೆ ನಾವು ಪ್ರಗತಿಯತ್ತ ಸಾಗಿದ್ದೇವೆ ಎಂದು ಸಂಭ್ರಮಿಸಬಹುದು ಸ್ವಲ್ಪ ಸದೃಡರಾಗಿರುವರನ್ನು ಕೆಲಸ ನೀಡಿದರೆ ಇಂತಹ ಆಶಕ್ತರಿಗೆ ಯಾವ ಕೆಲಸವನ್ನು ನೀಡುವುದು ಎಂಬುವುದು ಪ್ರಶ್ನೆಯಾಗಿದೆ ಜೊತೆಗೆ ಅಲ್ಲಿನ ಶಾಸಕರು ಹಾಗೂ ಅಲ್ಲಿನ ಕಾರ್ಪೋರೇಟರ್ ಗಳು ಇದರ ಬಗ್ಗೆ ಸಾಕಷ್ಟು ಗಮನ ವಹಿಸಬೇಕು, ಕೊನೆಯದಾಗಿ ನನ್ನ ಒಂದು ಸಲಹೆ ಸರಿ ಎನಿಸಿದರೆ ಸ್ವೀಕರಿಸಿ ಇಲ್ಲವಾದರೆ ನಿಮ್ಮ ಇಚ್ಛೆಗೆ ಬಿಟ್ಟಿದ್ದು  ಬಿಕ್ಷುಕರಿಗೆ ನೀಡುವ ದಾನಿಗಳು ಅಥವಾ ಪುಣ್ಯತ್ಮರು ಹಣವನ್ನು ನೀಡದೆ ಬದಲಿಗೆ ಕೈಲಾದಷ್ಟು ಹಳೆಯ ಬಟ್ಟೆಗಳು ಒಂದು ಹೊತ್ತಿನ ಊಟದ ಪೊಟ್ಟಣ ಕೆಲವು ಅಗತ್ಯವೆನಿಸುವ ಸಾಮಾಗ್ರಿಗಳನ್ನು ನೀಡುವುದು ಆಗ ಮಾತ್ರ ಅವರ ಆರ್ಥಿಕ ಹೊಡೆತವನ್ನು ಸಾದ್ಯವಾದಷ್ಟು ಬದಲಾಯಿಸಬಹುದು .. ದೊಡ್ಡ ದೊಡ್ಡ ಮಾಲ್ ಗಳು ,ಕಟ್ಟಡಗಳು , ಮೆಟ್ರೋ ಹಲವಾರು ಬದಲಾವಣೆಗಳಾದರೂ ಬಿಕ್ಷಟನೆಯು ಕೊನೆಯಾಗುವುದೆಂದು ಎನ್ನುವುದೇ ಯಕ್ಷ ಪ್ರಶ್ನೆಯಾಗಿ ಉಳಿದು ಬಿಡುತ್ತದೆ .

ವಿಶೇಷ ಲೇಖನ – ಜ್ಯೋತಿ.ಜಿ (ಉಪನ್ಯಾಸಕಿ ಮೈಸೂರು)

Leave a Reply

Your email address will not be published. Required fields are marked *