ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ತಾಲೂಕು ಸಮಿತಿ ಲಿಂಗಸ್ಗೂರು ಮಾನ್ಯ ಡಿಎಸ್ ಹೂಲಿಗೇರಿ, ಶಾಸಕರು ಲಿಂಗಸ್ಗೂರು ಇವರಿಗೆ ಮನವಿ……
ಬೇಡಿಕೆಗನುಗುಣವಾಗಿ ಹಾಸ್ಟೆಲ್ ಗಳನ್ನು ಮಂಜೂರು ಮಾಡಿ, ವಿದ್ಯಾರ್ಥಿ ವಿರೋಧಿ ಕೌನ್ಸ್ಲಿಂಗ ರದ್ದು ಮಾಡಿ ಎಲ್ಲರಿಗೂ ಅರ್ಜಿ ಹಾಕಿದ ಎಲ್ಲರಿಗೂ ಹಾಸ್ಟೆಲ್ ಕಲ್ಪಿಸಿ ಈ ಮೂಲಕ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಲಿಂಗಸ್ಗೂರು ತಾಲೂಕು ಸಮಿತಿ ತಮಗೆ ತಿಳಿಸುವುದೇನೆಂದರೆ, ತಾಲೂಕಿನ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆಗಳ ಅಡಿಯಲ್ಲಿ ನಡೆಸಲಾಗುತ್ತಿರುವ ಬಹುತೇಕ ಹಾಸ್ಟೆಲ್ ಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೇ ಹಂದಿಗಳ ಗೂಡಾಗಳಾಗಿವೆ. ಹಲವು ಹಾಸ್ಟೆಲ್ ಗಳು ಖಾಸಗೀ ಕಟ್ಟಗಳಲ್ಲಿ ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದೇ ಅನಿವಾರ್ಯ ವಾಗಿ ಹಾಸ್ಟೆಲ್ ನಲ್ಲಿ ದಿನಗಳೆಯುವಂತಾಗಿದೆ. ಹಲವು ಹಾಸ್ಟೆಲ್ ಗಳಲ್ಲಿ ವಾರ್ಡನ್ ಗಳು ಹಾಸ್ಟೆಲ್ ಗೆ ತಿಂಗಳ ಎರಡು ತಿಂಗಳಿಗೊಮ್ಮೆ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳ ಕರೆ ಸ್ವೀಕರಿಸುತ್ತಿಲ್ಲ. ಕೆಲ ಕಡೆ ಸೌಲಭ್ಯ ಕೇಳಿದ ವಿದ್ಯಾರ್ಥಿಗಳಿಗೆ ವಾರ್ಡನ್ ದಮ್ಕಿ ಹಾಕುತ್ತಿದ್ದಾರೆ. ಅಥವಾ ಸೌಲಭ್ಯ ಕೇಳುವ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ತಣ್ಣಗಾಗಿಸುವ ಪ್ರಯತ್ನ ಮಾಡಿ ಸೌಲಭ್ಯ ನೀಡದೇ ನುಣಿಚಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಆದ್ಧರಿಂದ ಈ ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾವುಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್ ಎಫ್ ಐ ತಾಲೂಕು ಸಮಿತಿ ಒತ್ತಾಯಿಸುತ್ತದೆ.
ಬೇಡಿಕೆಗಳು:
*ಖಾಸಗೀ ಕಟ್ಟಡಗಳಲ್ಲಿ ನಡೆಯುವ ಹಾಸ್ಟೆಲ್ ಗಳಿಗೆ ಜಾಗ ಗುರುತಿಸಿ ಸ್ವಂತ ಕಟ್ಟಡ ನಿರ್ಮಿಸಬೇಕು. *ಬೇಡಿಕೆಗೆ ಅನುಗುಣವಾಗಿ ಹಾಸ್ಟೆಲ್ ಗಳನ್ನು ಮಂಜೂರು ಮಾಡಬೇಕು ಮತ್ತು ಈಗಿರುವ ಹಾಸ್ಟೆಲ್ ಗಳಲ್ಲಿ ಹೆಚ್ಚುವರಿಯಾಗಿ ಎ ಬಿ ಎಂದು ವರ್ಗೀಕರಿಸಬೇಕು.*ಕರಡಕಲ್ ನ ಬಾಲಕರ ಪದವಿ (ಡಾ.ಬಿ.ಆರ್. ಅಂಬೇಡ್ಕರ್) ಹಾಸ್ಟೆಲ್ ಬೇಡಿಕೆ)*ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗೆ ಅನುಮತಿ ನೀಡಬೇಕು.*ಲೈಬ್ರೆರಿ ವ್ಯವಸ್ಥೆ ಕಲ್ಪಿಸಬೇಕು.*ಮ್ಯಾಕ್ಸಿನ್ ಪೇಪರ್ ಗಳನ್ನು ನೀಡಬೇಕು.*ಗುಣಮಟ್ಟದ ಊಟ ನೀಡಬೇಕು.*ಮಂಚ, ಬೆಡ್, ಬೆಡ್ ಶೀಟ್ ಇತ್ಯಾದಿಗಳನ್ನು ನೀಡಬೇಕು.*ಮೆಟ್ರಿಕ್ ನಂತರದ ಎಸ್ ಟಿ ಹಾಸ್ಟೆಲ್ * ಸರಿಯಾಗಿ ವಾರ್ಡನ್ ಹಾಸ್ಟೆಲ್ ಗೆ ಬರೋದಿಲ್ಲ. ಅವರಿಗೆ ಎಚ್ಚರಿಸಿ ಪ್ರತಿನಿತ್ಯ ಹಾಸ್ಟೆಲ್ ಗೆ ಬರುವಂತೆ ಮಾಡಬೇಕು. *ಊಟದಲ್ಲಿ ಕಾಯಿಪಲ್ಲೆ ಇರೋದಿಲ್ಲ. ಆದ್ದರಿಂದ ಗುಣಮಟ್ಟದ ಊಟ ನೀಡಬೇಕು.*ಲೈಬ್ರರಿ ವ್ಯವಸ್ಥೆ ಕಲ್ಪಿಸಬೇಕು.*ಹಾಸ್ಟೆಲ್ ನಲ್ಲಿ ಸ್ವಚ್ಛತೆ ಕಾಪಾಡಬೇಕುಮ *ಪೇಟಿಂಗ್ ಮಾಡಿಸಬೇಕು. *ನ್ಯೂಸ್ ಪೇಪರ್ ಸರಿಯಾಗಿ ಹಾಕೊಲ್ಲ. ಎಲ್ಲಾ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಪೇಪರ್ ಒದಗಿಸಬೇಕು.*ಬಳಕೆಗೆ ನೀರಿನ ಸಮಸ್ಯೆ ಇದ್ದು, ಸಮರ್ಪಕ ನೀರಿನ ವ್ಯವಸ್ಥೆ ಆಗಬೇಕು.*ಟಾಯ್ಲೆಟ್ ನಿರ್ವಹಣೆ ಮಾಡಬೇಕು.*ಸಿಸಿ ಟಿವಿ ವ್ಯವಸ್ಥೆ ಮಾಡಬೇಕು.*ಟಿವಿ ವ್ಯವಸ್ಥೆ ಮಾಡಬೇಕುಮ *ಫ್ಯಾನ್ ವ್ಯವಸ್ಥೆ ಮಾಡಬೇಕು. *ಅಡುಗೆ ಸಿಬ್ಬಂದಿ ವ್ಯವಸ್ಥೆ ಮಾಡಬೇಕು. *ವಾಚ್ ಮೆನ್ ನೇಮಿಸಬೇಕು *ಸೋಪ್, ಬ್ರಶ್ ಕಿಟ್ ನೀಡಬೇಕು *ಕಂಪ್ಯೂಟರ್ ವ್ಯವಸ್ಥೆ ಮಾಡಬೇಕು *ಲೈಟ್ಗಳನ್ನು ಹಾಕಿಸಬೇಕು
*ಡಾ. ಬಿ ಆರ್ ಅಂಬೇಡ್ಕರ್ ಹಾಸ್ಟೆಲ್ (ಮೆಟ್ರಿಕ್ ನಂತರ) ಹಾಸ್ಟೆಲ್ ಊಟದ ಗುಣಮಟ್ಟ ಕಾಪಾಡಬೇಕು. *ಶೌಚಾಲಯ ವ್ಯವಸ್ಥೆ ಮಾಡಬೇಕು *ಟಾಯ್ಲೆಟ್ ಇಲ್ಲ. ಕಟ್ಟಿದ ಟಾಯ್ಲೆಟ್ ನಲ್ಲಿ ಅವ್ಯವಹಾರ ಆಗಿದೆ. *ಕಿಟ್ಟ ಬಾಕ್ಸ್ ನೀಡಬೇಕುಮೇಕೆ್. ಬಿಸಿನೀರಿನ ವ್ಯವಸ್ಥೆ ಮಾಡಬೇಕು. *ವಾರ್ಡನ್ ಹಾಸ್ಟೆಲಿಗೆ ಬರುತ್ತಿಲ್ಲ ಕಾಂಟ್ಯಾಕ್ಟ್ ಇಲ್ಲ ಯಾರ ಫೋನು ತೆಗೆಯುವುದಿಲ್ಲ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. *ಬಿಲ್ಡಿಂಗ್ ಗಳು ಸೂರುತ್ತಿವೆ ಮೂರು ಅಂತಸ್ತಿನಹೊಸ ಕಟ್ಟಡ ಮಂಜೂರು ಮಾಡಬೇಕು. * ವಾಚ್ ಮೇನ್ ಇಲ್ಲ ಹೀಗಾಗಿ ಸ್ಥಳೀಯ ಗುಂಡಗಳು ಹಂದಿಗಳು ಕುಡುಕರು ಹಾಡು , ಮೇಕೆ ಇವೆಲ್ಲವೂ ಹಾಸ್ಟೆಲ್ ನಲ್ಲಿ ಹಾಗೆಯೇ ನುಗ್ಗುತ್ತವೆ ಇದರಿಂದ ಹಾಸ್ಟಲ್ ಹಂದಿಗಳ ಗೂಡಾಗಿದೆ. *ಸ್ಪೋರ್ಟ್ಸ್ ಮೆಟೀರಿಯಲ್ ನೀಡಬೇಕು. * ಬುಕ್ ಕೊಟ್ಟಿಲ್ಲ ಲೈಬ್ರರಿ ಇಲ್ಲ ಊಟದ ಕೋಣೆ ಇಲ್ಲ *ಜಳಕದ ಕೋಣೆ ಇಲ್ಲ ಆದ್ದರಿಂದ ಬೀದಿಯಲ್ಲಿ ಜಳಕ *ಚೊಂಬಿ ಇಲ್ಲ ಬಕೇಟಿಲ್ಲ , ಫ್ಯಾನ್ಗಳು ಇಲ್ಲ ಪ್ಲೇಟ್ಗಳು ಕಡಿಮೆ ಇವೆ. ಹಾಸ್ಟೆಲ್ ಒಳಗಡೆ ಸುತ್ತಮುತ್ತಲಿನ ನಿವಾಸಿಗಳು ಬಂದು ಬಟ್ಟೆ ತೊಳೆಯುವುದು ನೀರು ತೆಗೆದುಕೊಂಡು ಹೋಗಲು ನಿತ್ಯ ಬರುತ್ತದೆ ಒಂದೇ ನಲ್ಲಿಯಲ್ಲಿ ಸುತ್ತಮುತ್ತಲಿನ ಜನರು ಹಾಗೂ ಹಾಸ್ಟೆಲ್ನ ವಿದ್ಯಾರ್ಥಿಗಳು ಜಳಕ ಟಾಯ್ಲೆಟ್ ಬಟ್ಟೆ ಎಲ್ಲವೂ ಮಾಡಿಕೊಳ್ಳಬೇಕು. 7 ಲಕ್ಷ ಹಗರಣ ನಡೆದಿದ್ದು ತನಿಖೆ ಆಗಬೇಕು ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ಪದವಿ ಹಾಸ್ಟಲ್ ಲೈಬ್ರರಿ , ಬಿಲ್ಡಿಂಗ್ ಸರುತ್ತವೆ , Security ಕಾಟ ಇಲ್ಲ ಬೆಡ್ ಇಲ್ಲ, ಕಿಟ್ ಇಲ್ಲ ನ್ಯಾಪ್ಕಿನ್ ಪೂರೈಕೆ ಇಲ್ಲ, Dobi ವ್ಯವಸ್ಥೆ ಇಲ್ಲ, ಆಟದ ಸಮನೂ ಗುಣಮಟ್ಟದ ಊಟ ನೀಡಬೇಕು. 10 ಟಾಯ್ಲೆಟ್ 10 ಬಾತ್ರೂಮ್ ಕಟ್ಟಡ ಮಂಜೂರು ಮಾಡಬೇಕು. ರಮೇಶ ವೀರಾಪೂರು ವಿಶ್ವ ಅಂಗಡಿ ರಮೇಶ ಹಟ್ಟಿ ಶಿವಪುತ್ರ ಪ್ರಹ್ಲಾದ್ ನಾಗರಾಜ ಜಿಲ್ಲಾಧ್ಯಕ್ಷರು ಅಂಜಮ್ಮ , ಬಸಮ್ಮ ಇತರರುಇದ್ದರು.
ವರದಿ – ಸಂಪಾದಕೀಯ