ಕೂಡ್ಲಿಗಿ:ಮನೆಯಲ್ಲಿ ಹಾಗೂ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗೆ ಹಾಲೆರದ ಭಕ್ತರು…..

Spread the love

ಕೂಡ್ಲಿಗಿ:ಮನೆಯಲ್ಲಿ ಹಾಗೂ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗೆ ಹಾಲೆರದ ಭಕ್ತರು…..

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ, ನಾಗರ ಚೌತಿ  ಪ್ರಯುಕ್ತ ನಾಗರ ಮೂರ್ತಿಗೆ ಆಸ್ತಿಕರು ಹಾಲೆರೆಯೋ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಪಟ್ಟಣದ ಶ್ರೀಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ, ಶ್ರೀನಾಗದೇವತರಯ ಮೂರ್ತಿಗೆ ಭಕ್ತರು ಹಾಲೆರದು ಭಕ್ತಿ ಮೆರೆದರು. ಹಲವರು ತಮ್ಮ ಮನೆಯ ದೇವರ ಜಗುಲಿಯಲ್ಲಿ ನಾಗರ ದೇವರ ಮೂರ್ತಿ ಪ್ರತಿಸ್ಟಾಪಿಸಿ, ನಾಗರ ಮೂರ್ತಿಗೆ ಭಕ್ತಿಯಿಂದ ಹಾಲೆರು ಹಬ್ಬ  ಆಚರಿಸಿದರು. ಕೆಲವರು ನಾಗರ ಚೌತಿಯಂದು ಹಾಲೆರದು ಹಬ್ಬ ಆಚರಿಸಿದೆರೆ ಉಳಿದವರು ನಾಗ ಪಂಚಮಿಯಂದು ಹಾಲೆರೆದು ಹಬ್ಬ ಆಚರಿಸುತ್ತಾರೆ. ಕುಟುಂಬ ಸಮೇತರಾಗಿ ಬಂಧು ಬಳಗದೊಂದಿಗೆ ಸಾಮೂಹಿಕವಾಗಿ ಹಾಲೆರೆಯೋ ಸಾಂಪ್ರದಾಯ, ಅವಿಭಕ್ತ ಕುಟುಂಬದಲ್ಲಿ ಈಗಲೂ ಕಾಣಬಹುದಾಗಿದೆ. ಅವಿಭಕ್ತ ಕುಟುಂಬ ಕಾಣೆಯಾಗೋ ಸಂದರ್ಭದಲ್ಲಿ, ವಿಭಕ್ತ ಕುಟುಂಬದ ಸದಸ್ಯರು ಮನೆಯಲ್ಲಿಯೆರ ನಾಗದೇವರ ಆರಾಧನೆ ಮಾಡೋದು ಇತ್ತೀಚೆಗೆ ಸಮಾನ್ಯವಾಗಿದೆ. ನಾಗರ ಪಂಚಮಿ ಪ್ರಯುಕ್ತ ಪಟ್ಟಣ ಸೇರಿದಂತೆ ,ತಾಲೂಕಿನೆಲ್ಲೆಡೆ ನಾಗದೇವರಾಧನೆ ಜರುಗಿದೆ.ಮಕ್ಕಳು ಯುವಕ ಯುವತಿಯರು, ಮಹೊಳೆಯರು, ನಾಗರ ಪಂಚಮಿತನ್ನು ಬಹು ಅರ್ತಪೂರ್ಣವಾಗಿ ಆಚರಿಸಿದರು. ಅಂತೆಯೇ ಪಟ್ಟಣದ ಶ್ರೀಬಸವ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಸ್ಟಾಪಿಸಿರುವ ನಾಗ ಪ್ರತಿಮೆಗೆ, ಹಾಗೂ ತಮ್ಮ ಮನೆಯ ದೇವರ ಜಗುಲಿಯಲ್ಲಿರುವ ನಾಗ ಪ್ರತಿಮೆಗೆ. ಪುಟಾಣಿ ಅರಣಿ ತನ್ನ ತಾಯಿ ರೇಣುಕಾ ಹಾಗು ಸಹೋದರ ವಿನಾಯಕನೊಂದಿಗೆ. ನಾಗದೆವತೆಗೆ ಶಾಸ್ತ್ರೋಕ್ತವಾಗಿ ಪೂಜೆಗೈದು ಶ್ರದ್ಧಾ ಭಕ್ತಿಯಿಂದ ಹಾಲೆರದು, ತಮ್ಮ  ಭಕ್ತಿ ಸಮರ್ಪಿಸಿ ಹಬ್ಬಕ್ಕೆ ಮತ್ತಷ್ಟು ಮೆರೆಗುತಂದಿದ್ದಾಳೆ.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *