ಬಂಜರು ಭೂಮಿ ಒಡಲು ತುಂಬಿದ ನರೇಗಾ,,,,,
ಕನಕಗಿರಿ:ತಾಲೂಕಿನ ಹುಲಿಹೈದರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನುಮನಾಳ ಗ್ರಾಮದ ಸ.ನಂ 106 ರ ಸರಕಾರಿ ಭೂಮಿ ಯಲ್ಲಿ ಅದೊಂದು ಬೀಳು ಬಿದ್ದ 53 ಎಕರೆ ವಿಸ್ತಾರದ ಸರಕಾರಿ ಭೂಮಿ, ಅಲ್ಲಿ ಮುಳ್ಳು ಕಂಠಿಗಳು, ಜಾಲಿ ಗಿಡಗಳು ಬೆಳೆದು ಕಸ ತುಂಬಿಕೊಂಡ ಅಪ್ರಯೋಜಕ ಭೂಮಿಯಾಗಿತ್ತು ಮತ್ತು ಭೂಮಿಯು ಇಳಿಜಾರು ಪ್ರದೇಶದಲ್ಲಿ ಇದ್ದದ್ದರಿಂದ ಅಲ್ಲಿ ಬಿದ್ದ ಮಳೆ ನೀರು ವೇಗವಾಗಿ ರೈತರ ಜಮೀನು ಸೇರಿ ರೈತರ ಬೆಳೆಗಳಿಗೆ ಹಾನಿಯುಂಟಾಗುತಿತ್ತು.ಇಂತಹ ಅಪ್ರಯೋಜಕ ಭೂಮಿಯಲ್ಲಿ 5 ಮೀಟರ್ ಉದ್ದ, 1 ಮೀಟರ್ ಅಗಲ ಮತ್ತು 1 ಮೀಟರ್ ಅಡಿ ವಿಸ್ತೀರ್ಣದ ಒಟ್ಟು 400 ಟ್ರಂಚ್ ಗಳನ್ನು ನರೇಗಾ ಯೋಜನೆಯ ಕೂಲಿಕಾರರಿಂದ ತೆಗೆಸುವುದರ ಮೂಲಕ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ತಡೆದು ತೇವಾಂಶ ಸಂರಕ್ಷಿಸಿ ಆ ಮೂಲಕ ಸುತ್ತಮುತ್ತಲಿನ ಸ್ಥಳಗಳಲ್ಲಿ ಅಂತರ್ಜಲ ಹೆಚ್ಚಿಸುವಲ್ಲಿ ಮತ್ತು 2941 ಮಾನವ ದಿನಗಳನ್ನು ಸೃಜಿಸುವುದರ ಮೂಲಕ ಇಲಾಖೆ ಗ್ರಾಮದ ರೈತರಿಗೆ ಕೂಲಿ ಕೆಲಸ ನೀಡುವಲ್ಲಿ ಯಶಸ್ವಿ ಆಗುವದಲ್ಲದೆ ಮಳೆ ರಾಯನ ಕೃಪೆಯಿಂದ ಬಂಜರು ಭೂಮಿಯಲ್ಲಿ ನೀರು ತುಂಬಿರುವ ಕಾರಣ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಬಂಜರು ಭೂಮಿ ಒಡಲು ತುಂಬಿದಂತಾಗಿದೆ ಸಾರ್ವಜನಿಕರು. ಕೋಟ್ :1 “ಗ್ರಾಮಸ್ಥರ ಮನವಿಯನುಸಾರ ಮುಂದಿನ ದಿನಗಳಲ್ಲಿ ಹುಣಸೆ, ನೆಲ್ಲಿ, ಆಲ, ಅರಳಿ, ಬಸರಿ, ಕರಿಜಾಲಿ,ಬಿಲ್ವಪತ್ರೆ, ಹೊಂಗೆ, ಸಿಹಿಹುಣಸೆ, ಬೇವು ಇತ್ಯಾದಿ ಸಸಿಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ನೆಟ್ಟು ಆ ಮೂಲಕ ಮಾದರಿ ನೆಡುತೋಪು ನಿರ್ಮಾಣ ಮಾಡಿ ಗ್ರಾಮದ ಪರಿಸರವನ್ನು ಹಸಿರಾಗಿಸುವ ಗುರಿಯನ್ನು ಇಲಾಖೆ ಹೊಂದಿದೆ.” (ಎನ್. ಬಸವರಾಜ್ ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ಗಂಗಾವತಿ) ಕೋಟ್ 2 “ನಮ್ಮಲ್ಲಿರುವಂತಹ ಸರಕಾರಿ ಪಾಳು ಭೂಮಿಗಳನ್ನು ಗುರುತಿಸಿ, ಅಂತಹ ಭೂಮಿಗಳನ್ನು ಉಪಯೋಗಿಸಿಕೊಂಡು ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡುವುದು ಮತ್ತು ಸಸಿ ನೆಟ್ಟು ಪರಿಸರವನ್ನು ಹಸಿರುಗೊಳಿಸುವ ಕೆಲಸ ಮಾಡುತ್ತಿದ್ದೇವೆ, ಅಂತಹ ಒಂದು ಕೆಲಸ ಹನುಮನಾಳ ಗ್ರಾಮದ ಸ.ನಂ 106 ರಲ್ಲಿ ನಡೆದಿರುವುದು ನಮ್ಮ ಯೋಜನೆಗೆ ಸಿಕ್ಕ ಗೆಲುವಾಗಿದೆ.” (ಕು.ಕೆ.ವಿ. ಕಾವ್ಯರಾಣಿ ಪ್ರೊಬೆಸ್ನರಿ ಎ.ಸಿ. ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು)
ವರದಿ – ಆದಪ್ಪ ಮಾಲಿ ಪಾಟೀಲ್