ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ: ಸಂಸದ ಡಿ ಕೆ ಸುರೇಶ್,,,,,
ಬೆಂಗಳೂರು, ಅಗಸ್ಟ್ 14: ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ನಾವು ಉಪಯೋಗಿಸುವ ಎಣ್ಣೆಯೂ ಅಷ್ಟೇ ಪ್ರಮುಖವಾಗಿದ್ದು ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಉತ್ಪಾದಿಸುವ ಎಣ್ಣೆಗಳನ್ನು ಬಳಸುವ ಅಭ್ಯಾಸ ಒಳ್ಳೆಯದು ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು. ನಾಗರಬಾವಿಯಲ್ಲಿ ನಿರ್ಮಿಸಲಾಗಿರುವ ಸಪ್ತಮ್ ಸಂಸ್ಥೆಯ ನಾಲ್ಕನೇ ನೂತನ ಶಾಖೆಯನ್ನು ಭಾನುವಾರ ಆಗಸ್ಟ್ 14ರಂದು ಸಂಸದ ಡಿ.ಕೆ. ಸುರೇಶ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಪ್ತಮ್ ಸಂಸ್ಥೆಯ ಸ್ಥಾಪಕ ಸಿಇಒ ಮನೋಹರ್ ಐಯ್ಯರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಡಿ.ಕೆ .ಸುರೇಶ್ ಕುಮಾರ್ ಅವರು“ ಇಂದಿನ ದಿನದಲ್ಲಿ ಎಲ್ಲವೂ ಕಲಬೆರೆಕೆಯಿಂದ ಕೂಡಿದೆ. ಉತ್ತಮವಾದ ಆರೋಗ್ಯ ಹೊಂದಿರಬೇಕೆಂದರೆ ನಾವು ಸೇವಿಸುವ ಆಹಾರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಉಪಯೋಗಿಸುವ ಎಣ್ಣೆಯೂ ಅಷ್ಟೇ ಪ್ರಮುಖವಾಗಿದೆ. ಇಂದು ಮಾರುಟ್ಟೆಯಲ್ಲಿ ನಾನಾ ರೀತಿಯ ಖಾದ್ಯ ತೈಲಗಳು ಸಿಗುತ್ತವೆ. ಸಾಂಪ್ರದಾಯಿಕ ವಿಧಾನ ಗಳನ್ನು ಬಳಸಿ ಉತ್ಪಾದಿಸುವ ಎಣ್ಣೆಗಳನ್ನು ಬಳಸುವ ಅಭ್ಯಾಸ ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ” ಎಂದು ಹೇಳಿದರು. ಸಪ್ತಮ್ ಸಂಸ್ಥೆಯ ಸ್ಥಾಪಕ ಸಿಇಒ ಮನೋಹರ್ ಐಯ್ಯರ್ ಮಾತನಾಡಿ “ ನಾವು ಎಣ್ಣೆ ತಯಾರಿಕೆಯ ಸಮಯದಲ್ಲಿ ನೈಮರ್ಲ್ಯ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಗುಣಮಟ್ಟದ ಎಣ್ಣೆಯನ್ನು ಉತ್ಪಾದಿಸುತ್ತೇವೆ. ಹಾಗೇ ಸಾಂಪ್ರದಾಯಿಕ ವಿಧಾನ ಬಳಸಿ ಖಾದ್ಯ ತೈಲಗಳನ್ನು ತಯಾರಿಸಲಾಗುತ್ತದೆ. ಇದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗದೆ ಹಾಗೇ ಇರುತ್ತದೆ. ಜೊತೆಗೆ ಈ ರೀತಿಯ ಎಣ್ಣೆಯ ಸೇವನೆಯಿಂದ ಆರೋಗ್ಯಕ್ಕೆ ಕೂಡ ಯಾವುದೇ ಹಾನಿ ಇರುವುದಿಲ್ಲ. ಒಟ್ಟಾರೆ ಸಂಪ್ರದಾಯ, ತಂತ್ರಜ್ಞಾನ ಮತ್ತು ನೂತನ ಸಂಯೋಜನೆ ಇದಾಗಿದೆ” ಎಂದು ತಿಳಿಸಿದರು. ಸಪ್ತಮ್ ಬಗ್ಗೆ: ತೈಲ ಇದು ಸಪ್ತಮ್ ಆಹಾರ ಮತ್ತು ಪಾನೀಯಗಳ ಒಂದು ವಿಶೇಷವಾದ ಖಾದ್ಯ ಹಾಗೂ ಎಸೆನ್ಷಿಯಲ್ ತೈಲ ಬ್ರ್ಯಾಂಡ್ ಆಗಿದೆ. ಸಪ್ತಮ್ ಸ್ಥಾಪಕ ಸಿಇಒ ಮನೋಹರ್ ಅಯ್ಯರ್ ಒಬ್ಬ ವಾಣಿಜ್ಯೋದ್ಯಮಿ ಹಾಗೂ ಹಲವಾರು ಉದ್ಯಮಗಳಲ್ಲಿ ಸಾಕಷ್ಟು ವರ್ಷಗಳ ಅನುಭವ ಹೊಂದಿರುವರಾಗಿದ್ದಾರೆ. ಟೈಮ್ಸ್ ಬ್ಯುಸಿನೆಸ್ ಪ್ರಶಸ್ತಿ ಬೆಂಗಳೂರು, ಐಕಾನ್ಸ್ ಆಫ್ ಇಂಡಿಯನ್ ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ, ರೆಡಿಯೋ ಸಿಟಿ ಅವಾರ್ಡ್ಸ್, ಇಂಡಿಯನ್ ಅಚಿವರ್ಸ್ ಅವಾರ್ಡ್ಸ್ ತಮ್ಮದಾಗಿಸಿಕೊಂಡಿದ್ದಾರೆ.
ವರದಿ – ಹರೀಶ ಶೇಟ್ಟಿ ಬೆಂಗಳೂರು