ನಮ್ಮ ಬೀದರ ಜಿಲ್ಲೆಯ ಪ್ರತಿಭಾವಂತ ಸೇವಕ, ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ಶ್ರಮಜೀವಿ….

Spread the love

ನಮ್ಮ ಬೀದರ ಜಿಲ್ಲೆಯ ಪ್ರತಿಭಾವಂತ ಸೇವಕ, ನಿಸ್ವಾರ್ಥ ಮನೋಭಾವದಿಂದ ದುಡಿಯುತ್ತಿರುವ ಶ್ರಮಜೀವಿ….

ಯೋಗ್ಯತೆ ಇರೋರಿಗೆ ಯೋಗ ಖಂಡಿತಾ ಬಂದೇ ಬರುತ್ತೆ,ಇದು ಸತ್ಯ. ಈ ಮಾತನ್ನು ಹಲವು ಬಾರಿ ಕೇಳಿರುತ್ತೇವೆ, ಓದಿರುತ್ತೇವೆ ಅಥವಾ ಅನುಭವಿಸಿರುತ್ತೇವೆ. ಈ ವಾಕ್ಯವನ್ನು ಈಗ್ಯಾಕೆ ನೆನಪಿಸಿಕೊಂಡಿದ್ದು ಯಾಕೇ ಗೊತ್ತೇ? ಎಂದರೆ ಇದೇ  ಈ ಮೇಲಿನ ಮಾತನ್ನು ಅಕ್ಷರಶಃ ಈದಿಗ ನಿಜ ಮಾಡುವಲ್ಲಿ ಅಂದರೆ ನಿಜ ಜೀವನದಲ್ಲಿ ದಾಪುಗಾಲು ಹಾಕುತ್ತಿರುವ ಸಾಹಿತ್ಯ ಮತ್ತು ಸಮಾಜಿಕ, ಪರಿಸರ, ಸಾಂಸ್ಕೃತಿಕ ಲೋಕದಲ್ಲಿ ಸದ್ಯ ಮಿಂಚುತ್ತಿರುವ ಕಲ್ಯಾಣ ನಾಡಿನ ಪ್ರತಿಭೆ ನಿಸ್ವಾರ್ಥ ಸೇವಕ ಸಂಗಮೇಶ ಎನ್ ಜವಾದಿಯವರು. ಬೀದರ ಜಿಲ್ಲೆಯ ಚಿಟಗುಪ್ಪಾ ತಾಲ್ಲೂಕಿನ ಕೊಡಂಬಲ ಎಂಬ ಊರಿನಿಂದ ಬಂದು ಇಂದು ಈ ಕನ್ನಡ ನಾಡಿನಲ್ಲಿ ಸಾಹಿತ್ಯ ಮತ್ತು ಸಮಾಜಿಕ, ಪರಿಸರ  ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹಗಲಿರುಳು ನಿಸ್ವಾರ್ಥ ಸೇವಾ ಕಾರ್ಯಗಳು ಮಾಡುತ್ತಾ ನೆಲೆನಿಂತಿದ್ದಾರೆ. ಹೀಗೆ ಸಂಗಮೇಶ ಎನ್ ಜವಾದಿಯವರ ಪಾಲಿಗೆ ಬಂದ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಸಹಿಸಿಕೊಂಡು ಸಮಾಜಕ್ಕಾಗಿ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ನಿಶ್ಚಯಿಸಿ. ತನು-ಮನ-ಧನದಿಂದ ದುಡಿಯುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಮುನ್ನಡೆ ಹೆಜ್ಜೆಹಾಕುತ್ತಾ ನೊಂದವರ ಬಡವರ ಕಣ್ಣೀರು ಹನಿ ಒರೆಸುತ್ತಾ, ದಯವೇ ಧರ್ಮದ ಮೂಲ ಸಿದ್ಧಾಂತವನ್ನು ಜನಮನಕ್ಕೆ  ತಲುಪಿಸುತ್ತಾ, ಕೃಷಿ ಕಾಯಕ ಸೇವೆ ಮಾಡುತ್ತಿದ್ದಾರೆ. ಈ ಮೂಲಕವೇ ಸಮಾಜಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿ ಸರ್ವ ಜನಾಂಗದ ಹಿತವನ್ನು ಬಯಸುವ ಮೂಲಕ  ಹಂತಹಂತವಾಗಿ ಸಮಾಜಿಕ ಕ್ಷೇತ್ರದಲ್ಲಿ ಮೇಲೇರುತ್ತಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡಿರುವವರು ಮತ್ತು ಮಾಡುತ್ತಿರುವವರು ಸಹ ಇಂದಿನ ಕಾಲಕ್ಕೂ ಸೇರಿದಂತೆ ಸರ್ವಕಾಲಕ್ಕೂ ಪ್ರಸ್ತುತರಾಗಿರುವುದು ನೋಡುತ್ತೇವೆ. ಅದೇ ರೀತಿ ಜವಾದಿಯವರ ಸೇವೆ ಸಹ ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಪಡೆದಿದೆ. ಹಾಗಾಗಿ ಸಮಾಜ ಸೇವೆ ಎಂಬುದು ಸುಲಭದ ಕೆಲಸವಲ್ಲ, ಖಾಸಗಿ ಕಾಯಕ ವೃತ್ತಿಯನ್ನು ಬಿಟ್ಟು, ಸಮಾಜ ಸೇವೆಯ ಮೂಲಕ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ,ಬಡವ,ನೊಂದವರನ್ನು ವಿಶೇಷವಾಗಿ ಬಡ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿ ಶ್ರಮಿಸುತ್ತಿದ್ದಾರೆ. ಅಂದಹಾಗೆ ಬಡ ಸಮುದಾಯವನ್ನು ಗುರುತಿಸಬೇಕಾದರೆ ಸಾಹಿತ್ಯ ಮುಖ್ಯವಾಗುತ್ತದೆ. ಸಮಾಜ ಅಭಿವೃದ್ಧಿಗೆ ಸಾಹಿತ್ಯವು ಕಾರಣವಾಗುತ್ತದೆ. ಈ ಸಾಹಿತ್ಯ ಜವಾದಿಯವರ ಹತ್ತಿರ ನೆಲೆಯೂರಿ ಜನಮನ್ನಣೆ ಪಡೆಯುತ್ತಿದೆ.ನನಗಲ್ಲ, ನಮಗೆ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ನಾವು ಕೇಳಿರುತ್ತೇವೆ. ನಾವು “ನನಗಾಗಿ’ ಬದುಕುವುದಕ್ಕಿಂತ “ನಮಗಾಗಿ’ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ಹಿನ್ನೆಲೆ ನಮಗೆ  ಸೇರಿದಂತೆ ಸರ್ವರಿಗೂ ಸಾಮಾಜಿಕ ತುಡಿತ ಇರುವುದು ಅಗತ್ಯ. ಅದಕ್ಕಾಗಿ ಯುವ ಸಮಾಜಕ್ಕೆ ಸಮಾಜದ ಮೇಲಿನ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ರೂಢಿಸಿಕೊಂಡು ಮುನ್ನುಗ್ಗಿ ಸೇವಾ ಚುಟುವಟಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸರ್ವರ ಹಿತಕ್ಕಾಗಿ ಸಮಾಜದಲ್ಲಿ ಅನ್ಯಾಯ ಎದುರಾದಾಗ ಅದರ ವಿರುದ್ಧವಾಗಿ ಧ್ವನಿಯಾಗಿ ನಿಂತು. ನ್ಯಾಯಕ್ಕಾಗಿ ಹೋರಾಡುತ್ತಿರುವ, ಸಾಮಾಜಿಕ ಕಾರ್ಯಕರ್ತ. ಇದೊಂದು ವೃತ್ತಿಯಲ್ಲ ಎಂದು ತಿಳಿದು. ನಿಸ್ವಾರ್ಥ ಮನೋಭಾವನೆಯಿಂದ ಸಮಾಜದ ಒಗ್ಗಟ್ಟು, ಸಾಮರಸ್ಯ ಕಾಪಾಡಲು ಹಗಲಿರುಳು ಎನ್ನದೆ ಸೇವಾಕಾರ್ಯಗಳಲ್ಲಿ ತಲ್ಲೀನರಾಗಿರುವ  ಸಂಗಮೇಶ್ ಜವಾದಿಯವರ ಸೇವೆ ಅನನ್ಯ. ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಮತ್ಯಾವುದರಲ್ಲೂ ಇಲ್ಲ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಈ ಮಾತು ಸತ್ಯ. ಈ ನಿಟ್ಟಿನಲ್ಲಿ ಹೇಳಬೇಕೆಂದರೆ ಅಭಿವೃದ್ಧಿಯ ಕನಸು ಹೊತ್ತು ಬಂದ ಸಂಗಮೇಶ ಎನ್ ಜವಾದಿಯವರ ಸೇವೆ ಅಜರಾಮರವಾದದ್ದು. ಒಬ್ಬ ಸಮಾಜಿಕ ಸೇವಕನಾಗಿ ಈ ಎತ್ತರಕ್ಕೆ ಬೆಳಯುವ ಈ ದಾರಿಯಲ್ಲಿ ಬಹಳಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದ್ದಾರೆ ಮತ್ತು ಈಗಲೂ ಅನುಭವಿಸುತ್ತಿದ್ದಾರೆ. ಆದರೆ ಎಂದಿಗೂ ನಿರಾಸೆಯಂತೂ ಖಂಡಿತ ಆಗಲಾರದ ಘನ ವ್ಯಕ್ತಿತ್ವ ಇವರದು. ಸೇವಕರಿಗೆ ಇರಬೇಕಾದ ತಾಳ್ಮೆ, ಯೋಗ್ಯತೆ, ಸಮಯಪ್ರಜ್ಞೆ ಮತ್ತು ಪ್ರತಿಭೆ ಎಲ್ಲವನ್ನೂ ಇವರ ಮುಖದಲ್ಲಿ ಸದಾ ಕಾಣುತ್ತೇವೆ. ಭವಿಷ್ಯದಲ್ಲಿ  ಒಬ್ಬ ನಿಸ್ವಾರ್ಥ ಸೇವಕ ಸಾಹಿತಿಯಾಗಿ  ಇವರ ಕೀರ್ತಿ ಬಾನಂಗಳಕ್ಕೆ ಬೆಳಗಲಿ ಎಂದು ಬಯಸುತ್ತಾ, ಇನ್ನು ಹೆಚ್ಚಿನ ಸಾಧನಾ ಸೇವೆ ಈ ನಾಡಿಗೆ ಮಾಡಲೆಂದು ಶುಭ ಹಾರೈಸುತ್ತೇವೆ. ಸಾಹಿತಿ, ಪತ್ರಕರ್ತ, ಸಮಾಜಿಕ ಸೇವಕ,ಪರಿಸರ ಸಂರಕ್ಷಕ,ಅಂಕಣಕಾರ, ಹೋರಾಟಗಾರ,ಸಂಘಟಕ,ಸಾಂಸ್ಕೃತಿಕ ವಕ್ತಾರ ವಲಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನಮಾನಸದಲ್ಲಿ ನೆಲೆಯೂರಿದ ಸರಳ ಸ್ನೇಹ ಜೀವಿ,ಸೌಜನ್ಯಾ ಮೂರ್ತಿ, ಬಡವರ ನೊಂದವರ ಕರುಣಾಮೂರ್ತಿ, ನಿಷ್ಕಲ್ಮಶ – ನಿಷ್ಕಳಂಕ ಸಮತವಾದಿಯಾಗಿರುವ ಶರಣ ಸಂಗಮೇಶ ಎನ್ ಜವಾದಿಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಆತ್ಮೀಯ ಪ್ರಗತಿಪರ ವೈಚಾರಿಕ ಚಿಂತಕರು, ಲೇಖಕ,ಬಸವ ತತ್ವ ನಿಷ್ಠರು, ಸಾಹಿತಿ, ಸಂಘಟಕ, ಹೋರಾಟಗಾರ, ಶರಣ ಸಾಹಿತ್ಯ ಪರಿಷತ್ತು, ಜಾನಪದ ಪರಿಷತ್ತು ಚಿಟಗುಪ್ಪ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಕರುನಾಡು ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ದೇಹಾಂಗದಾನ ಜಾಗೃತ ಸಮಿತಿ ಬೀದರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿರುವ ಶರಣ ಸಂಗಮೇಶ ಎನ್ ಜವಾದಿ ಅವರಿಗೆ  ಜನುಮ ದಿನದ ಹಾರ್ದಿಕ ಶುಭಾಶಯಗಳು..

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *