ನಮ್ಮ ನಡೆ ಅಮೃತ ಭಾರತದೆಡೆಗೆ. ಬಿಜೆಪಿ ಮುಖಂಡರು ವಿಜುಗೌಡ ಪಾಟೀಲ.
ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ ಬೀಜ ಮತ್ತು ಸಾವಯುವ ಅಧ್ಯಕ್ಷರು ಯುವಕರ ಕಣ್ಮಣಿ ಮತ್ತು ಶಿಕ್ಷಣ ಪ್ರೇಮಿ ಹಾಗೂ ಯುವ ನೇತಾರ ಇವರ ನೇತೃತ್ವದಲ್ಲಿ ಪ್ರಧಾನ ಮಂತ್ರಿರವರ ಆಸೆಯಂತೆ 75ನೇ ಸ್ವಾತಂತ್ರೋತ್ಸ ಅಮೃತ ಮಹೋತ್ಸವ ಅಂಗವಾಗಿ ನಮ್ಮ ನಡಿಗೆ ಅಮೃತ ಭಾರತದೆಡೆಗೆ ಬೃಹತ ತ್ರಿವರ್ಣ ಧ್ವಜ ಯಾತ್ರೆಯನ್ನು ವಿಜಯಪೂರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಂಬಾಗಿ ಯಿಂದ ದೇವರಗಣ್ಣೂರ ಗ್ರಾಮದವರೆಗೆ ಪಾದಯಾತ್ರೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಬೃಹತ ಪಾದಯಾತ್ರೆಯ ಕಾರ್ಯಕ್ರಮವನ್ನು ಕಂಬಾಗಿ ಗ್ರಾಮದಿಂದ ಚಾಲನೆ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ವಾದ್ಯ ವೃಂದ ಡೊಳ್ಳು ಕುಣಿತ ತ್ರಿವರ್ಣ ಧ್ವಜದ ಮೆರವಣಿಗೆಯ ಮುಖಾಂತರ ಶಾಲಾ ಕಾಲೇಜಿನ ಮಕ್ಕಳು ಊರಿನ ಗುರು ಹಿರಿಯರು ಅಂತ್ಯತ ಹುಮ್ಮಸಿನಿಂದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಹಿರಿಯ ರಾಜಕಾರಣಿಗಳಾದ ರಮೇಶ ಜಿಗಜಿಣಗಿ. ಆರ್ ಎಸ್ ಪಾಟೀಲ ಬಸವರಾಜ ಬಿರಾದಾರ .ಸಾಬು ಮಾಸ್ಯಾಳ. ಇನ್ನೂ ಹತ್ತು ಹಲವಾರು ನಾಯಕರು ಮತ್ತು ಯುವ ಮುಖಂಡರು ಭಾಗವಹಿಸಿದ್ದರು. ಬಬಲೇಶ್ವರ ಮತಕ್ಷೇತ್ರದ ಜನರಲ್ಲೀ ದೇಶಾಭಿಮಾನ ಮತ್ತು ಭಾವುಟ ನಿಷ್ಠೆ ಎದ್ದು ಕಾಣುವಂತಿತ್ತು ಸುತ್ತಮುತ್ತಲಿನ ಗ್ರಾಮಗಳಾದ ಕಂಬಾಗಿ.ಗುನದಾಳ ಕೆಂಗಲಗುತ್ತಿ ಸಂಗಾಪೂರ .ಬಬಲೇಶ್ವರ. ಬಬಲಾದಿ ದೇವರಗಣ್ಣೂರ. ಮುಂತಾದ ಗ್ರಾಮದಗಳಿಂದ ಹಾಗೂ ಶಾಲಾ ಕಾಲೇಜಿನ ಮಕ್ಕಳು ತಂಡೋಪ ತಂಡವಾಗಿ ಬಂದು ಈ ತಿರಂಗಾ ಪಾದಯಾತ್ರೆಯಲ್ಲಿ ಅಂತ್ಯತ ಹುಮ್ಮಸಿನಿಂದ ಸ್ವ ಹಿಷ್ಠೆಯಿಂದ ಭಾಗವಹಿಸಿ ತಮ್ಮ ದೇಶ ಪ್ರೇಮವನ್ನು ಎಲ್ಲರ ಜೋತೆ ಹಂಚಿಕೊಂಡರು. ನಾಡು. ನುಡಿ. ನೆಲ. ಜಲಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದ ಅನೇಕ ಮಹನಿಯರ ಭಾವಚಿತ್ರವನ್ನು ಮೇರವಣಿಗೆ ಉದ್ದಕ್ಕೂ ಪ್ರದರ್ಶಿಸಲಾಯಿತು.ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ತಾಯನಾಡಿಗೋಸ್ಕರ ನೆಲ ಜಲ ಸಂಸ್ಕೃತಿ ನಾಡು ನುಡಿ ಗೋಸ್ಕರ.ಪ್ರತಿಯೊಬ್ಬರ ತ್ಯಾಗ ಅತಿ ಮಹತ್ವದ್ದು . ಈ ಪಾದಯಾತ್ರೆಯಲ್ಲಿ ಪುಟಾಣಿ ಮಕ್ಕಳ ದೇಶ ಪ್ರೇಮ ಪ್ರತಿಯೊಬ್ಬರಿಗೂ ಮನಕಲಕೂವಂತಿತ್ತು. ಯುವ ಮುಖಂಡರಾದ ಬಾಲರಾಜ ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ ಈ ತಿರಂಗಾ ಪಾದಯಾತ್ರೆ ನಮ್ಮ ಅಮೃತ ಭಾರತದೆಡೆ ಘೋಶ್ಯ ವ್ಯಾಖ್ಯ ಪ್ರತಿಯೊಬ್ಬ ಭಾರತಿಯ ಮನದಾಳದ ಮಾತಾಗಿದೆ ಎಂದರು. ಜಾತಿ ಮತ ಪಂತವನ್ನು ಮೀರಿ ದೇಶ ಭಕ್ತಿ ಪ್ರತಿಯೊಬ್ಬ ಪ್ರಜೆಗು ಮುಖ್ಯವಾಗಿರಬೇಕು.ಗಡಿ ಕಾಯುವ ಯೋಧ ದೇಶಕ್ಕೆ ಅನ್ನ ಹಾಕುವ ರೈತ ದೇಶಕ್ಕೋಸ್ಕರ ಪ್ರಾಣ ನೀಡಿದ ಹೋರಾಟಗಾರರು ಈ ಮೂವರನ್ನು ನಮ್ಮ ಉಸಿರು ಇರುವವರೆಗೂ ಮರೆಯಬಾರದು.ಎಂದು ನುಡಿದು ತಮ್ಮ ದೇಶ ಪ್ರೇಮ ಯೋಧರ ಬಗ್ಗೆ ಕಾಳಜಿ ರೈತರ ಬಗ್ಗೆ ಅಭಿಮಾನ ಹಾಗೂ ಹೋರಾಟಗಾರರ ಬಗ್ಗೆ ತಮ್ಮಲ್ಲಿರುವ ಕಿಚ್ಚನ್ನು ಹೋರಹಾಕಿದರು. ಬಳಿಕ ಹೀರಿಯ ರಾಜಕಾರಣಿಗಳಾದ ಶ್ರೀ ವಿಜುಗೌಡ ಪಾಟೀಲ ಅವರು ಮಾತನಾಡಿ ದೇಶದ ಪ್ರಧಾನ ಮಂತ್ರಿರವರ ಆಸೆಯಂತೆ ಹರ ಘರ ತಿರಂಗಾ ಎಂಬ ಘೋಷ ವಾಕ್ಯ ನೀಜವಾಗಿ ನನ್ನನ್ನು ಬಾವೂಕನನ್ನಾಗಿಸಿದೆ.ಈ ಜನರ ದೇಶ ಪ್ರೇಮ ಮಕ್ಕಳಿಗೆ ಇರುವ ರಾಷ್ಟ್ರ. ನಾಡು. ನುಡಿ. ನೆಲ. ಜಲಕ್ಕಾಗಿ ಈ ಶಾಲಾ ಕಾಲೇಜಿನ ಮಕ್ಕಳು ಗುರು ಹಿರಿಯರು ಗ್ರಾಮದ ಯುವಕರು. ಮಹಿಳೆಯರ. ಮಕ್ಕಳು ತೋರಿಸುವ ಪ್ರೀತಿಗೆ ನಾನೆಂದೂ ಚಿರಋಣಿ ಇವರೆಲ್ಲರೂ ದೇಶದ ಮೇಲೆ ಇಟ್ಟಿರುವ ಪ್ರೀತಿ ಗೌರವ ಈ ಪಾದಯಾತ್ರೆಯಲ್ಲಿ ಸೇರಿರುವ ಜನಸ್ತೋಮವನ್ನು ನೋಡಿ ನಾನು ಮಂತ್ರಮುಗ್ದನನ್ನಾಗಿಸಿದೆ.ಎಂದರು. ಜೋತೆಗೆ ವಿಜುಗೌಡ ಪಾಟೀಲ ಅವರ ಶ್ರೀಮತಿವರು ಮತ್ತು ಮಕ್ಕಳು ಮೊದಲಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.ಬಸವರಾಜ ಬಿರಾದಾರ ಮಾತನಾಡಿ ಪ್ರತಿ ಭಾರತಾಂಬೆ ಮಕ್ಕಳಲ್ಲಿ ದೇಶ ಭಕ್ತಿ ದೇಶ ಪ್ರೇಮ ಬೆಳೆಸುವುದು.ಈ ಕಾರ್ಯಕ್ರಮದ ಮುಖ್ಯಧ್ಯೇಯವಾಗಿದೆ.ದೇಶಕ್ಕಾಗಿ ತ್ಯಾಗ ಬಲಿದಾನ ನೀಡಿದ ಅನೇಕ ಮಹನಿಯರ ಜೀವನ ಚರಿತ್ರೆ ಅವರಿಗಿರುವ ರಾಷ್ಟ್ರ ಗೌರವ ದೇಶಕ್ಕೋಸ್ಕರ ತಮ್ಮ ಜೀವನ ಮುಡಿಪಾಗಿಟ್ಟ ಅನೇಕ ಮಹನಿಯರ ಜೀವನ ಚರಿತ್ರೆಯನ್ನು ಹಿಂದಿನ ಯುವ ಸಮೂಹಕ್ಕೆ ತಿಳಿ ಹೇಳಬೆಕಾಗಿದೆ ನಮ್ಮ ಹೆಮ್ಮೆಯ ಫ್ರಧಾನ ಮಂತ್ರಿಗಳ ಆಯುಷ್ಯ ಆರೋಗ್ಯವನ್ನು ಆ ಭಗವಂತ ಇನ್ನಷ್ಟು ವೃಂದಿಸಲಿ ಇನ್ನಷ್ಟು ದೇಶ ಸೇವೆ ಮಾಡಲು ಅವಕಾಶ ನೀಡಿ ಎಲ್ಲ ಭಾರತೀಯರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ವರದಿ~:ಮೌನೇಶ್ ರಾಥೋಡ್ ವಿಜಯಪುರ