ಸಿದ್ದಾಪುರ ಪಟ್ಟಣದಲ್ಲಿ ಅನಾಥ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಹೆಗ್ಗೇರಿಯ ರಾಮಿ ಕ್ರಷ್ಣ ನಾಯ್ಕ ಎನ್ನುವ ವ್ರದ್ಧ ಮಹಿಳೆಯನ್ನು ರಕ್ಷಿಸಿ ನಮ್ಮ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆತರಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದಲ್ಲಿ ಕೆಲವು ದಿನಗಳಿಂದ ಅನಾಥ ಸ್ಥಿತಿಯಲ್ಲಿ ವ್ರದ್ಧೆಯೊಬ್ಬಳು ಓಡಾಡುತ್ತಿದ್ದ ಬಗ್ಗೆ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಸೇವಾ ಸಮಿತಿಯ ಪ್ರಮುಖರಾದ ಶಂಕರಮೂರ್ತಿ ನಾಯ್ಕ ರವರು ನನಗೆ ಕರೆಮಾಡಿ ತಿಳಿಸಿದ್ದು ನಾನು ಪೋಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದೆ. ಶಂಕರಮೂರ್ತಿ ನಾಯ್ಕ ರವರು ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿಗಳು ಹೋಗಿ ಈ ವ್ರದ್ಧ ಮಹಿಳೆಯನ್ನು ವಿಚಾರಣೆ ಮಾಡಿ ಪೊಲೀಸ್ ಠಾಣೆಗೆ ಕರೆತಂದು ನನಗೆ ಕರೆ ಮಾಡಿ ನಮ್ಮ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವಂತೆ ವಿನಂತಿಸಿಕೊಂಡರು. ನಾನು ಆಶ್ರಮದಲ್ಲಿ ಇಟ್ಟುಕೊಳ್ಳಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ನಮ್ಮ ಜೊತೆ ಈ ವ್ರದ್ಧ ಮಹಿಳೆಯನ್ನು ನಾವು ಸಿದ್ದಾಪುರದ ಮುಗದೂರಿನಲ್ಲಿ ನಡೆಸುತ್ತಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ನಾವು ಈ ವ್ರದ್ಧ ಮಹಿಳೆಗೆ ಆಶ್ರಯ ನೀಡಿದ್ದೇವೆ. ಈ ಕೆಯು ತನ್ನ ಹೆಸರನ್ನು ರಾಮಿ ಕೃಷ್ಣ ನಾಯ್ಕ, ಊರು ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗೇರಿ ಗ್ರಾಮದವಳು ಎಂದು ಹೇಳುತ್ತಿದ್ದಾಳೆ. ಈಕೆ ವಿಕಲಚೇತನಳಾಗಿದ್ದು ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮದ ಹೆಗ್ಗೇರಿ ಯಲ್ಲಿ ಈಕೆಗೆ ಸರಕಾರದಿಂದ ಮನೆ ಕಟ್ಟಿಕೊಟ್ಟಿದ್ದರು ಆದರೆ ಈಗ ಮನೆಯನ್ನು ತನ್ನ ಸಂಬಂಧಿಯೊಬ್ಬ ಕೆಡವಿ ಹಾಕಿದ್ದಾನೆಂದು ಹಾಗೂ ತನ್ನ ಆಸ್ತಿಯನ್ನು ಕೂಡ ಉಪಯೋಗಿಸುವುದಕ್ಕೆ ಬಿಡುತ್ತಿಲ್ಲವೆಂದು ಹೇಳುತ್ತಿದ್ದಾಳೆ. ಇವಳ ಸಂಬಂಧಿಗಳು ಅಥವಾ ಪರಿಚಯದವರು ಯಾರೇ ಇದ್ದರೂ ಸಿದ್ದಾಪುರ ಪೊಲೀಸ್ ಠಾಣೆಗೆ ಅಥವಾ ನನ್ನ 9481389187, 8073197439 ಈ ನಂಬರಿಗೆ ಸಂಪರ್ಕಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಈಗಾಗಲೆ ಆಶ್ರಮದಲ್ಲಿ 47 ಕ್ಕೂ ಅಧಿಕ ಆಶ್ರಮವಾಸಿಗಳು ಆಶ್ರಯ ಪಡೆದಿದ್ದಾರೆ ಇಂತಹ ಮಾನವೀಯ ಸೇವೆಗೆ ಸಹಾಯ ಸಹಕಾರ ನೀಡುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಹಣ ಸಂದಾಯ ಮಾಡಬಹುದು.
PUNITH RAJKUMAR ASHRAYADHAMA ANATHASHRAMA SEVA SAMITI TRUST
A/C No : 40918142470 IFSC Code : SBIN0040131 Bank Name : State bank of India Branch : Siddapur ಅಥವಾ 9481389187 ಈ ಪೋನ್ ಪೇ ನಂಬರಿಗೆ ಕೂಡ ಕಳುಹಿಸಿ ಕೊಡಬಹುದು. ಡಾ. ನಾಗರಾಜ ನಾಯ್ಕ ರಾಷ್ಟ್ರೀಯ ಅಧ್ಯಕ್ಷರು ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ಸೇವಾ ಸಮಿತಿ ಮುಗದೂರು, ಪೋ. ಕೊಂಡ್ಲಿ, ತಾ. ಸಿದ್ದಾಪುರ ಉ.ಕ-581355 ಮೊ. 9481389187, 8073197439.
ವಿಶೇಷ ವರದಿಗಾರ – ಮಹೇಶ ಶರ್ಮಾ