ಮಕ್ಕಳ ಆರೋಗ್ಯ ಸ್ವಾಸ್ಥ್ಯದ ಕಡೆ ಗಮನವಿಡಿ : ಸಚಿವ ಹಾಲಪ್ಪ ಆಚಾರ್ …..
ಯಲಬುರ್ಗಾ : ಇಂದಿನ ಮಕ್ಕಳೇ ದೇಶದ ಮುಂದಿನ ಭವಿಷ್ಯ ಎಂದು ಹಿರಿಯರೇ ಹೇಳಿದ್ದು ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನಹ ರಿಸಬೇಕೆಂದು ಹಾಗೂ ಮಕ್ಕಳ ಸರ್ವತೋಮುಖ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರು ತಿಳಿಸಿದರು. ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರಿನ ಹಿಮಾಲಯ ಕಂಪನಿ ವತಿಯಿಂದ ಯಲಬುರ್ಗಾ ಪಟ್ಟಣದ ಬುದ್ಧ ಬಸವ ಅಂಬೇಡ್ಕರ ಭವನದಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ, ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ತಪಾಸಣಾ ಚಿಕಿತ್ಸೆ ದುಬಾರಿಯಾಗಿದೆ. ಅನೇಕರು ಆರ್ಥಿಕ ತೊಂದರೆಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ತೊಂದರೆ ಅನುಭವಿಸುತ್ತಿದ್ದ, ಬೆಂಗಳೂರಿನಲ್ಲಿ ಹಿಮಾಲಯ ಕಂಪನಿಯವರು ಮಕ್ಕಳ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ವಾಸ್ಥ್ಯ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದು ಕೊಪ್ಪಳ ಜಿಲ್ಲೆಯ ಜನರಿಗೆ ಶ್ಲಾಘನೀಯವಾಗಿದೆ ಎಂದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ, ಅಲಕನಂದ ಮಳಗಿ, ತಾಲೂಕಿನ ತಸಿಲ್ದಾರ್ ರಾದ ಶ್ರೀಶೈಲ್ ತಳವಾರ್, ತಾಪಂ ಇ ಒ ಸ೦ತೋಷ ಪಾಟೀಲ್ ಬಿರಾದಾರ್, ವೈದ್ಯಾಧಿಕಾರಿ ಡಾ.ಸುನೀಲ್ ಚಿತ್ರಗಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೈ.ಪ್ರಕಾಶ ಸೇರದಂತೆ ಮತ್ತಿತರರು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ ಪ್ರಾಸ್ತವಿಕವಾಗಿ ಮಾತನಾಡಿದರು, ಇದೇ ಸಂದರ್ಭದಲ್ಲಿ ಕಾಲೇಜಿನಿಂದ ಆಗಮಿಸಿದ್ದ ಫಲಾನುಭವಿ ಮಕ್ಕಳಿಗೆ ಕಿಟ್ ಗಳನ್ನು ವಿತರಿಸಿದರು, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಸ್ತಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಮುಖಂಡರಾದ ಶಿವಕುಮಾರ್ ನಾಗಲಾಪುರ ಮಠ, ಚನ್ನಬಸಯ್ಯ ಸರ್ ಗಣಾಚಾರ ಮಠ, ಹಿಮಾಲಯ ಕಂಪನಿಯ ಹಿರಿಯ ವ್ಯವಸ್ಥಾಪಕ ಆಂಟಿನ್ ರಾಜ ವ್ಯವಸ್ಥಾಪಕ ಪಾಶ ಸೇರಿದಂತೆ ಆರೋಗ್ಯ ಸೇರಿದಂತೆ ಇನ್ನಿತರರ ಇಲಾಖೆಯು ಅಧಿಕಾರಿಗಳು ಹಿಮಾಲಯ ಕಂಪನಿಯ ಸಿಬ್ಬಂದಿ ವರ್ಗ ಮತ್ತಿತರರು ಭಾಗವಹಿಸಿದ್ದರು.
ವರದಿ – ಹುಸೇನಬಾಷ ಮೋತೆಖಾನ್.