ಶಿವಮೊಗ್ಗ: ನಗರದ ನಿದಿಗೆ ಕೆರೆ ಅಂಗಳದಲ್ಲಿ ನಿರ್ಮಿಸಿದ್ದ ಕಟ್ಟಡ ತೆರವುಗೊಳಿಸುತ್ತಿರುವ ಸ್ಥಳಕ್ಕೆ, ರೈತರ ಅಪೇಕ್ಷೆ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

Spread the love

ಶಿವಮೊಗ್ಗ: ನಗರದ ನಿದಿಗೆ ಕೆರೆ ಅಂಗಳದಲ್ಲಿ ನಿರ್ಮಿಸಿದ್ದ ಕಟ್ಟಡ ತೆರವುಗೊಳಿಸುತ್ತಿರುವ ಸ್ಥಳಕ್ಕೆ, ರೈತರ ಅಪೇಕ್ಷೆ ಮೇರೆಗೆ ಭೇಟಿ ನೀಡಿ ಪರಿಶೀಲನೆ ಡೆಸಲಾಯಿತು.

ಸರಕಾರದ ಆದೇಶದಂತೆ ನಿದಿಗೆ ಕೆರೆಯಂಗಳದಲ್ಲಿ ಕಟ್ಟಡ ತೆರವು ಗೊಳಿಸುತ್ತಿರುವ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಅಚ್ಚುಕಟ್ಟು ವ್ಯಾಪ್ತಿಯ ನಿದಿಗೆ ಕೆರೆಯಲ್ಲಿ ದೋಣಿ ವಿಹಾರ ನಡೆಯುತ್ತಿರುವ ಸ್ಥಳೀಯ ಅಭಿವೃದ್ಧಿ ಸಂಸ್ಥೆಗಳು ಸರಕಾರದ ಆದೇಶ ಮತ್ತು ನಿಯಮವನ್ನು ಉಲ್ಲಂಘಿಸಿದ್ದು, ಇದರಿಂದ ಅಕ್ಕ ಪಕ್ಕದ ರೈತರ ಜಮೀನು ಮತ್ತು ತೋಟಗಳಿಗೆ ಹಾನಿಯಾಗುತ್ತಿದ್ದು, ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಕಳೆದೆರಡು ವರ್ಷದ ಹಿಂದೆ ರೈತರ ಹೋರಾಟದ ಫಲವಿಂದು ನೆರವೇರುತ್ತಿದೆ. ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಾಗೂ ರೈತರು ಹಾಜರಿದ್ದರು. #ಪವಿತ್ರ_ರಾಮಯ್ಯಅಧ್ಯಕ್ಷರು  #ಭದ್ರಾಅಚ್ಚುಕಟ್ಟುಪ್ರದೇಶಾಭಿವೃದ್ಧಿ_ಪ್ರಾಧಿಕಾರ.

ವಿಶೇಷ ವರದಿಗಾರ – ಮಹೇಶ ಶರ್ಮಾ

Leave a Reply

Your email address will not be published. Required fields are marked *