ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ನ್ಯಾಯಕ್ಕಾಗಿ ಇಂದು ತಾವರಗೇರಾ ಪಟ್ಟಣದ ನಾಡ ಕಚೇರಿ ಮುಂದೆ ಧರಣಿ,

Spread the love

ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ನ್ಯಾಯಕ್ಕಾಗಿ ಇಂದು ತಾವರಗೇರಾ ಪಟ್ಟಣದ ನಾಡ ಕಚೇರಿ ಮುಂದೆ ಧರಣಿ,

ಯಾರಿಗೆ ಬಂತು ? ಎಲ್ಲಗೆ ಬಂತು ! 47 ರ ಸ್ವಾತ್ಯಾಂತ್ರ್ಯ ? !! ಅಮಾಯಕ ಮುಸ್ಲಿಂ ಮಹಿಳೆಗೆ ಘೋರ ಅನ್ಯಾಯವನ್ನು ಖಂಡಿಸಿ ಕೋರ್ಟ ಆಜ್ಞೆ ಉಲ್ಲಂಘಿಸಿ ಅಪರಾದಿಗಳನ್ನು ಬಂಧಿಸದೆ ನನಗೆ ನ್ಯಾಯ ಒದಗಿಸುವಲ್ಲಿ ವಿಫಲತೆಯನ್ನು ಖಂಡಿಸಿ ಇಂದು ತಾವರಗೇರಾ ನಾಡ ಕಛೇರಿ ಮುಂದೆ ಧರಣಿ. ಆಶಾಭೀ ಗಂ. ರಾಜೇಸಾಬ ನಡುವಿನಮನಿ ಸಾ | ಕಿಡದೂರು ಗ್ರಾಮ ಪಂ. ಕಿಲಾರಹಟ್ಟಿ ತಾವರಗೇರಾ ಪೋಲಿಸ್ ಠಾಣಾ ವ್ಯಾಪ್ತಿ ಇದ್ದು, ನನ್ನ ಜಾಗದ ಕಾಗದ ಪತ್ರಗಳು ನನ್ನ ಹೆಸರಿನಲ್ಲಿದ್ದು ಗ್ರಾಮದ ಮತೀಯವಾದಿಗಳು ಜಾತಿ ಧರ್ಮದ ಅಮಲಿನಲ್ಲಿ ನಾನು ಮುಸ್ಲಿಂ ಎಂಬ ಕಾರಣಕ್ಕೆ ದ್ವೇಷ ಕಾರುವ ಮೂಲಕ ಕಾಮಲೆಕಣ್ಣಿನಿಂದ ನನ್ನ ಜಾಗವನ್ನು ಗೌಂವಠಾಣ ಎಂದು ಬಲತ್ಕಾರದಿಂದ ಆಕ್ರಮವಾಗಿ (ಎನ್.ಆರ್.ಜ.) ಅಂಗನವಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ರಾಮಣ್ಣ ದಾಸರ ಪಿ.ಡಿ.ಓ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಇಲಾಖೆಯ ಅನುಮತಿ ಪಡೆಯದೆ ಕಟ್ಟಡ ಕಟ್ಟಲಿಕ್ಕೆ ಬೆಂಬಲಿಸಿ ಬಡ ಮುಸ್ಲಿಂ ಮಹಿಳೆಗೆ ಘೋರ ಅನ್ಯಾ ಮಾಡಿದ್ದಾರೆ ” ಮಾಹಿತಿ ” ಸ.ನಂ. 16/2 3 -27 ಗುಂಟೆ ಭೂಮಿ ಮೌಲಸಾಬ ತಂಜುಸೇನ ನಾಯಕ ತಾವರಗೇರಾ ಸಾಕಿಡದೂರು ತನ್ನ ಭೂಮಿಯನ್ನು 1994-95ರಲ್ಲಿ ಎಂ . ನಂ . = / 2 / 16-9-1995ರಲ್ಲಿ ನಿವೇಶನ ರೈತರಿಗೆ ಹಂಚಲು 1 ಎಕರೆ ಭೂಮಿ ರಾಜ್ಯಪಾಲರ ಹೆಸರಿಗೆ ನೊಂದಾಯಿಸಲಾಗಿದೆ . ನನ್ನ ಪ್ಲಾಟ್ ಸ.ನಂ. 181/2/16/2 ಓಸ್ ಪಿ .1 ರಲ್ಲಿ ಬರುತ್ತದೆ ಎಂದು ಸರ್ವೆಯವರೂ ಗೌರಾಣಕ್ಕು ಈ ಜಾಗಕ್ಕೂ ಸಂಬಂಧವಿಲ್ಲವೆಂದು ಹಿಂಬರಹ ನೀಡಿದರೂ 15 ವರ್ಷಗಳಿಂದ ವಾಸ ಸ್ವಾಧಿನ ಮಾಲಿಕಳಾಗಿದ್ದೇನೆ. ಪಿ.ಡಿ.ಓ. ರಾಮಣ್ಣ ದಾಸರ ಸುಳ್ಳು ದಾಖಲೆ ಮಾಹಿತಿ ನೀಡಿ ಮತಾಂದರಿಗೆ ಬೆಂಬಲವಾಗಿ ಇದರಿಂದಲೇ ಕಾಮಗಾರಿ ಮಾಡಿಸುತ್ತಿದ್ದಾನೆ. ಇವರ ಅವವ್ಯಾರಗಳು ತನಿಖೆ ಮಾಡಬೇಕು . 15 ವರ್ಷದಿಂದ ವಾಸ , ನಾನೆ ವಾರಸುದಾರರೆಂದು ತಿಲಾರಹಟ್ಟಿ ಪಂಚಾಯತಿ ಅಧಿಕಾರಿಗಳೇ ದಾಖಲೆ ನೀಡಿದ್ದಾರೆ. ದಾಖಲೆಗಳು ನಮ್ಮ ಮನೆಯಲ್ಲ ಹುಟ್ಟಲು ಸಾಧ್ಯವೇ? ” ಇಲ್ಲಿಯವರೆಗೆ ತೆರಿಗೆ ಕರ ಕಟ್ಟಿದ್ದೇನೆ ಎಂಬುವದಕ್ಕೆ ದಾಖಲೆಗಳನ್ನು ತೊರಿಸುವ ಒಬ್ಬ ಜನ ಪ್ರತಿನಿಧಿ ಸುಳ್ಳು ದಾಖಲೆ ಸೃಷ್ಟಿಸಿದ್ದೇಂದು ಶಂಖ್ಯ ವ್ಯಕ್ತಪಡಿಸಿ ಬೆಂಬಲಿಸುವದು ನೋಡಿದರೆ ದೇಹ ದಂಗಾರದ್ದು ಒತ್ತಾಟ ಕಿವಿಗೆ ಅವರೂ ಹೇಳಿದ್ದೆ ವೇದವಾಕ್ಯ ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಿಸಿ ಅವಮಾನಿಸಿದ್ದು ಖಂಡಿಸುತ್ತಿದ್ದೇನೆ. ಮತೀಯವಾದಿಗಳು ಸುಮಾರು 7 , 8 , ಜನ ಗುಂಪು ಕಟ್ಟಿಕೊಂಡು ಬಂದು ಕಟ್ಟಡ ಕಟ್ಟವದು ಬೇಡವೆಂದಾಗ ಅವಾಚ್ಯ ಮಾತಿನಿಂದ ನಿಂದಿಸಿ ಮೈ ಕೈ ಮುಟ್ಟಿ ಎಳೆದಾಡಿದ್ದಾರೆ. ಗುಂಡಾ ಗಿರಿಯಿಂದ ನನ್ನ ಜಾಗದಲ್ಲಿ ಬಿಲ್ಡಿಂಗ್ ಕಟ್ಟಿದ್ದಾರೆ. ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ದೂರ ನೀರಾಕರಿಸಿದರು. ಮೇಲಾಧಿಕಾರಿಗಳಿಗೆ ದೂರಿದರೂ ವಿಚಾರಣೆ ಮಾಡದೆ ಯಾವುದೇ ಕ್ರಮ ಕೈಗೊಂಡಿಲ್ಲ . ಅನಿವಾರ್ಯವಾಗಿ ಕುಷ್ಟಗಿ ನ್ಯಾಯಾಲಯದಲ್ಲಿ ಖಾಸಗಿದೂರು ರಕ್ಷಣೆ ಮತ್ತು ತಡೆ ಆಜ್ಞೆ ನೀಡ ಬೇಕೆಂದು ವಿನಂತಿಸಿದಾಗ ತಡಾಜ್ಞೆ ಮತ್ತು ರಕ್ಷಣೆ ನೀಡಿದ ಕುಷ್ಟಗಿ ನ್ಯಾಯಾಲಯ 7 ಜನರ ಮೇಲೆ ಎಫ್.ಐ.ಆರ್ . ದಾಖಲಿಸುವಂತೆ ನಿರ್ದೇಶನ ಮಾಡಿದರೂ ಆಜ್ಞೆ ಪಾಲಿಸಲಿಲ್ಲ ರಕ್ಷಣಕೂಡ ನೀಡಿರುವುದಿಲ್ಲಾ ಅಪರಾಧ ಸಂಖ್ಯೆ : 075/2022 ಪ್ರವಿ.ವ . ದಿ ॥ 8-7-2020 ರಂದು ಕಲಂ ಐಪಿ.ಸಿ. 1860 ( ಯು ) / 5-427 , 806 , 504 , 149 , 354 , 441 , 1 ) ಹನುಮಂತಪ್ಪ ತಂ.ಹುಲಗಪ್ಪ ಅಂಬಿಗೇರ 2 ) ಬೈರಡ್ಡಿಗೌಡ ತಂ.ಚನ್ನನಗೌಡ ಸಣ್ಣಗೌಡ್ರು 3 ) ರಾಮಣ್ಣ ಶ್ಯಾಮಣ್ಣ ದಾಸರ ಗೋತಗಿ ಪಿ.ಡಿ.ಓ. 4 ) ನರಸಪ್ಪ ತಂ.ದುರುಗಪ್ಪ ಆಶ್ಯಾಳ 5 ) ಹನುಮಂತಪ್ಪ ತಂ.ಬಸಪ್ಪ ಅಂಬಿಗೇರ 6. ವೀರಭದ್ರಪ್ಪ ತಂ.ಬಸಪ್ಪ ಕುಂಬಾರ ಅಪರಾಧವಾಗಿದ್ದರು ಜನಪ್ರತಿನಿಧಿ ಯೊಬ್ಬರ ಮೌಕಿಕ ಆದೇಶಕ್ಕೆ ಬೆಲೆ ಕೊಟ್ಟರೆ ಹೊರತು ಕೋರ್ಟಿ ಆಜ್ಞೆ ಧಿಕ್ಕರಿಸಿದರು . ಕಟ್ಟಡ ಕಾಮಗಾರಿ ತಡೆಯದಾ ಈ ಕಾರಣಕ್ಕಾಗಿ ನನಗೆ ನ್ಯಾಯ ರಕ್ಷಣೆ ಮತ್ತು ಕಟ್ಟಡ ಕೆಲಸ ನಿಲ್ಲಿಸಿದಂತೆ ಒತ್ತಾಯಸಿ ದಿನಾಂಕ : 3-8-2022 ರಂದು ಬುಧವಾರ ನಾಡ ಕಛೇರಿ ಮುಂದ “ ಧರಣಿ ” ಮಾಡುತ್ತಿದ್ದೇನೆ ಸಾರ್ವಜನಿಕರು ಪ್ರಗತಿಪರರು ನನ್ನ ನ್ಯಾಯಯುತವಾದ ಹೋರಾಟಕ್ಕೆ ಬೆಂಬಲಿಸ ಬೇಕೆಂದು ವಿನಂತಿ . ವಂದನೆಗಳೊಂದಿಗೆ .. ಬೇಡಿಕೆಗಳು : 1 ) ರಾಮಣ್ಣ ದಾಸರು ಪಿ.ಡಿ.ಓ. ಸರಕಾರದ ನಿಯಮ ಉಲ್ಲಂಘಗಿಸಿ ಇಲಾಖೆ ಅನುಮತಿ ಪಡೆಯದ ( ಎನ್.ಆರ್.ಜಿ. ) ಬೀಲ್ಡಿಂಗ್ ಕಟ್ಟಿಸುತ್ತಿದ್ದು ಆಕ್ರಮ ಅಪವಾರಗಳ ಬಗ್ಗೆ ತನಿಖೆ ಮಾಡಿ ಅಮಾನತ್ ಮಾಡಬೇಕು ( ಎಫ್.ಐ.ಆರ್ . ಆಗಿದೆ ) 2 ) ಉಮಾದೇವಿ ಗ್ರಾಮ ಪಂಚಾಯತ ಸದಸ್ಯರುಗಂಡನ ಮೂಲಕ ಅಧಿಕಾರ ಚಲಾಯಿಸುತ್ತಿದ್ದು , ಈಕಟ್ಟಡ ಕಾಮಗಾರಿ ಇವರಿಮಾಡಿಸುತ್ತಿದ್ದು ಕೂಡಲೆ ಸದಸ್ಯತ್ವವನ್ನು ರದ್ದು ಗೊಳಿಸಬೇಕು . ( ಎಫ್.ಐ.ಆರ್ . ಆಗಿದೆ ) 3 ) ನ್ಯಾಯಾಲಯದ ತಡೆಆಜ್ಞೆ ಆದೇಶ ಉಲ್ಲಂಘಿಸಿದ ಪಿ.ಡಿ.ಓ. ಸಂಭಂಗಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು 7 ಜನ ಅಪರಾಧಿಗಳನ್ನು ಬಂಧಿಸಬೇಕು ನನಗೆ ನ್ಯಾಯ ಒದಗಿಸಬೇಕು . ( ಎಫ್.ಐ.ಆರ್ , ಆಗಿದೆ ) ತಮ್ಮ ನೊಂದಾ ಮಹಿಳೆ ಆಶಾಭಿ ಗಂ । ರಾಜಸಾಟ ನಡುಲಮನಿ ಸಾ ॥ ಕಿಡದೂರು ತಾಕುಷ್ಟಗಿ ಜಿ/ಕೊಪ್ಪಳ ಪ್ರಗತಿಪರ ಸಂಘಟನೆಗಳ ಒಕ್ಕೂಟ , ತಾವರಗೇರಾ ಪಟ್ಟಣದ ಪ್ರಗತಿಪರ ಸಂಘಟಕರು  ಹಾಗೂ ಸಂಘ ಸಂಸ್ಥೆಯ ಅಧ್ಯಕ್ಷರು ಜೊತೆಗೆ ಈ ಹೋರಾಟಕ್ಕೆ ಬೆಂಬಲ ನೀಡಿದರು..

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *