ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟದ ದೆಹಲಿ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 2 ರಂದು ಬ್ರಹತ್ ಪ್ರತಿಭಟನೆ….

Spread the love

ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟದ ದೆಹಲಿ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 2 ರಂದು ಬ್ರಹತ್ ಪ್ರತಿಭಟನೆ….

ಯಲಬುರ್ಗಾ: ‘ಆಹಾರ ಭದ್ರತೆ ಕಾಯ್ದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟದ ದೆಹಲಿ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 2 ರಂದು ಬ್ರಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಛತ್ರಪ್ಪ ಛಲವಾದಿ ಹೇಳಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮತನಾಡಿದ ಅವರು, ‘ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ತಾಲ್ಲೂಕು ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ವಿತರಕರು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ’ ಎಂದರು. ಎಲ್ಲ ಸಾಮಾನ್ಯರಿಗೂ ಆಹಾರ ಭದ್ರತೆ ಕಾಯ್ದೆ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ನಿರ್ಧರಿಸಿದ ನೇರ ಹಣಕಾಸು ವರ್ಗಾವಣೆ ರದ್ದುಪಡಿಸುವುದು, ನ್ಯಾಯಬೆಲೆ ಅಂಗಡಿಗಳ ಮೂಲಕ 5 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ವಿತರಣೆ, ಎಲ್ಲ ಪಡಿತರ ಗ್ರಾಹಕರಿಗೆ ಸಕ್ಕರೆ ಮತ್ತು ಸೀಮೆಎಣ್ಣೆ ವಿತರಿಸುವುದು, ದಿನ ಬಳಕೆಯ ವಿವಿಧ ವಸ್ತುಗಳ ಮಾರಾಟ ಮಾಡಲು ಅನುಮತಿ ನೀಡುವುದು, ಆಧಾರ್ ಕಾರ್ಡ್‌ನೊಂದಿಗೆ ಪಡಿತರ ಚೀಟಿ ಕಡ್ಡಾಯಗೊಳಿಸುವ ಆದೇಶ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸ ಲಾಗುವುದು’ ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ನಜೀರ್ಮಿಯಾ ಕುಷ್ಟಗಿ,ಕನಕಪ್ಪ ಚಿಕೇನಕೊಪ್ಪ, ರುದ್ರಮುನಿ ಹಿರೇಕುರುಬರ, ಮಂಜುನಾಥ ಹಿರೇವಂಕಲಕುಂಟಾ, ಶೇಖರ್ ಬೇವೂರು, ಅಶೋಕ ಶಾಸ್ವಿಹಾಳ, ಪ್ರಶಾಂತ ಕೊಪ್ಪಳ, ಪ್ರಕಾಶ ಬಣಕಾರ, ವಿನೋದ್ ಗೆದಗೇರಿ, ರಾಜು ಕಂದಗಲ್, ಇನ್ನೂ ಹಲವರು ಉಪಸ್ಥಿತರಿದ್ದರು,

ವರದಿ – ಹುಸೇನಬಾಷ ಮೋತೆಖಾನ್

Leave a Reply

Your email address will not be published. Required fields are marked *