ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ  KHPT  ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ಶಿರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ, ಕೋವಿಡ್ ಮತ್ತು ಬಾಲ್ಯವಿವಾಹ ನಿಷೇಧ ಜಾಗೃತಿ..

Spread the love

ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ  KHPT  ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ಶಿರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ, ಕೋವಿಡ್ ಮತ್ತು ಬಾಲ್ಯವಿವಾಹ ನಿಷೇಧ ಜಾಗೃತಿ..

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಶಿರಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು KHPT  ಸಹಭಾಗಿತ್ವದಲ್ಲಿ ಕ್ಷಯರೋಗ ಮತ್ತು ಕೋವಿಡ್ ಹರಡುವಿಕೆ ತಡೆಗಟ್ಟುವ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲಾಯಿತು.ಈ ವೇಳೆ ಬಾಲ್ಯವಿವಾಹ ನಿಷೇಧ ಕಾಯ್ದೆಯ ಅರಿವನ್ನು ಕೂಡ ಸಾರ್ವಜನಿಕರಿಗೆ ಮೂಡಿಸಲಾಯಿತು.ವೈದ್ಯರಾದ ಶಿರಗುಪ್ಪಿ PHC  ಡಾಕ್ಟರ್ ಅಭಿಜಿತ್ ಮಾತನಾಡಿ ಕೋವಿಡ್ ಹರಡದಂತೆ ಈ ಮೊದಲು ಕೈಗೊಂಡ ಕ್ರಮಗಳನ್ನು ಮುಂದುವರೆಸಬೇಕು ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆರೋಗ್ಯದಲ್ಲಿ ಏರುಪೇರಾದರೆ ಭಯಭೀತರಾಗದೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.ಬಾಲ್ಯ ವಿವಾಹ ಮಾಡುವದರಿಂದ ಯುವತಿಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗುತ್ತಾರೆ.ಶರೀರದ ಸಶಕ್ತ ಬೆಳವಣಿಗೆ ಆಗದ ಹೊರತು ಮಹಿಳೆ ಗರ್ಭಿಣಿಯಾದ ಸಮಯದಲ್ಲಿ ಖಿನ್ನತೆ,ಮಾನಸಿಕ ಆಘಾತ ಮತ್ತು ತೀವ್ರ ರಕ್ತಸ್ರಾವಗಳಿಂದ ಹೆರಿಗೆಯ ವೇಳೆ ಸಾವನ್ನಪ್ಪುವ ಸಾಧ್ಯತೆ ಇದ್ದು ಯುವಕರಿಗೆ ಇಪ್ಪತ್ತೊಂದು ವರ್ಷ ಮತ್ತು ಯುವತಿಯರಿಗೆ ಹದಿನೆಂಟು ವರ್ಷವಾದಾಗ ಮಾತ್ರ ಮದುವೆ ಮಾಡಬೇಕು ರಕ್ತ ಸಂಭಂಧಗಳಲ್ಲಿ ಮದುವೆ ಮಾಡುವದರಿಂದ ವಿಕಲಚೇತನ ಮತ್ತು ಬುದ್ದಿಮಾಂದ್ಯ ಮಕ್ಕಳು ಜನಿಸುವ ಪ್ರಮಾಣ ಹೆಚ್ಚಾಗಿದ್ದು ರಕ್ತ ಸಂಭಂಧದಲ್ಲಿ ಮದುವೆ ಆಗುವದನ್ನು ಆದಷ್ಟು ತಡೆಯಬೇಕು ಎಂದರಲ್ಲದೆ ಕ್ಷಯರೋಗಕ್ಕೆ ಸೂಕ್ತ ಔಷಧಿ ಮತ್ತು ರೋಗದ ಮೇಲೆ ನಿಗಾವಹಿಸುವದರಿಂದ ಆರು ತಿಂಗಳ ನಿರಂತರ ಚಿಕಿತ್ಸೆ ಮೂಲಕ ರೋಗಿಗಳು ಸಾಮಾನ್ಯ ಸ್ಥಿತಿ ತಲುಪಬಹುದಾಗಿದ್ದು ಕ್ಷಯ ರೋಗಿಗಳು ತಮ್ಮ ಆರೋಗ್ಯದ ಕಡೆ ಗಮನ ಹರಿಸುವದರ ಜೊತೆಗೆ ಸಾರ್ವಜನಿಕರಿಂದ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು ಎಂದು ಹೇಳಿದರು ಈ ವೇಳೆ ವೈದ್ಯರಾದ ಅಭಿಜಿತ, ಎಲ್ ಎಚ್ ವಿ ಎಸ್ ಎ ದಂಡಿನವರ ಕೆ ಎಚ್ ಪಿ ಟಿ ವಾಲೆಂಟಿಯರ್ ರೂಪಾಲಿ ಶಿರಗುಪ್ಪಿಕರ, ಹಾಗೂ ಎಲ್ಲ ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮ

Leave a Reply

Your email address will not be published. Required fields are marked *