ಸಂಗನಾಳ ಗ್ರಾಮದಲ್ಲಿ 75ನೇ ಸಂಗೊಳ್ಳಿ ರಾಯಣ್ಣ ಸ್ವತಂತ್ರೋತ್ಸವ ಅಮೃತಾ ಮಹೋತ್ಸವ…
ಸಂಗನಾಳ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಮಂಡಳ ವತಿಯಿಂದ 75ನೇ ಸ್ವತಂತ್ರೋತ್ಸವ ಅಮೃತಾ ಮಹೋತ್ಸವದ ಅಂಗವಾಗಿ ಸಂಗನಾಳ ಗ್ರಾಮದಲ್ಲಿ ನಮ್ಮ ದೇಶದ ಸ್ವಾತಂತ್ರ ಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ದೇಶಕ್ಕಾಗಿ ಅವರ ಪ್ರಾಣವನ್ನು ಪಣಕ್ಕೆ ಇಟ್ಟಂತ ದೇಶಪ್ರೇಮಿಗಳು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಾಗೂ ಈ ನಾಡು ಕಂಡ ಶ್ರೇಷ್ಠ ಕವಿ ಶ್ರೀ ಶ್ರೇಷ್ಠ ಸಂತ ಶ್ರೀ ಕನಕದಾಸರ ವೃತ್ತ ದೇಶಕ್ಕಾಗಿ ತಮ್ಮ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂಥ ಮಹಾನರ ವೃತ್ತಕ್ಕೆ ಸ್ವಚ್ಛತೆ ಮಾಡುವುದರ ಮುಖಾಂತರ ಸ್ವಾತಂತ್ರ ಹೋರಾಟಗಾರರ ವೃತ್ತಕ್ಕೆ ಹೂಗುಚ್ಛ ಹಾಕುವುದರ ಮುಖಾಂತರ ಗೌರವಿಸಿ 75ನೇ ಸ್ವಾತಂತ್ರೋತ್ಸವ ಕಹಳೆ ಮೊಳಗಿಸಲಾಯಿತು.ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಮಂಡಳಿಯವರು ನಾಗರಾಜ್ ಕುರಿತೇಲೆ ದುರ್ಗಪ್ಪ ವೀರೇಶ ಮುಳ್ಳೂರು ಬಸವರಾಜ್ ದನಕಾಯರು ಸೋಮನಾಥ ವೈನಿಗರ್ ದುರ್ಗಪ್ಪ ವೈನಿಗರ್ ಮರಿಯಪ್ಪ ಗಂಗನಾಳ ಸತ್ಯಪ್ಪ ಬೋವಿ ಹನುಮೇಶ್ ವಾಲ್ಮೀಕಿ ಹಾಗೂ ಊರಿನ ಗುರು ಹಿರಿಯರು ಸದಸ್ಯರು ಹಾಗೂ ಇನ್ನೂ ಅನೇಕ ಹಿರಿಯ ಮುಖಂಡರು ಹಾಗೂ ಸಂಗನಾಳ ಮುಖಂಡರು ಹಾಗೂ ಸಂಗೊಳ್ಳಿರಾಯಣ್ಣ ಯುವಕ ಮಂಡಳದ ಸರ್ವ ಸದಸ್ಯರು ಇದ್ದರು.
ವರದಿ – ಸೋಮನಾಥ ಹೆಚ್ ಎಮ್