ತಾಯಂದಿರ ದಿನಾಚರಣೆಯ ಪ್ರಯುಕ್ತವಾಗಿ ಉಗಮ ಚೇತನ ಟ್ರಸ್ಟ್ ಚಿತ್ತಾರ ಸ್ಟಾರ್ ಹಾಗೂ ಅಚಿವರ್ಸ್ ಅಕಾಡೆಮಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು
ಇಂದು ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಜ್ ಬಳಿಯ ಉದ್ಯಾನವನದಲ್ಲಿ ತಾಯಂದಿರ ದಿನಾಚರಣೆಯ ಪ್ರಯುಕ್ತವಾಗಿ ಉಗಮ ಚೇತನ ಟ್ರಸ್ಟ್ ಚಿತ್ತಾರ ಸ್ಟಾರ್ ಹಾಗೂ ಅಚಿವರ್ಸ್ ಅಕಾಡೆಮಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಲಾಯಿತು ವೃಕ್ಷ ರಕ್ಷತಿ ರಕ್ಷಿತಃ ಅಕ್ಷರಾಂ ಶಂ ಸತ್ಯವಾದ ಮಾತು ಎಂದು ಡಾಕ್ಟರ್ ಭಾನುಪ್ರಕಾಶ್ ಶರ್ಮಾ ರವರು ಹೇಳಿ ಈ ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು ಈ ಜಗತ್ತಿನಲ್ಲಿ ಬೆಲೆಕಟ್ಟಲಾಗದ ಆಸ್ತಿ ತಾಯಿ ಭೂಮಿತಾಯಿ ಪ್ರಕೃತಿ ಮಾತೆ ಇವರುಗಳಿಗೆ ನಾವು ಮೊದಲು ನಮಿಸಬೇಕು ಈಗ ನಮ್ಮಲ್ಲಿ ಗಿಡಗಳ ಬೆಲೆ ಹಾಗೂ ಕಾಡುಗಳ ಬೆಲೆ ಸಹ ನಮಗೆ ತಿಳಿಯುತ್ತಿದೆ ಯಾಕೆಂದರೆ ಆಕ್ಸಿಜನ್ ಕೊರತೆಯಿಂದಾಗಿ ಮನುಷ್ಯನನ್ನು ಈ ಮಹಾಮಾರಿ ಕೊರೊನಾ ಬಲಿ ತೆಗೆದುಕೊಳ್ಳುತ್ತಿದೆ ಇದರಿಂದ ಬದುಕಲು ಆಕ್ಸಿಜನ್ ನಮಗೆ ಈಗ ಮುಖ್ಯವಾಗಿದೆ ಎಷ್ಟೋ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ನಾವುಗಳು ಮಾನವರು ಈಗಿನ ಪರಿಸ್ಥಿತಿಯಲ್ಲಿ ಮರಗಿಡಗಳನ್ನು ಬೆಳೆಯಲು ಖಾಲಿ ಜಾಗಗಳು ಸಿಗುತ್ತದೆಯೋ ಅಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಮಕ್ಕಳಿಗೂ ಜನರಿಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು ಈ ಕಾರ್ಯಕ್ರಮವನ್ನು ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ ಸುಮಾರು ಶ್ರೀರಂಗಪಟ್ಟಣ ಸುತ್ತಮುತ್ತಲಿನ ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷರಾದಂತಹ ಡಾಕ್ಟರ್ ರಾಘವೇಂದ್ರರವರು ಹೇಳಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಶ್ವಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಭಾನುಪ್ರಕಾಶ್ ಶರ್ಮಾರವರು ಹಾಗೂ ಉಗಮ ಚೇತನ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಎಚ್ಎನ್ ಪ್ರಿಯ ರಮೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಂಬರಂ ಸಮಾಜಸೇವಕರಾದ ಬಾಳೆಹಣ್ಣು ಮಂಜು ಟ್ರಸ್ಟಿನ ಸದಸ್ಯರಾದ ರಾಣಿ ಅವರು ರವಿ ಪುರುಷೋತ್ ಅಚೀವರ್ಸ್ ಅಕಾಡೆಮಿಯ ಅಧ್ಯಕ್ಷರಾದ ಡಾಕ್ಟರ್ ರಾಘವೇಂದ್ರ ಸಮಾಜದ ಬಗ್ಗೆ ಕಳಕಳಿ ಇರುವ ವಿದ್ಯಾರ್ಥಿಗಳಾದ ಆರ್ ಸಿಂಧು ಹರೀಶ್ ಸಮಾಜಸೇವಕರಾದ ದೀಪು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವರದಿ – ಸಂಪಾದಕೀಯ