ಕರಮುಡಿ ಎಂ.ಶಾಮಿದ್ ಸಾಬ್ ಮುಲ್ಲಾಗೆ ಭಾರತ ಸೇವಾರತ್ನರಾಷ್ಟ್ರ ಪ್ರಶಸ್ತಿ ಪ್ರಧಾನ,,,,,

Spread the love

ಕರಮುಡಿ ಎಂ.ಶಾಮಿದ್ ಸಾಬ್ ಮುಲ್ಲಾಗೆ ಭಾರತ ಸೇವಾರತ್ನರಾಷ್ಟ್ರ ಪ್ರಶಸ್ತಿ ಪ್ರಧಾನ,,,,,

ಡಾ.ಪಂಡಿತ್ ಪುಟ್ಟರಾಜ ಸೇವಾ ಸಮಿತಿ, ನವದೆಹಲಿ ಹಾಗೂ ಚೇತನ ಫೌಂಡೇಶನ್ ಕರ್ನಾಟಕ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯಲಬುರ್ಗ ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕರು ಸಾಮಾಜಿಕ ಹೋರಾಟಗಾರರಾದ ಕರಮುಡಿ ಎಂ ಶಾಮಿದ್ ಸಾಬ್ ಮುಲ್ಲ ಅವರಿಗೆ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜನಸೇವೆಯೇ ಜನಾರ್ಧನನ ಸೇವೆ’ ಎಂಬ ಗಾದೆಯು ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ.  ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ನಮ್ಮ ರಾಷ್ಟ್ರದಲ್ಲಿ ೮೦ ಕೋಟಿ ಜನಸಂಖ್ಯೆ ಇದ್ದು ಇದರಲ್ಲಿ ಕೇವಲ ಒಂದು ಲಕ್ಷ ಪ್ರಾಮಾಣಿಕರೂ ಸತ್ಯನಿಷ್ಟರೂ ಬುದ್ದಿವಂತರು ಆದ ಜನರನ್ನು ಜನ ಗುರುತಿಸಿ ಅವರಿಗೆ ಸಮಾಜ ಸೇವೆ ಮಾಡುವ ಅವಕಾಶವನ್ನುಂಟು ಮಾಡಿದರೆ ರಾಜಕೀಯ, ಸಾಂಸ್ಕ್ರತಿಕ, ಶ್ಶಕ್ಷಣಿಕ, ಆಧ್ಯಾತ್ಮಿಕ,ಆರೋಗ್ಯವಲಯಗಳಲ್ಲಿ ಹಣ ಪೋಲಾಗದೆ ಜನ ನಾನಾ ಬಗೆಯ ತ್ರಪ್ತಿಯನ್ನು ಅನುಭವಿಸಬಹುದಾಗಿದೆ. ಸಮಾಜ ಸೇವಾ ವಲಯದಲ್ಲಿ ಉತ್ತಮ ಸೇವಾಮನೋಭಾವದವರು ಅಗ್ರ ಸ್ಥಾನವನ್ನಲಂಕರಿಸದಿದ್ದರೆ ಆ ವಲಯದಲ್ಲಿರುವವರು ಸಕಾಲದಲ್ಲಿ ಸ್ಪಂದಿಸಿ ಅಯೋಗ್ಯ ವ್ಯಕ್ತಿಗಳನ್ನು ಸ್ಥಾನ ಪಲ್ಲಟಗೊಳಿಸಿ ಯೋಗ್ಯರನ್ನು ಆ ಸ್ಥಾನಕ್ಕೆ ಆರಿಸಬೇಕು ಕನ್ನಡಪರ ಹೋರಾಟಗಾರರು ನಿಜವಾದ ನಿಸ್ವಾರ್ಥ ಹೋರಾಟಗಾರರು ಸ್ವಚಮನಸ್ಸಿನ ನಿಷ್ಠಾವಂತ ರಾಜಕೀಯ ನಾಯಕರನ್ನು ಆರಿಸಿ ಮತನೀಡಬೇಕು ಹಾಗೂ ಹಣದ ಆಸೆಗೆ ದುಷ್ಟರನ್ನು ಆಯ್ಕೆ ಮಾಡುವುದು ತಪ್ಪು ಎಂದು ಸಮಯದಲ್ಲಿ ತಿಳಿಸಿದರು. ತಾಲ್ಲೂಕನ್ನು ಮುನ್ನಡೆಸುವಂತಹ ನಿಸ್ವಾರ್ಥ ನಾಯಕರನ್ನು ಆಯ್ಕೆ ಮಾಡಿದಾಗ ಮಾತ್ರ ತಾಲೂಕು ಅಭಿವೃದ್ದಿಯಾಗಲು ಸಾದ್ಯವೆಂದರು. ದೂರವಾಣೆ ಮೂಲಕ ಸಂಪ‍ರ್ಕಿಸಿದಾಗ ನಮ್ಮ ಪತ್ರಿಕೆಗೆ ಈ ರೀತಿ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಅಮೂಲ್ಯ ಸೇವೆಗ ಜನರು ಸದಾ ಬದ್ದರಾಗಿರುತ್ತಾರೆ ಎಂಬುಹುದು ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ವೆಬ್ ಚಾನಲ್ ನ ಆಶಯ.  ಶುಭವಾಗಲಿ ಇವರ ಮುಂದಿನ ರಾಜಕೀಯ ಬದುಕು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *