ತಾವರಗೇರಾ ಪಟ್ಟಣದಲ್ಲೊಂದು ವಿಶೇಷ ಸನ್ಮಾನ ಕಾರ್ಯಕ್ರಮ…..
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 05ನೇ ವಾರ್ಡಿನಲ್ಲಿ ಬರುವ 10ನೇ ಅಂಗನವಾಡಿ ಕೇಂದ್ರದಲ್ಲೊಂದು ವಿಶೇಷ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ವೀರ ಯೋಧರಾದ ಶ್ರೀ ನಾಗರಾಜ ಎಸ್.ಎನ್. ಮೂಲತ ತಾವರಗೇರಾ ಭಾಗದವರಿದ್ದು, ಇದು ನಮ್ಮ ಪಟ್ಟಣಕ್ಕೆ ಹೆಮ್ಮೆಯ ವಿಷೆಯವಾಗಿದೆ. ಇನ್ನೊಂದು ವಿಶೇಷವೆಂದರೆ 10ನೇ ಅಂಗನವಾಡಿ ಕೇಂದ್ರದ ಮುಖ್ಯಸ್ಥೆಯಾದ ಶ್ರೀಮತಿ ಅಮರಮ್ಮ ಗುಬ್ಬಿಯವರು ಇಂತಹ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕು ಹೆಮ್ಮೆಯಾಗಿದೆ. ಈ ಕಾರ್ಯಕ್ರಮ ಉದ್ದೇಶಿಸಿ ಹರ ಘರ ಬದಲಿಗೆ ಹರ ದಿಲ್ ಕಾ ಅಮೃತ್ ಮಹೋತ್ಸವ ಆಚರಿಸೋಣ, ಇದರ ಜೊತೆ ಜೊತೆಗೆ ಚಿಕ್ಕ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಹಾಗೂ ದೇಶ ಭಕ್ತಿಯ ಬಗ್ಗೆ ತಿಳಿಸಬೇಕೆಂದರು. ಶ್ರೀ ನಾಗರಾಜ ಎಸ್.ಎನ್ ರವರು ಈ ವಿಷೆಯದ ಕುರಿತು ಮಾತನಾಡಿದರು. ಇಂದಿನ ದಿನ ಇಡೀ ದೇಶವೆ ತ್ರಿವರ್ಣಮಯ. ಸ್ವಾತಂತ್ರ್ಯೋತ್ಸವ ಆಚರಣೆ ಪ್ರತಿಯೊಬ್ಬ ಭಾರತೀಯನ ಪಾಲಿನ ಹೆಮ್ಮೆಯ ಸಂಗತಿ. ನಮ್ಮ ಈ ಎಲ್ಲಾ ಭಾವನೆಯ ಹಿಂದಿರುವ ತೆರೆಮೆರೆಯ ನಾಯಕ ಸೈನಿಕ. ನಮ್ಮ ದೇಶಭಕ್ತಿ ಅವನ ಕೈಡಿತದಲ್ಲಿದೆ. ನಾವು ಶಾಂತಿಯಿಂದ 75ನೇ ಅಜಾದಿ ಕಾ ಅಮೃತ ಮಹೋತಸ್ವದ ನಿಮಿತ್ಯ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತರಬೇಕಾದರೆ ಅತ್ತ ದೇಶದ ಗಡಿಯಲ್ಲಿ ಇಡೀ ದೇಶಕ್ಕೆ ಕಾವಲಾಗಿರುವ ವೀರಯೋ ಇಲ್ಲ್ವನಂತೆ ತನ್ನ ಹದ್ದುಗಣಿನಿಂದ ವೈರಿಗಳ ನುಸುಳುವಿಕೆಗೆ ತಡೆಹಾಕಿ ನೀತಿರುತ್ತಾರೆ. ಗಡಿಯಲಿ ನಿಂತು ದೇಶ ಕಾಯುವ ದೇಶಕಾಗಿ ಹೋರಾಡುತ ಮಡಿವ ತೊರೆದು ತನ್ನವರ , ಮರೆತು ಎಲ್ಲ ನೋವ ಸದಾ ಹಿಡಿದು ಕೈಯಲಿ ಶಸ್ತ್ರವ ನಿಂತಿಹನು ಮರೆತು ತನ್ನೆಲ್ಲ ಸುಖವ ತೊಟ್ಟಿಹನು ರಾಷ್ಟ್ರ ರಕ್ಷಣೆಯ ಪಣವ ಕಾಳಗಕೆಂದೂ ಸನ್ನದ್ದನಾಗಿ ನಿಂತಿರುವ ವೀರಾವೇಶದಿ ವೈರಿಯ ಮೇಲೆರಗುವ ಎಂದೂ ಮರೆಯಲಾರೆವು ಈ ಬಲಿದಾನ ಓ ಯೋಧ, ನಿನಗಾಗಿಯೇ ಈ ಕವನ ನಿನಗಿದೊ ನಮ್ಮ ನುಡಿ ನಮನ. ನಮ್ಮ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ವೆಬ್ ಬಳಗದವತಿಯಿಂದ ಶುಭ ಸಲ್ಲಿಸಸುತ್ತಿದ್ದೆವೆ. ಈ ಕಾರ್ಯಕ್ರಮದಲ್ಲಿ ಶಿವರಾಜ ಎಸ್.ಎನ್. ವೀರುಪಾಕ್ಷಿ ಪುಂಡಗೌಡ್ರು ಇಂಜಿನಿಯರ, ಸಿದ್ದನಗೌಡ್ ಪುಂಡಗೌಡ್ರು ರವಿ ಆರೇರ್, ಶಿವನಗೌಡ ಪುಂಡಗೌಡ್ರು ಪ.ಪಂ. ಸದಸ್ಯರು, ಹನುಮನಗೌಡ ಕಟ್ಟಿಮನಿ, ಖಾಜಖಾನ ಪಠಾಣ, ಬಾಲರಾಜ ಯಾದವ್, ಕುಮಾರ ಇತರರು ಈ ಕಾರ್ಯಕ್ರಮದಲ್ಲಿ ಪಾಲುಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ – ಸಂಪಾದಕೀಯ.