ಅಮೃತ ನಡಿಗೆ ಯಶಸ್ವಿಗೊಳಿಸಿ: ಶಿವರಾಜ್ ತಂಗಡಗಿ.
ಕನಕಗಿರಿ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವು ಅಮೃತ ನಡಿಗೆ ಎಂಬ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಅಮೃತ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಾಜಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು. ಅವರು ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶನಿವಾರ 75ನೇ ಸ್ವಾತಂತ್ರ್ಯ ದಿನೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಪಕ್ಷದ ವತಿಯಿಂದ ನಡೆಸಬೇಕಿರುವ ಅಮೃತ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಕುರಿತು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪೂರ್ವ ಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದಿ. 13. ರಂದು 75ನೇ ಸ್ವಾತಂತ್ರೊತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಮ್ಮ ಪಕ್ಷದ ವತಿಯಿಂದ ನವಲಿ ಜಿಲ್ಲಾ ಪಂಚಾಯತಯಲ್ಲಿ ಪಾದಯಾತ್ರೆ ಮಾಡಲು ಹಮ್ಮಿಕೊಂಡಿದೆ, ಹೊಸ ಜೀರಾಳ ಕಲ್ಗುಡಿಯಿಂದ ನವಲಿಯ ವರೆಗೆ ವಾಯ್ ಹಳೇ ಕಲ್ಗುಡಿ , ಚಿಕ್ಕಡಂಕನಕಲ್ , ಹಿರೇಡಂಕನಕಲ್, ಚಿರ್ಚನಗುಡ್ಡ, ಚಿ.ತಾಂಡ, ಆದಾಪುರ ಗ್ರಾಮಗಳ ಮುಖಾಂತರ ಪಾದಯಾತ್ರೆ ಸಾಗಲಿದೆ ಸದರಿ ಪಾದಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಪಡೆಯುವುದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಗಂಗಾಧರ ಸ್ವಾಮಿ, ವೀರೇಶ ಸಮಗಂಡಿ, ಅಮರೇಶ ಗೋನ್ನಾಳ, ಸಿದ್ದಪ್ಪ ನೀರಲೂಟಿ, ಶರಣಬಸಪ್ಪ ಭತ್ತದ, ಬಸವಂತಗೌಡ ಪಾಟೀಲ್, ರಾಮನಗೌಡ ಬುನ್ನಟ್ಟಿ, ಮಲ್ಲಿಕಾರ್ಜುನಗೌಡ ಪಾಟೀಲ್, ವಿರುಪಾಕ್ಷಿಗೌಡ ಪಾಟೀಲ್, ಪ.ಪಂ.ಸದಸ್ಯರು ಅನಿಲಕುಮಾರ ಬಿಜ್ಜಳ, ಶರಣಗೌಡ ಪಾಟೀಲ್, ನೂರಸಾಬ ಗಡ್ಡಿಗಾಲ್, ರಾಜಸಾಬ ನಂದಾಪುರ, ಸಿದ್ದೇಶ ಕೆ, ಕಂಠರಂಗಪ್ಪ ನಾಯಕ, ರಾಖೇಶ ಕಂಪ್ಲಿ , ರವಿಶಂಕರ್ ಪಾಟೀಲ್ ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರು , ಕಾರ್ಯಕರ್ತರು ಇದ್ದರು.
ವರದಿ – ಆದಪ್ಪ ಮಾಲಿ ಪಾಟೀಲ್