ಆಮ್ ಆದ್ಮಿ ಪಕ್ಷ ಕೊಪ್ಪಳ ಎಸಿಬಿ ರದ್ದತಿಯನ್ನು ಸ್ವಾಗತಿಸುತ್ತದೆ.
ಸಿದ್ದರಾಮಯ್ಯ ಮುಖ್ಯಂತ್ರಿಯಾಗಿದ್ದಾಗ ಅವರ ಸರ್ಕಾರವು 2016ರಲ್ಲಿ ಲೋಕಾಯುಕ್ತದ ಅಧಿಕಾರವನ್ನು ಕೊನೆಗೊಳಿಸಿ ಎಸಿಬಿಯನ್ನು ಹುಟ್ಟುಹಾಕಿತ್ತು, ಸರ್ಕಾರದ ಈ ನಡೆಯ ವಿರುದ್ಧ ನಮ್ಮ ಆಮ್ ಆದ್ಮಿ ಪಾರ್ಟಿ ನಾಯಕರು ಎಂಟು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದರು. ನಂತರ ಸಿದ್ದರಾಮಯ್ಯ ಜೊತೆ ಎಎಪಿ ನಿಯೋಗವು ಚರ್ಚಿಸಿದ್ದರೂ ಮಾತುಕತೆ ಸಫಲವಾಗಿರಲಿಲ್ಲ. ಎಸಿಬಿಯ ರಚನೆಯನ್ನು ಪ್ರಶ್ನಿಸಿ ಎಸ್.ಅರ್ ಹಿರೇಮಠ್,ವಕೀಲರ ಸಂಘ,ಪರಿವರ್ತನಾ ಸಮುದಾಯ ಇನ್ನಿತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಭಂದಿಸಿದಂತೆ ಹೈಕೋರ್ಟ್ ಜಸ್ಟೀಸ್ ಬಿ. ವೀರಪ್ಪ, ಜಸ್ಟೀಸ್ ಕೆ.ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತಕ್ಕೆ ಶಕ್ತಿ ತುಂಬಿದ್ದರು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಭ್ರಷ್ಟರನ್ನು ಎಡೆಮುರಿ ಕಟ್ಟಿ ಜೈಲಿಗೆ ಕಳುಹಿಸಿದ್ದರು. ಇಂತಹ ಸಂಸ್ಥೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಲೋಕಾಯುಕ್ತ ಸಂಸ್ಥೆಯ ರಕ್ಕೆ ಪುಕ್ಕ ಕಿತ್ತು ಎಸಿಬಿ ಎಂಬ ಸಾಕು ಕೋಳಿಯನ್ನು ಸ್ಥಾಪಿಸಿದ್ದರು.ಇದು ಸರಕಾರದ ಚಿನ್ನದ ಕೊಳಿಯಾಗಿತ್ತು. ಕೊನೆಗೂ ಮತ್ತೆ ಲೋಕಾಯುಕ್ತಕ್ಕೆ ಶಕ್ತಿ ತುಂಬಲು ನ್ಯಾಯಾಲಯ ಹೇಳಿರುವುದು ಭ್ರಷ್ಟರ ಎದೆಯಲ್ಲಿ ನಡುಕು ಹುಟ್ಟುಹಾಕಿದೆ.ಪ್ರಾಮಾಣಿಕರನ್ನು ಲೋಕಾಯುಕ್ತರಾನ್ನಾಗಿಸಿ ರಾಜ್ಯದಲ್ಲಿ ತಲೆಯೆತ್ತಿರುವ 40ಪರ್ಸೆಂಟ್ ಕಮಿಷನ್ ಭ್ರಷ್ಟರನ್ನು ಜೈಲಿಗೆ ಕಳುಹಿಸಲಿ. ಒಟ್ಟಿನಲ್ಲಿ ಎಸಿಬಿ ರದ್ದತಿ ಎಎಪಿ ಮತ್ತು ಜನ ಸಾಮಾನ್ಯರ ಹೋರಾಟದ ಫಲವಾಗಿದೆ . M.K ಸಾಹೇಬ್ ನಾಗೇಶನಹಳ್ಳಿ ಆಮ್ ಆದ್ಮಿ ಪಕ್ಷದ ಕೊಪ್ಪಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ.
ವರದಿ – ಸೋಮನಾಥ ಹೆಚ್ ಎಮ್