“ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ” ಜಾಗೃತಿ ಓಟದ ಪೋಸ್ಟರ್ ಸಚಿವರಿಂದ ಬಿಡುಗಡೆ..
ಬೆಂಗಳೂರು ದಿ: ಆಗಸ್ಟ್ 10 ರಂದು ವಿಧಾನ ಸೌಧದ ಸಚಿವರ ಕಛೇರಿಯಲ್ಲಿ “ ಆಂಬುಲೆನ್ಸ್‌ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ( ಪೋಸ್ಟರ್ ) ರಾಜ್ಯ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಕೆ.ಸಿ.ನಾರಾಯಣ ಗೌಡರವರು ಬಿಡುಗಡೆಗೊಳಿಸಿದರು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ್ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪರವರು ಇದೇ ತಿಂಗಳು 15 ರಂದು ಸ್ವಾತಂತ್ರ್ಯ ದಿನದಂದು ಬೆಂಗಳೂರು ಮಹಾನಗರದಲ್ಲಿ “ಆಂಬುಲೆನ್ಸ್‌ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಕುರಿತು ಜಾಗೃತಿಗಾಗಿ ರಾಷ್ಟ್ರಧ್ವಜ ಹಿಡಿದು 21 ಕಿಲೋ ಮೀಟರ್ ಓಟವನ್ನು ಹಮ್ಮಿಕೊಂಡಿದ್ದರ ಜಾಗೃತಿ ಓಟದ ಭಿತ್ತಿಪತ್ರ ಮತ್ತು ಚಿನ್ನೆಯನ್ನು ಬಿಡುಗಡೆಗೊಳಿಸಿ ಅಪಘಾತವಾದಾಗ ಮತ್ತು ಜೀವಕ್ಕೆ ಅಪಾಯವಿದ್ದಾಗ ತುರ್ತು ಸೇವೆ ನೀಡುವ ಆಂಬುಲೆನ್ಸ್‌ಗಳಿಗೆ ದಾರಿ ಬಿಡುವುದು. ನಮ್ಮ ಕರ್ತವ್ಯವೆಂದು ತಿಳಿಯಬೇಕು ಹಾಗೂ ಎಲ್ಲೆ ಅಪಘಾತವಾದರೂ ಅಪಘಾತಕ್ಕೀಡಾದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕು, ಪರೋಪಕಾರಿ ಗುಣಗಳನ್ನು ಬೆಳೆಸಿಕೊಳ್ಳಬೇಕು, ಮೋಹನ್ ಕುಮಾರ್ ದಾನಪ್ಪರವರು ಈ ಹಿಂದೆ ಮಾದಕ ವಸ್ತುಗಳ ವಿರುದ್ಧ ಜಾಗೃತಿಗಾಗಿ ಬೆಂಗಳೂರು ಮತ್ತು ಶಿವಮೊಗ್ಗ ನಗರದಲ್ಲಿ ಮ್ಯಾರಾಥಾನ್ ನಡೆಸಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆಂದು ಸ್ಮರಿಸಿದರು ನಂತರ ಮೋಹನ್ ಕುಮಾರ್ ದಾನಪ್ಪನವರು ಮಾತಾನಾಡಿ ಕಾಲ ಬದಲಾದ ಹಾಗೇ ಮಾನವೀಯತೆಯನ್ನು ಮತ್ತು ನಾವು ಮಾಡಬೇಕಾದ ಕರ್ತವ್ಯಗಳನ್ನು ಮರೆತಿದ್ದೇವೆ. ತುರ್ತು ಚಿಕಿತ್ಸೆಗೆ ತೆರಳುವ ಆಂಬುಲೆನ್ಸ್‌ಗಳಿಗೆ ದಾರಿಬಿಡದೇ ಅಪಾಯದಲ್ಲಿರುವ ಜೀವದ ಜೊತೆ ಆಟ ಆಡುವ ಪ್ರವೃತ್ತಿ ನಿಲ್ಲಿಸಬೇಕೆಂದರು.
ವರದಿ – ಮಹೇಶ ಶರ್ಮಾ