೭೫ ರ ಸ್ವಾತಂತ್ರ್ಯದ ತಿರಂಗ ಹಾರುತಿದೆ..
ಸಾದಕ ಭಾದಕಗಳ ನಡುವಿನ ಪಯಣ..
ಈ ೭೫ ರ ಸ್ವಾತಂತ್ರ್ಯದ ಮಹೋತ್ಸವ..
ಅಸಮಾನತೆಯ ನಡುವೆ ಸಮಾನತೆಯ…
ಕನಸು ನನಸಾಗುವುದೇ…..
ಬಡವರಿಗೆ ಸಿಗುವುದೇ ಸಂಕಷ್ಟಗಳಿಂದ..
ದೊರೆಯುವುದೇ ಮುಕುತಿ.
ಮಂಗಳಮುಖಿಯರಿಗೆ ಸಿಗುವುದೇ..
ಸ್ವಾತಂತ್ರ್ಯದ ಬೆಳಕು..
ನವಯುವಕರಿಗೆ ಬೇಕು..
ನಿಜವಾದ ದೇಶಭಕ್ತಿ … ಮೂಡಲಿ..
ಪ್ರತಿ ಮನೆಯಲ್ಲಿ ಮೂಡಲಿದೆ..
ತ್ರಿವರ್ಣಧ್ವಜದ ಹಾರಾಟ.
ಮೂಡಿದೆ ಮನದಲ್ಲಿ ದೇಶಭಕ್ತಿ,
ನೋಡಲು ಮನೋಹರ ನಮ್ಮ ದೇಶದ..
ಹೆಮ್ಮೆಯ ಭಾವುಟ.
ಮಕ್ಕಳಿಂದ ಹಿಡಿದು ವಯಸ್ಕರವರೆಗೂ..
ಮೂಡಿದೆ ಹಬ್ಬದ ಸಂಭ್ರಮ
ಅತಿರೇಕವಾಗದಿರಲಿ ದೇಶಭಕ್ತಿ…. ಜೈ ಹಿಂದ್ ….. |
ಜ್ಯೂತಿ ಉಪನ್ಯಾಸ್ಕರು ಮೈಸೂರು…