ಶೀರ್ಷಿಕೆ : ವರದಕ್ಷಿಣೆ ಪಿಡುಗು

Spread the love

ಶೀರ್ಷಿಕೆ : ವರದಕ್ಷಿಣೆ ಪಿಡುಗು

ವರದಕ್ಷಿಣೆಯ ಭೂತದ ಕಥೆಯ ಹೇಳಲಿ,, ನಾ,, ಯ್ಯಾಂಗ,,!

ಹೆಣ್ಣುಮಕ್ಕಳ ಜೀವ ತೆಗೆಯುವ ದು:ಖದ ಈ ಕಥೆಯ,,,!

ಹೆಣ್ಣುಮಕ್ಕಳ ಜೀವ ತೆಗೆಯುವ ಕಣ್ಣೀರಿನ ಕಥೆಯಾ,,!

ಹೆಣ್ಣು ಹೆತ್ತರೆ ಹುಣ್ಣು ಎಂಬುದು ನಿಜವಾಗೈತಿ,,!

ಹಣ್ಣು ಹಣ್ಣು ಮುದುಕಗ ಹೆಣ್ಣು ಕೊಡುವುದು ಬಂದೈತಿ,,,!! 1!!

 

ಹಣಕ್ಕಾಗಿ ಇಂದು ಹೆಣ್ಣುಗಳ ಹೆಣ ಆಗುತೈತಿ,,,!

ಸಾಲಿ ಓದಿದ ಬುದ್ದಿವಂತರು ಹೆಚ್ಚು ಕೇಳತಾರ..!

ವರದಕ್ಷಿಣೆಯೆಂದರೆ ಇವರು ಬಾಯಿ ಬಿಡುತಾರ,,!

ನೌಕರಿ ಇದೆಯಂತ ಹೆಚ್ಚಿಗೆ ನಕ್ರ ಮಾಡುತಾರ..!! 2!!

 

ಸಾಹುಕಾರನ ಮಗಳಿಗೆ ಸಾಲು ಹಚ್ಚತಾರ,,!

ದಡ್ಡರಿಗೆ ದುಡ್ಡಿನಾಸೆಯ ಹುಚ್ಚು ಹಿಡಿಸ್ಯಾರ,,,!

ಬಡವರ ಹೆಣ್ಣುಮಕ್ಕಳು ಕಣ್ಣಿರು ಹಾಕಿ ಕೊರಗಿ ಸಾಯುತಾರ,,,!

ಹೆಣ್ಣುಮಕ್ಕಳು ಹುಟ್ಟೊದು ಬ್ಯಾಡಂತ ಬಡವರು ಕೈಯ ಮುಗಿತಾರ,,!! 3 !!

 

ದುಡ್ಡು ಇದ್ದವ ದರ್ಬಾರ ಮಾಡಿ ಮದುವೆ ಮಾಡುತಾನ..!

ಮಗಳಿಗಾಗಿ ಮನಿ ಹೊಲ ಬಂಗಾರ ಎಲ್ಲಾ ಕೊಡುತಾನ,,!

ಇಲ್ಲದ ಬಡವರು ಅದನ್ನು ನೋಡಿ ಕಣ್ಣೀರು ಹಾಕುತಾರ,,!

ಮಗಳ ಮದುವೆ ಮಾಡೋದು ಹ್ಯಾಂಗ ಅಂತ ಚಿಂತೆ ಮಾಡುತಾರ,,!! 4 !!

ಮಗಳು ಮನಿಯಾಗ ಇದ್ದರ ಕೆಟ್ಟ ಹೆಸರ ಅಂತ ಗೋಳಾಡುತ್ತಾರ,,,!

ಸಾಲ ಶೂಲ ಮಾಡಿ ವರದಕ್ಷಿಣೆ ನೀಡಿ ಮದುವೆ ಮಾಡುತಾರ,,,!

ಸಾಲದ ಶೂಲಕ್ಕೆ ಬಿದ್ದು ತಾವು ಸಾಯುತಾರ,,,!

ದಿನವಿಡೀ ಸಾಲ ತೀರಿಸಲು ಜೀವಂತ ಹೆಣವಾಗತಾರ..!! 5!!

 

ಹಣದಾಸೆಗೆ ಹಿಡಿದ ಹುಚ್ಚರು ಹೆಚ್ಚಿಗೆ ಹಣ ಕೇಳುತಾರ,,!

ದಿನವಿಡಿ ಕಿರಿಕಿರಿ ಕೊಟ್ಟು  ಮಗಳ ಜೀವ ಹಿಂಡುತಾರ,,!

ಮಾತು ಕೇಳದಿದ್ದರೆ ಬೆಂಕಿ ಹಚ್ಚಿ ಬೂದಿ ಮಾಡುತಾರ,,!

ಯಾರಿಗೆ ಗೊತ್ತು ಆಗದ್ಹಾಂಗ ಮುಚ್ಚಿಯಿಡುತಾರ,,!! 6!!

 

ಕೆಟ್ಟ ಆರೋಪ ಹೊರಿಸಿ ಸತ್ತಾಳಂತಾರ,,!

ಕೊಲೆ ಮಾಡಿ ಹೆಣ ಮಾಡಿ ಬೇರೆ ಮದ್ವೇ ಯಾಗುತಾರ..!!

ವರದಕ್ಷಿಣೆ ಪಿಡುಗು ತಂದೆ ತಾಯಿ ಕೊರಗು ಹೇಗಿದೆ ಈ ಕಥೆಯು,.

ಬುದ್ದಿವಂತರೇ ಮನುಷ್ಯರಾಗಿ ವರದಕ್ಷಿಣೆಗೆ ಆಸೆ ಮಾಡಬ್ಯಾಡ್ರೀ ನೀವು..!! 7!!

 

✍️ ಹನುಮಂತಪ್ಪ ಕಿಡದೂರು @ ನಾರಿನಾಳ

ತಾ || ಕುಷ್ಟಗಿ ಜಿ|| ಕೊಪ್ಪಳ.

Leave a Reply

Your email address will not be published. Required fields are marked *