*ಕುದರಿಮೋತಿ ಹುಡುಗನ ‘ಮಾರಿಗಡ’ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ*
ಕುದರಿಮೋತಿ : ಪ್ರತಿಬಿಂಬ ಕ್ರಿಯೇಷನ್ಸ್ ಲಾಂಛನದಲ್ಲಿ ಮಾರೇಶ್ ನಾಯಕನಟನಾಗಿ ಅಭಿನಯಿಸಿರುವ ‘ಮಾರಿಗಡ ’ ಚಲನಚಿತ್ರದ ಧ್ವನಿಸುರುಳಿ ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕೊಪ್ಪಳ ಸಮೀಪದ ಕುದರಿಮೋತಿ ಗ್ರಾಮದಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಕುದರಿಮೋತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದುರ್ಗಮ್ಮ ಧೂಪಂ ವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಅಲೆಮಾರಿ ಬುಡ್ಗ ಜಂಗಮ ರಾಜ್ಯಾಧ್ಯಕ್ಷ ಮಾರಿಯಪ್ಪ ಧ್ವನಿಸುರುಳಿ ಬಿಡುಗಡೆ ಮಾಡಿ ನಮ್ಮ ಜನಾಂಗದ ಯುವಕನ ಚಿತ್ರವನ್ನು ನೋಡಿ ಅವನಿಗೆ ಬೆನ್ನು ತಟ್ಟಿ ಎಂದರು. ವೇದಿಕೆಯಲ್ಲಿ ಅಲೆಮಾರಿ ಹಿರಿಯ ಕಲಾವಿದರಾದ ರಾಮಸ್ವಾಮಿ ಭಾರತಿಗಿ, ಚಿತ್ರದ ಪಿಆರ್ ಓ ಡಾ.ಪ್ರಭು ಗಂಜಿಹಾಳ, ಕಲಾವಿದ ಸಂಗನಗೌಡ ಕುರಡಗಿ, ರಾಜಕುಮಾರ ಪಾಟೀಲ, ಶ್ರೀಶೈಲ ಅಥಣಿ, ದೇವೆಂದ್ರಪ್ಪ ವಿಭೂತಿ, ದೇವಿಹಾಳ, ಚಿನ್ನಪ್ಪ ವಿಭೂತಿ, ಗೋವಿಂದಪ್ಪ ದೇವಿಹಾಳ, ಹನಮಗೌಡ ಪೊಲೀಸ್ ಪಾಟೀಲ, ಮೈಲಾರಪ್ಪ ಯಡವಲ್ಲಿ, ರಾಮಣ್ಣ ಯಡವಲ್ಲಿ, ಗಂಗನಗೌಡ್ರು ಮಾಲಿಪಾಟೀಲ ,ಮಲ್ಲೇಶಪ್ಪ ಧೂಪಂ, ವೈರಾಮಣ್ಣ ಗುಂಡೂರ, ಜಂಬಣ್ಣ ಮಿರಾಲಿ, ಶಿವಲಿಂಗಪ್ಪ ಮಿರಾಲಿ, ಶಿವಕುಮಾರ ಯಡವಲ್ಲಿ ,ಚಿತ್ರದ ಕೋರಿಯೋಗ್ರಾಫರ್ ಅಶ್ಬಕ್ ಸೈಯದ, ನಿರ್ದೇಶಕ, ನಿರ್ಮಾಪಕ ವಿಶ್ವನಾಥ ಮರನೂರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಂಜುನಾಥ ಗಟ್ಟೆಪ್ಪನವರ ನಿರೂಪಿಸಿದರು. ಹೊಸ ಯುವ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ‘ಮಾರಿಗಡ’ ಚಲನಚಿತ್ರದಲ್ಲಿ ಮಾರೇಶ, ಅನನ್ಯ, ರೂಪಾ, ಶಶಿಕುಮಾರ್, ಮಹೇಶ್, ಅಂಬಿಕಾ ಸೇರಿದಂತೆ ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕದ ಕಲಾವಿದರು ಬಣ್ಣ ಹಚ್ಚಿದ್ದಾರೆ. ವಿಶೇಷವಾಗಿ ಇದರಲ್ಲಿ ನಾಯಕನಾಗಿ ಅಭಿನಯಿಸಿರುವ ಮಾರೇಶ್ ನಿಮ್ಮೂರಿನ ಕುದರಿಮೋತಿ ಗ್ರಾಮದ ಬಹುರೂಪಿ ಕಲಾವಿದರ (ವೇಷಗಾರ) ಬುಡಗ ಜಂಗಮ ಕುಟುಂಬದವರಾಗಿದ್ದು ಭಿಕ್ಷಾಟನೆ ಮೂಲಕ ಕಲಾಪ್ರದರ್ಶನ ಮಾಡಿ ಜೀವಿಸುತ್ತಿದ್ದಾರೆ. ರಾಮಾಯಣ, ಮಹಾಭಾರತದಲ್ಲಿನ ಪಾತ್ರಗಳ ವೇಷಧರಿಸಿ ಊರೂರು ಅಲೆದು ಕಲಾಪ್ರದರ್ಶನ ನೀಡುತ್ತಿದ್ದ ಮಾರೇಶ್ ಈ ಚಿತ್ರದ ಮೂಲಕ ಮೊದಲಸಲ ನಾಯಕನಟರಾಗಿ ಅದ್ಭುತ ಅಭಿನಯ ನೀಡಿದ್ದಾರೆ.ಚಿತ್ರವು ಯುವಜನರ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳಿಗೆ ಯಾವರೀತಿಯಾಗಿ ಸ್ಪಂದಿಸುತ್ತಾರೆಂದು ತೋರಿಸಲಾಗಿದೆ. ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತೇವೆ. ನಮ್ಮ ಬ್ಯಾನರಡಿಯಲ್ಲಿ ಮುಂದಿನ ಚಿತ್ರವನ್ನು ಮಾರೇಶ್ ನಿರ್ದೇಶನ ಮಾಡಲಿದ್ದಾರೆ ಎಂದು ನಿರ್ದೇಶಕ ವಿಶ್ವನಾಥ ಹೇಳಿದರು. ಮೊದಲ ಸಲ ನಾನು ಅಭಿನಯಿಸಿದ್ದರೂ ಮೊದಲಿನಿಂದ ವಿವಿಧ ಬಹುರೂಪಿ ವೇಷಗಳಲ್ಲಿ ಅಭಿನಯ ಮಾಡಿರುವ ನನಗೆ ಚಿತ್ರರಂಗ ಹೊಸದಾದರೂ ಚೆನ್ನಾಗಿ ಅಭಿನಯಿಸಿರುವೆ. ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರ ಇದಾಗಿದ್ದು ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಎಂದು ಮಾರೇಶ ಹೇಳಿದರು.. ದಾಂಡೇಲಿ, ಉಳುವಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಸವದತ್ತಿ , ಮುಗದ, ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿವೆ. ಸಂಗೀತ ಸಂಯೋಜನೆ ವಿನಯ ವಿವೇಕ ಮಾಡಿದ್ದಾರೆ. ವಿಜಯಪ್ರಕಾಶ, ಅನುರಾಧಭಟ್ ,ಸಂಚಿತ ಹೆಗಡೆ ಹಾಡುಗಳನ್ನು ಹಾಡಿದ್ದಾರೆ. ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ರಘು ರೂಗಿ, ಸಾಹಿತ್ಯ ವಿಶ್ವನಾಥ ಎಂ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ, ಸಂಕಲನ ದರ್ಶನ ಕುಲಕರ್ಣಿ, ಕೊರಿಯೋಗ್ರಫಿ ವಿ.ನಾಗೇಶ್, ಡಿಆಯ್ ದರ್ಶನ ಕುಲಕರ್ಣಿ, ಸಹ ನಿರ್ದೇಶನ ರಾಕೇಶ್ ಅವರದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಕೋರಿಯೋಗ್ರಾಫರ್ ಅಶ್ಬಕ್ ಸೈಯದರ ಸಾಂಸ್ಕೃತಿಕ ಕಲಾತಂಡದಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.
ವರದಿ – ಡಾ.ಪ್ರಭು ಗಂಜಿಹಾಳ-೯೪೪೮೭೭೫೩೪೬