ಅಮೃತ ಸರೋವರ ಕೆರೆಯಂಗಳದಲ್ಲಿ ಮಾಜಿ ಯೋಧರಿಂದ ದ್ವಜಾರೋಹಣ….
ಯಲಬುರ್ಗಾ : 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ಯ ಯಲಬುರ್ಗಾ ತಾಲೂಕಿನಲ್ಲಿ ಅಮೃತ ಸರೋವರ ಅಭಿಯಾನದ ಅಂಗವಾಗಿ ಮುಧೋಳ ಮತ್ತು ಸಂಗನಹಾಳ ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ಎರಡು ಕೆರೆಗಳ ಅಂಗಳದಲ್ಲಿ ಈ ಬಾರಿ ಸ್ವಾತಂತ್ರ್ಯ ಯೋಧರು ಹಾಗೇ ಮಾಜಿ ಸೈನಿಕರಿಂದ ಧ್ವಜಾರೋಹಣ ನೆರವೇರಿಸಲಾಗುತ್ತಿದೆ. ಮುಧೋಳ ಗ್ರಾಮದ ಅಮೃತ ಸರೋವರ ಕೆರೆಯಂಗಳದಲ್ಲಿ ಮಾಜಿ ಸೈನಿಕರಾದ ಮಾನ್ಯ ವಿರುಪಾಕ್ಷಪ್ಪ ಎಸ್.ಅಕ್ಕಿ ಹಾಗೂ ಸಂಗನಹಾಳ ಗ್ರಾಮದ ಅಮೃತ ಸರೋವರ ಕೆರೆಯಲ್ಲಿ ಮಾಜಿ ಸೈನಿಕರಾದ ಮಾನ್ಯ ಸಂಗಪ್ಪ ಡಿ.ಗಡದ ಅವರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಈಗಾಗಲೇ ಕೆರೆಯಂಗಳದಲ್ಲಿ ಎಲ್ಲ ಸಿದ್ದತೆ ಮುಗಿಯುವ ಹಂತಕ್ಕೆ ಬಂದಿದೆ ಅಮೃತ ಸರೋವರ ಅಭಿಯಾನದಡಿ ಸಂಗನಹಾಳ ಮತ್ತು ಮುಧೋಳ ಕೆರೆಯಂಗಳದಲ್ಲಿ ಈ ಬಾರಿ ಧ್ವಜಾರೋಹಣ ನೆರವೇರಲಿದ್ದು, ಎಲ್ಲ ರೀತಿಯ ಸಕಲ ಸಿದ್ದತೆ ಮಾಡಿಕೊಳ್ಳುವುತ್ತಿರುವುದನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿದರು. ಇನ್ನು ಉಳಿದಿರುವ ಕಾಮಗಾರಿಗಳು ತುರ್ತಾಗಿ ಇಂದು ಸಂಜೆ ಒಳಗಾಗಿ ಮುಗಿಯಬೇಕು. ದ್ವಜಾರೋಹಣ ನೆರವೇರಿಸಲಿರುವ ಮಾಜಿ ಯೋಧರಿಗೆ ಇಂದೆ ಆಹ್ವಾನ ಪತ್ರಿಕೆ ನೀಡಬೇಕು. ಇಂದು ನಡೆಯುವ ದ್ವಜಾರೋಹಣ ವಿಜೃಂಭಣೆಯಿಂದ ನಡೆಯಬೇಕು ಎಂದು ತಿಳಿಸಿದರು. ಈ ವೇಳೆ ಗ್ರಾ.ಪಂ ಅಧ್ಯಕ್ಷರು, ಡಿಇಒ, ತೋಟಗಾರಿಕೆ ಇಲಾಖೆ ಸಿಬ್ಬಂದಿ, ತಾಲೂಕು ಐಇಸಿ ಸಂಯೋಜಕರು ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.
ವರದಿ – ಹುಸೇನಬಾಷ ಮೋತೆಖಾನ್